-->
Bookmark

Sudi : ಲೋಕಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಸೂಡಿಯಲ್ಲಿ“ಅತಿರುದ್ರ ಮಹಾಯಾಗ“

Sudi : ಲೋಕಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಸೂಡಿಯಲ್ಲಿ
“ಅತಿರುದ್ರ ಮಹಾಯಾಗ“

ಸೂಡಿ : (Oct_11_2023)
ಲೋಕಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಸೂಡಿಯಲ್ಲಿ   ಶ್ರೀಚಿದಂಬರೇಶ್ವರರ ಜಯಂತ್ಯೋತ್ಸವದ ನಿಮಿತ್ತ ದಿನಾಂಕ: 28/11/2023  ಮಂಗಳವಾರದಿಂದ ದಿನಾಂಕ:  03/12/2023 ರವಿವಾರದ ವರೆಗೆ “ಅತಿರುದ್ರ ಮಹಾಯಾಗ“ವನ್ನು ಹಮ್ಮಿಕೊಳ್ಳಲಾಗಿದೆ. 
ಅತಿರುದ್ರ ಮಹಾಯಾಗದ ಪೂರ್ವಭಾವಿ ಸಭೆಯು 10-10-2023ರಂದು
 ವೇದ ಬ್ರಹ್ಮ ಶ್ರೀ ವಿದ್ವಾನ್ ಶಂಕರಭಟ್ಟ ಜೋಶಿ  ಇವರ ಅಧ್ಯಕ್ಷತೆಯಲ್ಲಿ  ಚಿದಂಬರಭಟ್ಟ ಜೋಶಿ ಇವರ ನೇತೃತ್ವದಲ್ಲಿ  ನಡೆಯಿತು.  

ಅತಿರುದ್ರ ಮಹಾಯಾಗದಲ್ಲಿ ಹಾವೇರಿ,ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ದಾವಣಗೇರೆ, ಹೈದರಾಬಾದ್ ಮುಂತಾದ ಸ್ಥಳಗಳಿಂದ 150ಕ್ಕೂ ಅಧಿಕ ವೈದಿಕರು ಭಾಗಿಯಾಗಲಿದ್ದಾರೆ. ಈ ಮಹಾಯಾಗದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಅತಿರುದ್ರ ಮಹಾಯಾಗದ ಯೋಜನೆಯನ್ನು ಪ್ರಾಸ್ತಾವಿಕವಾಗಿ ಭುಜಂಗಶರ್ಮಾ  ಜೋಶಿ ಅವರು ಮಾತನಾಡಿದರು.  

ಹುಬ್ಬಳ್ಳಿ ಭಾಗದ ಪ್ರಮುಖರು  ಸಲಹೆ ಸೂಚನೆ ನೀಡುವ ಮೂಲಕ ಅತಿರುದ್ರ ಮಹಾಯಾಗಕ್ಕೆ ಸಂಪೂರ್ಣ ಸಹಕಾರವನ್ನು ನೀಡಲು ಮುಂದಾಗಿದ್ದಾರೆ.  

ಶಂಕರಭಟ್ಟ ಜೋಶಿ ಅವರು ಮಾತನಾಡಿ ಅತಿರುದ್ರಮಹಾಯಾಗದ ಮಹತ್ವವನ್ನು ತಿಳಿಸಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಸಮಾಜದವರು ಮುಂದಾಗಬೇಕು.  ಧರ್ಮ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಭಗವಂತನ ಆಶಿರ್ವಾದ ಪಡೆಯಬೇಕೆಂದು ತಿಳಿಸಿದರು.  

ಈ ಸಂದರ್ಭದಲ್ಲಿ  ಹೆಚ್. ಎಲ್  ಕುಲಕರ್ಣಿ, ಕೆ.ಎಲ್ ಕುಲಕರ್ಣಿ, ಎಮ್.ಜಿ ದೇಶಪಾಂಡೆ, ಮಾಲತೇಶ ಕುಲಕರ್ಣಿ  ಹಾಗೂ ಹುಬ್ಬಳ್ಳಿ ಭಾಗದ ಪ್ರಮುಖರು ಉಪಸ್ಥಿತರಿದ್ದರು .
Post a Comment

Post a Comment