-->
Bookmark

Gajendragad : ವಿದ್ಯಾರ್ಥಿ ಬದುಕಿನ ಹಿಂದೆ ಗುರುವಿನ ಶ್ರಮ ವಿದೆ : ವಸಂತರಾವ‌ ಗಾರಗಿ

Gajendragad : 
ವಿದ್ಯಾರ್ಥಿ ಬದುಕಿನ ಹಿಂದೆ ಗುರುವಿನ ಶ್ರಮ ವಿದೆ :  ವಸಂತರಾವ‌ ಗಾರಗಿ 

ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು 

ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
----
ಗಜೇಂದ್ರಗಡ: 
ಪ್ರತಿ ವಿದ್ಯಾರ್ಥಿಯನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ಗುರುವಿನಲ್ಲಿದೆ. ಆದ್ದರಿಂದ ಗುರುವಿನ ಸೇವೆಯ ಪ್ರಾಮಾಣಿಕತೆಯಿಂದ  ದೇಶಕ್ಕೆ ಒಳ್ಳೆಯದನ್ನು ನೀಡಲು ಸಾಧ್ಯವಿದೆ ಎಂದು ಪಿಯು ಪ್ರಾಚಾರ್ಯ ವಸಂತರಾವ್‌  ಆರ್. ಗಾರಗಿ ಹೇಳಿದರು.

ಪಟ್ಟಣದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಚರಣೆ ಮಾಡಲಾದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರು-ಶಿಷ್ಯರ ಸಂಬಂಧ ತಾಯಿ-ಮಗುವಿನ ಸಂಬಂಧದಂತೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರ ಕೊಡುವುದು ಗುರುವಿನ ಆದ್ಯತೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ ಎಂದರು. ಆದರೆ ಬದುಕು ಕಟ್ಟಿಕೊಂಡ ಮೇಲೆ ಅದನ್ನು ಒಳ್ಳೆಯದಕ್ಕೆ ಸದುಪಯೋಗ ಪಡಿಸಬೇಕು. ಸ್ವಾರ್ಥಕ್ಕಿಂತ ನಿಸ್ವಾರ್ಥ ಸೇವೆಗೆ ಹೆಚ್ಚು ಬೆಲೆ ಇದೆ. ವಿದ್ಯಾರ್ಥಿಗಳು ಗುರುವಿಗೆ ಶಾಲು, ಹೂಹಾರ, ಹಣ್ಣು ನೀಡುವುದಕ್ಕಿಂತ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದೇ ದೊಡ್ಡ ಗೌರವ ಎಂದರು.

ಪದವಿ ಪ್ರಾಚಾರ್ಯ ಬಸಯ್ಯ ಎಸ್. ಹಿರೇಮಠ ಮಾತನಾಡಿ, ಗುರುವಿನ ಋಣ ಎಷ್ಟೂ ತಿರಿಸಿದರೂ ಸಾಲದು. ತಾಯಿಯೇ ಮೊದಲ ಗುರು. ಶಾಲೆಯಲ್ಲಿ ಶಿಕ್ಷಕ ಗುರು ಆದರೆ ಜೀವನಪದ್ಧತಿ ಜೀವಿಸುವ ಕಲೆ ಗುರುವಿನಿಂದ ದೊರಕುತ್ತದೆ. ಅಲ್ಲದೇ ಮಾನವನನ್ನು ಮಹಾ ಮಾನವನ್ನಾಗಿ ಮಾಡುವವರು ಸದ್ಗುರುಗಳು ಎಂದರು.  ಶಿಕ್ಷಕರ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳ ಸಾಧನೆಗೆ ಸ್ಫೂರ್ತಿ ನೀಡುತ್ತದೆ ಹಾಗೂ ಅವರು ಉನ್ನತ ಗುರಿಯತ್ತ ಸಾಗಲು ಪೂರಕವಾಗುತ್ತದೆ ಎಂದರು.

ಅನೇಕ ಉಪನ್ಯಾಸಕರು, ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ಕೆಕ್‌ ಕತ್ತರಿಸುವ ಮೂಲಕ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಈ ವಿದ್ಯಾರ್ಥಿಗಳು ಶಿಕ್ಷಕರ ಭಾವಚಿತ್ರ ಮುದ್ರಿಸಿರುವ ಶಾಲುಗಳನ್ನು ಉಡಗೊರೆಯಾಗಿ ನೀಡಿ ಉಪನ್ಯಾಸಕರನ್ನು ಸನ್ಮಾಸಿದರು. ನಂತರ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯುಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗೋಪಾಲ ರಾಯಬಾಗಿ, ಸಂಗಮೇಶ ವಸ್ತ್ರದ, ರವಿ ಹಲಗಿ, ಮನೋಜ ಕಲಾಲ್, ಬಸವರಾಜ ಸಂಕದಾಳ, ಪ್ರಶಾಂತ ಗಾಳಪೂಜಿಮಠ, ಎಂ. ಎನ್. ಕೊಳ್ಳಿ, ಆರ್. ಪಿ. ಹೋಳಗಿ, ಪ್ರತಿಭಾ ಲಕ್ಷಕೊಪ್ಪದ, ಜಾಸ್ಮಿನ್ ಇಟಗಿ, ವಿಜಯಲಕ್ಷ್ಮಿ ಅರಳಿಕಟ್ಟಿ, ಪ್ರೀತಿ ಹೊಂಬಳ, ಆಶಾಬಿ ಜಾತಗೇರ, ಸಂಗೀತಾ ನಾಲವತವಾಡ, ಶಬಾನಾ ಬೇಗಂ ಚಾಮಲಾಪುರ ಇದ್ದರು.

Post a Comment

Post a Comment