-->
Bookmark

Holealur : ವಿದ್ಯುತ್ ಕೊರತೆ ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

Holealur : ವಿದ್ಯುತ್ ಕೊರತೆ ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ 
ಹೊಳೆಆಲೂರ : (Oct_11_1022) 

ವಿದ್ಯುತ್ ಸಮಸ್ಯೆಯಿಂದ ಹೊಳೆಆಲೂರು ಹೋಬಳಿಯ ಗ್ರಾಮಗಳ ಜಮೀನುಗಳಿಗೆ ನೀರಿಲ್ಲ. ಕುಡಿಯುವ ನೀರಿಗೂ  ಸಮಸ್ಯೆ ಎದುರಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. 
ಮೊದಲು ಮುಂಗಾರು ಕೈಕೊಟ್ಟಿತು. ಈಗ ಹಿಂಗಾರಿನ ಮಳೆ ಸಹ ಇಲ್ಲ. ಬರಗಾಲ ಎದುರಾಗಿದೆ.‌ ಭೂಮಿಯನ್ನೆ ನಂಬಿ ಜೀವನ ಸಾಗಿಸಬೇಕಿದೆ. ಸಾಲ ಸೋಲ‌ ಮಾಡಿ ಬೆಳೆಯನ್ನ‌ ಬೆಳೆದಿದ್ದೇವೆ. ಕಳೆದ ವರ್ಷ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ತ್ರಿ ಫೇಸ್ ಲೈನ್ ಕೊಡುತ್ತಿದ್ದರು. ಈಗ, ಹಗಲಲ್ಲಿ ಕೇವಲ ಎರಡರಿಂದ ಮೂರು ತಾಸು ಕರೆಂಟ್ ಕೊಡ್ತಾರೆ. ಇದರಿಂದ ಬೆಳೆಗಳು ಒಣಗುತ್ತಿವೆ. ಇನ್ನೂ ಸ್ವಲ್ಪ ದಿನಗಳಲ್ಲಿ ಬೆಳೆ ಕಟಾವಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕರೆಂಟ್ ಸರಿಯಾಗಿ ನೀಡುತ್ತಿಲ್ಲ.    ಮೊದಲೇ ಸಾಲದ‌ಸುಳಿಯಲ್ಲಿ ಸಿಲುಕಿದ್ದೇವೆ. ಈಗ ಮಳೆ‌ಕೊರತೆ ಎದುರಾಗಿದೆ. ಕೆಲವೆಡೆ ಕುಡಿಯಲು ನೀರು ಸಹ ಸಿಗುತ್ತಿಲ್ಲ. ದನಕರುಗಳಿಗೆ, ಕುರಿ, ಮೇಕೆ‌, ಆಡುಗಳಿಗೆ ತೊಂದರೆಯಾಗುತ್ತಿದೆ. ನೀರು ಸಂಗ್ರಹಕ್ಕೆ ತೊಟ್ಟಿಗಳಿಲ್ಲ ಎಂದು ತಮ್ಮ ನೋವನ್ನ‌ ತೋಡಿಕೊಂಡರು. 
ಜೊತೆಗೆ, ಎರಡರಿಂದ ಮೂರು ತಾಸಿನಲ್ಲಿ ಜಮೀನುಗಳಿಗೆ ನೀರುಣಿಸುವುದು ಕಷ್ಟ. ಕೊಳವೆಬಾವಿಯಲ್ಲಿ ನೀರಿದ್ದರೂ, ಬೆಳೆಗಳಿಗೆ ನೀರು‌ಬಿಡಲಾಗುತ್ತಿಲ್ಲ. ನಮ್ಮ‌ಸಾಲ ಹೇಗೆ ತೀರಿಸುವುದು. ಇದು, ನಮಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ರೈತರು ಕಣ್ಣೀರು ಹಾಕಿದರು.‌
ನಿರಂತರ 7 ತಾಸು ವಿದ್ಯುತ್ ನೀಡುವ ಭರವಸೆಯನ್ನ  ಸಚಿವರಾದ ಹೆಚ್.ಕೆ ಪಾಟೀಲ್ ನೀಡಿದ್ದಾರೆ. ಅದರಂತೆ ವಿದ್ಯುತ್ ಪೂರೈಸಿ ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಇ.ಇ.ಒ ರವಿಕಿರಣ್ ಕೆ. ಹಾಗೂ ಎ.ಇ.ಇ ಚೇತನ್ ಹಾದಿಮನಿ ಮಾತನಾಡಿ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಲಾಗುವುದು ಎಂದರು.‌ ಮಳೆ ಇಲ್ಲದಿರುವಿದರಿಂದ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೈತರು ಸಹಕರಿಸಬೇಕು. ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. 
ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆಗೆ ಮುಂದಾದ ರೈತರನ್ನ ರೋಣ ಪಿ.ಎಸ್.ಐ ಎಲ್.ಕೆ. ಜೂಲಕಟ್ಟಿ ಮನವೊಲಿಸುವಲ್ಲಿ ಯಶಸ್ವಿಯಾದರು. 

ಮೆಣಸಗಿ ಗ್ರಾಮದ ಯುವಕರು, ರೈತರು, ಹೆಸ್ಕಾಂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಈ ವೇಳೆ, ಹೊಳೆಆಲೂರ ಹೆಸ್ಕಾಂ ಅಧಿಕಾರಿ ಎಸ್.ಒ ಕೃಷ್ಣ ದಾಸರ, ಕೇದಾರಗೌಡ ಭರಮಗೌಡ್ರ, ನಿಂಗಪ್ಪ ಮುದೇನೂರ, ಮುತ್ತಪ್ಪ ಹೊಸಂಗಡಿ, ಯಲ್ಲಪ್ಪ ಯಮನೂರ, ಈಶ್ವರ ಮುದೇನೂರು, ಹೊಳಬಸಪ್ಪ ಹೊಸಂಗಡಿ, ರಾಮಪ್ಪ ಸಕ್ರಿ ಹಾಗೂ ರೈತ ಮುಖಂಡರು, ಹೆಸ್ಕಾಂ ಅಧಿಕಾರಿಗಳು, ಸೇರಿದಂತೆ ಅನೇಕರು ಜೊತೆಗಿದ್ದರು. 
Post a Comment

Post a Comment