-->
Bookmark

Gajendragad : ಮಾಸ್ ಲೀಡರ್ ಸಿದ್ದಪ್ಪ ಬಂಡಿ ಸಮಾಜ ಸೇವೆಯಲ್ಲಿ ಕ್ಲಾಸ್

Gajendragad : 

ಮಾಸ್ ಲೀಡರ್ ಸಿದ್ದಪ್ಪ ಬಂಡಿ ಕ್ಲಾಸ್ ಸಮಾಜ ಸೇವೆ 

ಗಜೇಂದ್ರಗಡ : 
ವೀರಶೈವ ಲಿಂಗಾತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಅವರು ಸಮಾಜ ಸೇವೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ, ಶ್ರಾವಣ ಮಾಸದಲ್ಲಿ ಕೆಲ ಬಡವರಿಗರ ಆಹಾರದ ಕಿಟ್ ನೀಡಿದ್ದಾರೆ. ಅದು ಸಹ ಸದ್ದಿಲ್ಲದೇ, ಯಾರಿಗೂ ತಿಳಿಯದ ಹಾಗೆ ಸಹಾಯ ಮಾಡಿದ್ದಾರೆ. 
೨೦೨೩ರ ಶ್ರಾವಣ ಮಾಸ ಆರಂಭದ ದಿನದಲ್ಲಿ ದಿನ ಬಳಕೆ ವಸ್ತುಗಳನ್ನ ನೀಡಿ ಮಾದರಿಯಾಗಿದ್ದಾರೆ. ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ದಾನ ಧರ್ಮ ಮಾಡಿದರೇ, ಅದರ ಫಲ ದ್ವಿಗುಣವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಸಿದ್ದಪ್ಪ ಬಂಡಿ ಅವರದ್ದು, ಬಡವರಿಗೆ ಸಹಾಯವಾಗಲಿ ಎಂಬ ಧ್ಯೇಯ ಹೊಂದಿದವರು. ಬಡವರಿಗೆ ಸಹಾಯವಾದ್ರೆ, ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ. 
ಬಡವರಿಗೆ ಸಹಾಯವಾಗಲಿ ಎಂಬ ಒಂದೆ ಒಂದು ಉದ್ದೇಶದಿಂದ ಸಹಾಯ ಮಾಡಿದ್ದಾರೆ. ಕಿರಾ ನ್ಯೂಸ್ ನಲ್ಲಿ ಇಂದು ೧೦೦ ನೇ ಸುದ್ದಿ ಪ್ರಕಟಿಸುತ್ತಿದ್ದೇವೆ. ಇದಕ್ಕಿಂತ ಉತ್ತಮ ಸುದ್ದಿ ಮತ್ತೊಂದಿಲ್ಲ ಎಂಬ ಅನಿಸಿಕೆ ನಮ್ಮದು. ಹೀಗಾಗಿ, ಭಗವಂತ ಅವರಿಗೆ ಐಶ್ವರ್ಯ, ಆರೋಗ್ಯವನ್ನ ಕರುಣಿಸಿ, ಮತ್ತಷ್ಟು ಸಮಾಜ ಸೇವೆ ಮಾಡುವಂತೆ ಮಾಡಲಿ ಎಂದು ಅವರಿಂದ ಸಹಾಯ ಪಡೆದವರು ಕಿರಾ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. 
ಇನ್ನೂ, ಕೆಲವರು ಸಮಾಜ ಸೇವೆ ನೆಪದಲ್ಲಿ ಹೆಸರು ಮಾಡುವವರೆ ಹೆಚ್ಚು ಹೀಗಿರುವಾಗ ವೀರಶೈವ ಲಿಂಗಾಯ ಸಮಾಜದ ಅಧ್ಯಕ್ಷ, ಮತ್ತು ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಸಿದ್ದಪ್ಪ ಬಂಡಿ ಅವರ ಕಾರ್ಯಕ್ಕೆ ಎಷ್ಟು ಶ್ಲಾಘಿಸಿದರೂ ಸಾಲದು...
Post a Comment

Post a Comment