-->
Bookmark

Gajendragad : ಕನಸು ಸೇವಾ ಫೌಂಡೇಶನ್ ನಿಂದ ಮಾದರಿ ದೀಪಾವಳಿ

Gajendragad : ಕನಸು ಸೇವಾ ಫೌಂಡೇಶನ್ ನಿಂದ ಮಾದರಿ ದೀಪಾವಳಿ 

ಗಜೇಂದ್ರಗಡ : (15_11_2023) 
ಪುರಸಭೆ ಕಸ ತುಂಬುವ ಕಸದ ಗಾಡಿ ಅವರಿಗೆ, ಕನಸು ಸೇವಾ ಫೌಂಡೇಶನ್ ವತಿಯಿಂದ ದೀಪಾವಳಿ ಹಬ್ಬಕ್ಕೆ ಸಿಹಿ ಹಂಚಿ ಹೃದಯ ವೈಶಾಲ್ಯತೆ ಮೆರೆದರು. ಬುಧವಾರ ಚವ್ಹಾಣ್ ಅವರ ಪ್ಲಾಟನಲ್ಲಿ ಕಸ ತುಂಬಲು ಬಂದವರಿಗೆ, ಕನಸು ಸೇವಾ ಫೌಂಡೇಶನ್ ಅವತಿಯಿಂದ ಅವರಿಗೆ ಸಿಹಿ ಹಂಚಿ, ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ, ಕನಸು ಸೇವಾ ಫೌಂಡೇಶನ್ ಅಧ್ಯಕ್ಷರಾದ ರೇಣುಕಾ ಏವೂರ್  ಮಾತನಾಡಿ, ಪೌರ ಕಾರ್ಮಿಕರು ಮತ್ತು ಕಸ ತುಂಬುವ ಗಾಡಿ ಅವರು ದಿನವಿಡಿ ಶ್ರಮದಾನ ಮಾಡುತ್ತಾರೆ. ಅವರಿಗೆ ಗುರುತಿಸುವ ಕೆಲಸ ನಡೆಯಬೇಕಿದೆ. ಹೀಗಾಗಿ, ದೀಪಾವಳಿ ಹಬ್ಬಕ್ಕೆ ಸಿಹಿ ಹಂಚಿ ಶುಭಾಶಯ ತಿಳಿಸಿದ್ದೇವೆ. ಅವರ ಕುಟುಂಬವೂ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದಷ್ಟು ಸಂತಸ ಎಂದು ತಿಳಿಸಿದರು. ಇನ್ನೂ, ಹಬ್ಬಕ್ಕೆ ಪಟಾಕಿ ಸಿಡಿಸುವ ಬದಲು  ಬಡವರಿಗೆ ಸಿಹಿ ಹಂಚಿ ಮಾದರಿ ದೀಪಾವಳಿ ಹಬ್ಬವನ್ನ ಆಚರಿಸಿದ್ದೇವೆ ಎನ್ನುತ್ತಾರೆ, ಕನಸು ಸೇವಾ ಫೌಂಡೇಶನ್ ಅಧ್ಯಕ್ಷರಾದ ರೇಣುಕಾ ಏವೂರ್ ಕಿರಾ ನ್ಯೂಸ್ ನೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಮಾದರಿ ದೀಪಾವಳಿ ಆಚರಿಸಿದ ಕನಸು ಸೇವಾ ಫೌಂಡೇಶನ್ ಕಾರ್ಯ ಶ್ಲಾಘನೀಯ...

ಅಧ್ಯಕ್ಷರಾದ ರೇಣುಕಾ‌ ಏವೂರ್, ಪ್ರಾಧಾನ‌ ಕಾರ್ಯದರ್ಶಿ ಶಂಕರ್ ಏವೂರ್, ಅನ್ನಪೂರ್ಣ ವದೇಗೋಳ್, ರೇಖಾ ಹೊಸೂರ್, ದೀಪಾ ಮುದಗಲ್, ಅಪೂರ್ವ ದಂಡಿ, ಶ್ರೀದೇವಿ ನಂದನಜವಳಿಕಲ್, ತ್ರಿವೇಣಿ ಚಂದನವರ್, ಸಂಧ್ಯಾ ಭೋಸಲೆ, ವಿದ್ಯಾ ವರ್ಗಾ, ಭೀಮಾ ದಿವಾನವರ್, ಅನುಶಾ ಚಳ್ಳಿಮರದ್, ಕೃಷ್ಟವೇಣಿ ಏವೂರ್, ಪಾರ್ವತಿ ರಾಯಬಾಗಿ ಸೇರಿದಂತೆ ಅನೇಕರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದ್ರು...
Post a Comment

Post a Comment