-->
Bookmark

Gajendragad : ಮೈಸೂರು ಮಠದಲ್ಲಿ ಶ್ರಾವಣ ಪುರಾಣ : ಸಿದ್ದಪ್ಪ ಬಂಡಿ, ವಿಜಯ ಮಹಾಂತ ಮಹಾಸ್ವಾಮಿ ಚಾಲನೆ

Gajendragad : 

ಮೈಸೂರು ಮಠದಲ್ಲಿ ಶ್ರಾವಣ ಪುರಾಣ : ಸಿದ್ದಪ್ಪ ಬಂಡಿ, ವಿಜಯ ಮಹಾಂತ ಮಹಾಸ್ವಾಮಿ ಚಾಲನೆ 

ಗಜೇಂದ್ರಗಡ : 

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಅವರ ನೇತೃತ್ವದಲ್ಲಿ ಮೈಸೂರು ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಶರಣ ಬಸವೇಶ್ವರರ ಪುರಾಣ ಪ್ರಾರಂಭ ಕಾರ್ಯಕ್ರಮ ನಡೆಯಿತು.  ಮೈಸೂರು ಮಠದ ಜಗದ್ಗುರು ಶ್ರೀ ವಿಜಯ ಮಹಾಂತ ಮಹಾಸ್ವಾಮಿಗಳು ಮತ್ತು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. 
ಪುರಾಣ ಸಮಿತಿ ಅಧ್ಯಕ್ಷರಾದ ಶಿವಕುಮರ್ ಕೊರಧಾನ್ಯಮಠ, ಕಾರ್ಯಾಧ್ಯಕ್ಷರಾದ ಎಸ್. ಎಸ್ ವಾಲಿ, ಇನ್ನುಳಿದಂತೆ ಎಲ್ಲ ಪದಾಧಿಕಾರಿಗಳು ಮತ್ತು ಯುವ ಘಟಕದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು. 
ಪ್ರವಚನಕಾರರಾಗಿ ಕಲ್ಲದೇವರು ಗ್ರಾಮದ ಕುಮಾರಶಾಸ್ತ್ರಿ ಹಿರೇಮಠ, ಗವಾಯಿಗಳಾಗಿ ಶ್ರೀ ಹನುಮಂತ ಕುಮಾರ್ ಮೇಟಿ, ತಬಲಾ ವಾದಕರಾಗಿ ಪ್ರತಾಪ ಕುಮಾರ ಹಿರೇಮಠ ಪುರಾಣ ಕಾರ್ಯಕ್ರಮ ನಡೆಸಿದರು.  ನಗರದ ಎಲ್ಲ ಸಮಾಜದ ಬಾಂಧವರು ಯದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು. 

ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಜಾತ್ಯಾತೀತವಾಗಿ ಮೈಸೂರು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಈ ವರ್ಷವೂ ವೀರಶೈವ ಲಿಂಗಾಯತ ಸಮಾಜದ ನೇತೃತ್ವದಲ್ಲಿ ಪುರಾಣ ಕಾರ್ಯಕ್ರಮ ಆರಂಭವಾಗಿದೆ. ಪ್ರತಿ ನಿತ್ಯವೂ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ. ಭಕ್ತರಿಗೆ ಪ್ರಸಾದ ಸೇವೆಯೂ ಇರುತ್ತದೆ. 
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ನಡೆಯುವ ಪುರಾಣ ಜಾತ್ಯಾತೀತವಾಗಿರುತ್ತದೆ.  ಮುಸ್ಲಿಂ ಬಾಂಧವರಿಂದ ಪ್ರತಿ ಶುಕ್ರವಾರ ಪ್ರಸಾದ ಸೇವೆ ನಡೆಯುವುದು ಮೈಸೂರು ಮಠದ ಮತ್ತೊಂದು ವಿಶೇಷವಾಗಿದೆ. 
ಧಾರ್ಮಿಕತೆ ಉಳಿಸಿ, ಬೆಳೆಸಿ, ಮುಂಬರುವ ಪೀಳಿಗೆಗೆ ಧೈವ ಭಕ್ತಿ ಉಣ ಬಡಿಸಿಸುವ ಕಾರ್ಯ   ಶ್ಲಾಘನೀಯ... 

ವರದಿ : 
ಶಂಕರ ರಾಠೋಡ, ಕಿರಾ ನ್ಯೂಸ್ ಗಜೇಂದ್ರಗಡ.
Post a Comment

Post a Comment