-->
Bookmark

Gajendragad : ಮುಸ್ಲಿಂ ಸಮುದಾಯದ ನಾಯಕರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡಿ: ದಾವಲಸಾಬ ತಾಳಿಕೋಟಿ

Gajendragad :ಮುಸ್ಲಿಂ ಸಮುದಾಯದ ನಾಯಕರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡಿ: ದಾವಲಸಾಬ ತಾಳಿಕೋಟಿ

ಗಜೇಂದ್ರಗಡ: (Oct_092023)
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ದೊಡ್ಡದು. ಸಮುದಾಯದ ನಾಯಕರು ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ಬಾರಿ ನಿಗಮ ಮಂಡಳಿ ಸೇರಿದಂತೆ ಇನ್ನಿತರ ರಾಜಕೀಯ ಸ್ಥಾನಮಾನ ಕಲ್ಪಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಅಂಜುಮಾನ್ ಇಸ್ಲಾಂ ಕಮೀಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ಒತ್ತಾಯಿಸಿದರು.

ರೋಣ ಮತಕ್ಷೇತ್ರದ ಶಾಸಕರಾಗಿರುವ ಜಿ.ಎಸ್.ಪಾಟೀಲ ಅವರು ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅವರ ಜೊತೆ ಸಮುದಾಯ ಸದಾ ಬೆಂಬಲವಾಗಿ ನಿಂತಿದೆ. ಸೋತಾಗಲು ಅವರೊಂದಿಗೆ ಇದ್ದು, ಧೈರ್ಯ ತುಂಬಿದೆ. ಈ ಬಾರಿ ಸಂಪೂರ್ಣವಾಗಿ ಒಂದು ಪಕ್ಷವನ್ನು ಬಹುಮತಕ್ಕೆ ತರುವಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಸಮಾಜದ ನಾಯಕರಿಗೆ ನಿಗಮ ಮಂಡಳಿ ಸೇರಿದಂತೆ ಇನ್ನಿತರ ರಾಜಕೀಯ ಸ್ಥಾನಮಾನ ನೀಡಬೇಕಿದೆ ಎಂದು ಮನವಿ ಮಾಡಿದರು. 

ಗಜೇಂದ್ರಗಡ ಭಾಗದ ಮುಸ್ಲಿಂ ಸಮುದಾಯದ ನಾಯಕರಿಗೆ ಇದುವರೆಗೆ ಯಾವುದೇ ರೀತಿಯ ನಿಗಮ ಮಂಡಳಿ ಸ್ಥಾನ ಸಿಗದೇ ಇರುವುದು, ಈ ಬಾರಿಯಾದರೂ ನಮ್ಮವರಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು. 

ಗಜೇಂದ್ರಗಡ ಭಾಗದ  ಸಮುದಾಯದ ನಾಯಕರಲ್ಲಿ ಅನೇಕರು ವಿವಿಧ ನಿಗಮ ಮಂಡಳಿಗಳ ನಿರ್ದೇಶಕರ ಸ್ಥಾನಗಳ ಆಕಾಂಕ್ಷಿಗಳಿದ್ದು, ಈ ಭಾಗದ ಶಾಸಕರು ನಮ್ಮವರಿಗೆ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ. 

ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ ಚುನಾವಣೆಗಳಲ್ಲಿ ಅವಕಾಶ ನೀಡುವ ಮೂಲಕ ಸಮುದಾಯವನ್ನು ರಾಜಕೀಯವಾಗಿ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಶಾಸಕರು ಮುಂದಾಗಬೇಕಿದೆ ಎಂದು ದಾವಲಸಾಬ್ ತಾಳಿಕೋಟಿ ಮಾಹಿತಿ ನೀಡಿದ್ದಾರೆ.
Post a Comment

Post a Comment