-->
Bookmark

Gajendragad : ಬಿ.ಎಸ್.ಎಸ್ ಕಾಲೇಜ್ ಅಭಿವೃದ್ಧಿಗೆ ಸಾದಾ ಸಿದ್ಧ : ಶಿವರಾಜ್ ಘೋರ್ಪಡೆ, ವೀರಣ್ಣ ಶೆಟ್ಟರ್ ಅಭಿಪ್ರಾಯ

Gajendragad : ಬಿ.ಎಸ್.ಎಸ್ ಕಾಲೇಜ್ ಅಭಿವೃದ್ಧಿಗೆ ಸಾದಾ ಸಿದ್ಧ : ಶಿವರಾಜ್ ಘೋರ್ಪಡೆ, ವೀರಣ್ಣ ಶೆಟ್ಟರ್ ಅಭಿಪ್ರಾಯ 

ಗಜೇಂದ್ರಗಡ : (16_11_2023)
ಬಿ.ಎಸ್.‌ಎಸ್. ಕಾಲೇಜ್ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಸದಾ ಬದ್ಧ ಎಂದು ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಘೋರ್ಪಡೆ ಹೇಳಿದರು. ಬಿ.ಎಸ್.ಎಸ್ ಕಾಲೇಜ್ ನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ಯುವರೆಡಕ್ರಸ್, ಸ್ಕೌಟ್ಸ್ & ಗೈಡ್ಸ್, ಎನ್‌ಎಸ್‌ಎಸ್.  ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಕಾಲೇಜು ಉಳಿಯಲು ಹಲವು ಹೋರಾಟಗಾರರು ಶ್ರಮಿಸಿದ್ದಾರೆ ಎಂದು ತಿಳಿಸಿದರು. 
ಇನ್ನೂ, ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್ ಸಹ ಕಾಲೇಜು ಅಭಿವೃದ್ಧಿಗೆ ನಾವು ಸದಾ ಬದ್ಧ ಎಂದು ತಿಳಿಸಿದರು. ಬಡ ಮಕ್ಕಳು ಓದುವ ಕಾಲೇಜ್ ಅಭಿವೃದ್ಧಿಯಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.‌

ಇತ್ತ, ಹುಲಕೋಟಿಯ ಶ್ರೀ ಕೆ.ಹೆಚ್ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನ ಕನ್ನಡ ಪ್ರಾಧ್ಯಾಪಕಿ ಸುಧಾ ಕೌಜಗೇರಿ ಮಾತನಾಡಿ, ಇಂತ ಶಿಸ್ತು ಯಾವ ಸರ್ಕಾರಿ ಕಾಲೇಜಿನಲ್ಲಿ ನೋಡಲು ಅಸಾಧ್ಯ ಎಂದು ಪ್ರಾಂಶುಪಾಲ ಮಹೇಂದ್ರ ಜಿ ಅವರಿಗೆ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಸ್ವಾತಂತ್ರ್ಯ ಪಡೆಯಲು ಹಲವಾರು ಹೋರಾಟ ನಡೆಸಿದ್ದಾರೆ. ಬಹಳಷ್ಟು ಜನರ ಬಲಿದಡನದ ಪ್ರತೀಕ ಸ್ವಾತಂತ್ರ್ಯ‌. ಬಲಿದಾನದಿಂದ ಬಂದದನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರನ್ನ ನೆನೆದರು‌‌. ದೇಶ ಭಕ್ತರನಾಡು ನಮ್ಮದು. ಅವರ ಭಾವ ಚಿತ್ರ ಮರೆಯಬಾರದು ಎಂದು ನಮಗೆಲ್ಲರಿಗೂ ತಿಳಿಯದ ಇತಿಹಾಸವನ್ನ ತಿಳಿಸಿದರು. 

ಕಾಲೇಜ್ ಪ್ರಾಂಶುಪಾಲರಾದ ಮಹೇಂದ್ರ ಜಿ. ಎಲ್ಲರ ಸಹಾಯ, ಸಹಕಾರದಿಂದ ಮಾತ್ರ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯ. ವಿದ್ಯಾರ್ಥಿಗಳ ಸಾಧನೆಯಲ್ಲಿ ನಮ್ಮ ಸಾಧನೆಯನ್ನ ನಾವೂ ನೋಡುತ್ತೇವೆ. ಇದಕ್ಕಿಂತ ಮತ್ತೊಂದು ವೇದಿಕೆ ಸಿಗಲಿಕ್ಕಿಲ್ಲ ಎಂದು ವಿದ್ಯಾರ್ಥಿಗಳ ಸಾಧನೆಯನ್ನ ಕೊಂಡಾಡಿದರು.

ಈ ಮಧ್ಯೆ, ಪ್ರಶಾಂತ್ ರಾಠೋಡ್ ಮಾತನಾಡಿ, ಸಿಂಹಾಸನದ್ ಅವರನ್ನ ನಾವು ಯಾರು ಮರೆಯಬಾರದು. ನೂರಾರು ಕೋಟಿ ರೂಪಾಯಿ ಬೆಲೆ‌ಬಾಳುವ ಜಾಗ ದಾನ ಮಾಡಿದ್ದಾರೆ ಎಂದು ಸಿಂಹಾಸನದ್ ಕುಟುಂಬದ ಕಾರ್ಯವನ್ನ ಶ್ಲಾಘಿಸಿದರು. 

ಉಮೇಶ್ ರಾಠೋಡ್, ಶಿವು ಚವ್ಹಾಚ್ ಸೇರಿದಂತೆ ಅನೇಕರು ಮಾತನಾಡಿದರು.

 ಶಿವು ಚವ್ಹಾಣ್, ಸುರೇಂದ್ರ ಸಾ ರಾಯಬಾಗಿ, ಉಮೇಶ್ ರಾಠೋಡ್, ಎನ್.ಎಸ್. ಎಸ್ ಸಂಚಾಲಕರಾದ ಡಾ. ಎಂ.ವೈ ಜೆಟ್ಟಣ್ಣವರ್, ಹಿತೇಶ್ ಬಿ, ಶ್ರೀಮತಿ ಜೀವಿತಾ ಎಂ‌, ಶ್ರೀಮತಿ ಸರಸ್ವತಿ ಕೆ, ಸಿದ್ದೇಶ್ ಕೆ, ಶ್ರೀಮತಿ ರೂಪಾ ಟಿ, ಬಸಯ್ಯ ಕಲ್ಮಂಗಿಮಠ, ಬಿ.ವ್ಹಿ ಮುನವಳ್ಳಿ, ಶ್ರಿಮತಿ ಎಂ.ಎಸ್.ಕೆ ಹಿರೇಮಠ್, ಡಾ. ಎಸ್. ಎಸ್ ಪವಾರ್, ವ್ಹಿ, ವ್ಹಿ ಪೊಲೀಸಪಾಟೀಲ್, ಸಾಹಿತಿ ಎಸ್.ಎಫ್. ಗರಿದುರುಗನವರ್, ಮಾರುತಿ ಕಬ್ಬೇರ್, ಎ.ಟಿ ಜೋಶಿ, ಡಾ. ಶಿಲ್ಪಾ ಕೆ‌.ಹೆಚ್, ಐ.ಎಂ ಮೇಗೂರ್, ಶರಣಪ್ಪ ರೋಣದ್, ಪಿ.ಎಂ. ದಿವಾಣದ್, ವ್ಹಿ.ಎಂ ಜಾಧವ್, ಶ್ರೀಮತಿ ಜಿ.ವ್ಹಿ ಅಂಗಡಿ, ವೂ.ಎಫ್. ಗೌಡರ್, ಡಾ. ಎಸ್. ಆರ್. ನದಾಫ್, ಶ್ರೀಮತಿ ವೀಣಾ ಖನ್ನೂರ್, ಶ್ರೀಮತಿ ಆಶಾರಾಣಿ, ಶ್ರೀಮತಿ ಹೆಚ್.ಎಂ ಜಂತ್ಲಿ, ಶ್ರೀಮತಿ ಆರ್. ವಿ ಸುಂಕದ್, ಶ್ರೀಮತಿ ಯಾಸ್ಮೀನಾಭಾನು, ಎಂ.ಹೆಚ್. ಸುಣಗಾರ್, ಎಂ.ಕೆ ಹಡಪದ್, ಎಸ್.ಹೆಚ್ ಮೂಲಿ, ಎಲ್.ಬಿ ಹುಲ್ಲೂರು, ಆರ್. ಎನ್ ಹದ್ಲಿ, ನಜೀರ್ ಖಾಜಿ, ಪೂರ್ಣಚಂದ್ರ ಆರ್, ಶ್ರೀಮತಿ ಗೀತಾ ಅರವಟಗಿ, ಶ್ರೀಮತಿ ಎಸ್.ಎಂ ಕಡಿ, ಅರುಣ್ ಅಂಗಡಿ ಸೇರಿದಂತೆ ಬೋಧಕ, ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
Post a Comment

Post a Comment