-->
Bookmark

Gadag : ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಹಾಡಿನ ಧ್ವನಿಮುದ್ರಣ

Gadag : 
ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಹಾಡಿನ ಧ್ವನಿಮುದ್ರಣ 

ಗದಗ  : ಅಭಿ ಕ್ರಿಯೇಷನ್ಸ್ ಗದಗ ಅವರ   ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ,  ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿರ್ದೇಶಕ ಅರವಿಂದ್ ಮುಳಗುಂದ ನಿರ್ದೇಶನದ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರಕ್ಕಾಗಿ "ರಾಜಯೋಗ ಬಂದಿದೆ ನಮ್ಮ ಪ್ರೀತಿಗೆ" ಎಂಬ  ಗೀತೆಯ ಧ್ವನಿ ಮುದ್ರಣವು   ಮಲ್ಲಿಕಾರ್ಜುನ ಸಂಶಿ ಸಂಗೀತ ನಿರ್ದೇಶನದಲ್ಲಿ, ಮಲ್ಲಿಕಾರ್ಜುನ ಮತ್ತು ವನಿತಾ ಪರಮೇಶ್ವರ್ ಇವರ ಧ್ವನಿಯಲ್ಲಿ ಎಸ್ ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಿಸಲಾಯಿತು.
     ಈ ಕಿರುಚಿತ್ರವು   ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ   ದಯಾನಂದ.ಜಿ, ಅವರ ಛಾಯಾಗ್ರಹಣದಲ್ಲಿ ಧಾರವಾಡ , ದಾಂಡೇಲಿ, ಕಲಘಟಗಿ, ಗೋವಾ ಸುತ್ತಮುತ್ತ ಒಂದು ವಾರಗಳ ಕಾಲ ಚಿತ್ರಿಕರಣ ನಡೆಯಲಿದೆ.  ಅಕ್ಟೋಬರ್ ತಿಂಗಳಲ್ಲಿ  ಡಾ.ಕಲ್ಮೇಶ್ ಹಾವೇರಿಪೇಟ್ ಅವರ ಹೊಸಚಲನಚಿತ್ರ  ಸೆಟ್ಟೆರಲಿದ್ದು ಅದಕ್ಕಿಂತ ಪೂರ್ವದಲ್ಲಿ ಈ ಕಿರುಚಿತ್ರ ಹೊರತರುತ್ತಿದ್ದೇವೆ.    ಸಮಾಜಕ್ಕೆ ಒಳ್ಳೆಯ ಸಂದೇಶ ಈ ಕಿರುಚಿತ್ರದಲ್ಲಿದೆ.   ಒಂದು ಹಾಡು ಮತ್ತು ಒಂದು ಫೈಟ್ ಕೂಡ ಇದರಲ್ಲಿದೆ. ನಾಯಕ ನಟರಾಗಿ  ಬೆಂಗಳೂರಿನಲ್ಲಿ  ವೈದ್ಯ ವೃತ್ತಿ ಮಾಡುತ್ತಿರುವ ಚಲನಚಿತ್ರ ತರಬೇತಿ ಪಡೆದಿರುವ  ಡಾ.ಕಿರಣಚಂದ್ರ, ನಾಯಕಿಯರಾಗಿ ಶೋಭಾರಾಣಿ, ಸಿಂಧು, ಅಪೂರ್ವ ಭರಣಿ,  ಪೂರ್ಣಿಮಾ, ಅಮೃತಾ , ಸಿದ್ದುಕೃಷ್ಣ,  ಎ.ಚಂದ್ರಶೇಖರ, ಕಿಶನ್ ರಾವ್ ಕುಲಕರ್ಣಿ (ಆನೆಹೊಸೂರ) , ಎನ್ ಎಸ್ ಪಾಟೀಲ್ (ಹೂಲಿ),   ರಾಜೇಶ್ವರಿ, ಕೀರ್ತಿ ಅರವಿಂದ್, ಲಕ್ಷ್ಮೀ ಎಸ್.ಬಿ, ಶಂಭು ಪಾಟೀಲ್, ಗಣೇಶ್ ಜಾಧವ್, ರಾಮು    ಮೊದಲಾದವರು ಅಭಿನಯಿಸಲಿದ್ದಾರೆ. 
           ಕಥೆ, ಸಂಭಾಷಣೆ  ಮಧು ಜೋಶಿ, ಸಾಹಿತ್ಯ ಪ್ರಮೋದ್ ಜೋಶಿ, ಪ್ರಸಾಧನ  ದೇವೇಂದ್ರ ಕಮ್ಮಾರ, ಸಾಹಸ - ಸ್ಟೈಲ್ ಚಂದ್ರು, ಸಂಗೀತ ಮಲ್ಲು ಸಂಶಿ , ಹಿನ್ನಲೆಗಾಯನ ವನಿತಾ ಪರಮೇಶ್ವರ, ಸಂಕಲನ ಸಿದ್ದಾರ್ಥ್ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ.ವೀರೇಶ ಹಂಡಿಗಿ, ಪ್ರಚಾರಕಲೆ ಅವಿನಾಶ್ ಗಂಜಿಹಾಳ, ಸಹಕಾರ  ಮಹಾಂತೇಶ ಹಳ್ಳೂರ, ಸಹ ನಿರ್ದೇಶನ  ಡಾ.ಪ್ರಭು ಗಂಜಿಹಾಳ, ನಿರ್ವಹಣೆ  ರಘು ತುಮಕೂರು, ಆನಂದ್ ಜೋಶಿ,  ಚಿತ್ರಕಥೆ ನಿರ್ದೇಶನ ಅರವಿಂದ್ ಮುಳಗುಂದ ಅವರದಿದೆ. ಶ್ರೀಮತಿ ಸಂಗೀತಾ ಚಂದ್ರಶೇಖರ್, ಶ್ರೀಮತಿ ವಿದ್ಯಾ ಗಂಜಿಹಾಳ, ಶ್ರೀಮತಿ ರೇಖಾ ಸಿದ್ದುಕೃಷ್ಣ ಕಿರುಚಿತ್ರದ ನಿರ್ಮಾಪಕರಾಗಿದ್ದು ಗಣೇಶಚತುರ್ಥಿಗೆ ಬಿಡುಗಡೆ ಮಾಡುವದಾಗಿ ನಿರ್ದೇಶಕ ಅರವಿಂದ ತಿಳಿಸಿದ್ದಾರೆ. 
***
ವರದಿ
ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬
Post a Comment

Post a Comment