-->
Bookmark

Gajendragad : ಪುಸ್ತಕದಿಂದ ಜೀವನ ರೂಪಿಸಿಕೊಳ್ಳಿ : ಬಸಮ್ಮ ತಳವಾರ್

Gajendragad : ಪುಸ್ತಕದಿಂದ ಜೀವನ ರೂಪಿಸಿಕೊಳ್ಳಿ : ಬಸಮ್ಮ ತಳವಾರ್ 

ಗಜೇಂದ್ರಗಡ : (17_11_2023)
ಎಲ್ಲಾ ತರಹದ ಪುಸ್ತಕಗಳ ಜೊತೆಗೆ ಡಿಜಿಟಲ್ ಲೈಬ್ರರಿ ಇದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ ಎಂದು ರೋಣ ಪಟ್ಟಣದ ಗ್ರಂಥಪಾಲಕರಾದ ಬಸಮ್ಮ ತಳವಾರ್ ಹೇಳಿದರು. ಗ್ರಾಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಓದಿನ ಆಸಕ್ತಿ ಕಡಿಮೆಯಾಗಿದ್ದು, ದುರಂತ ಎಂದು ಕಳವಳ ವ್ಯಕ್ತಪಡಿಸಿದರು. ಗ್ರಂಥಾಲಯದಲ್ಲಿ ಆಧ್ಯಾತ್ಮಿಕತೆಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚಾಗಿವೆ. ಕಥೆ, ಕಾದಂಬರಿ, ಸೇರಿದಂತೆ ಎಲ್ಲ ಬಗೆಯ ಮಾಹಿತಿ ನೀಡುವ ಪುಸ್ತಕಗಳು ಸಹ ಲಭ್ಯ ವಿದ್ದು, ಓದುಗರ ಕೊರತೆ ಇದೆ ಎಂದು ತಿಳಿಸಿದರು. 
ಈ ಮಧ್ಯೆ, ಕಾಂಪಿಟೇಟಿವ್ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮ್ಯಾಗಜೀನಗಳು ಇವೆ. ಪ್ರಚಲಿತ ಪುಸ್ತಕ ಮಳಿಗೆಯಲ್ಲಿ ಸಿಗುವ ಮ್ಯಾಗಜೀನಗಳಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು... 
ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಲೈಬ್ರರಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸಿ ಎಂದು ಮನವಿ ಮಾಡಿದರು.. 

ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನದಲ್ಲಿ ತಹರೆವಾರಿ ಪುಸ್ತಕಗಳ ಪ್ರದರ್ಶನ ಏರ್ಪಡಿಸಿದ್ರು. ಪುಸ್ತಕಗಳು ಸಾಹಿತಿಗಳಿಗೆ, ಓದುಗರಿಗೆ ಸೆಳೆಯುತ್ತಿದೆ. ಗದಗ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ರಾಂತಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಬಸಮ್ಮ ತಳವಾರ್...

ಕಾರ್ಯಕ್ರಮದಲ್ಲಿ ಕಳಕಪ್ಪ ಸಂತೋಜಿ, ಈರಪ್ಪ ಪಲ್ಲೆದ್, ರುದ್ರಪ್ಪ ಹಾಲನ್ನವರ್, ಹನುಮಂತ್ ಪೂಜಾರಿ, ವಿರೇಶ್ ಕಡಬಿನಕಟ್ಟಿ, ಕೆ.ಐ ಸವಡಿ, ಸಿ.ಎಂ. ವಿರಕ್ತಮಠ, ಎಂ.ಎನ್. ಕುರಡಿಕೆರೆ, ಗ್ರಂಥಪಾಲಕರಾದ ಬಸಮ್ಮ‌ ತಳವಾರ್, ಶಾಂತಮ್ಮ ಚಲವಾದಿ, ಪವಿತ್ರಾ ಲಿಂಗಶೆಟ್ಟಿ, ದೀಪಾ ಪಲ್ಲೆದ್, ಭೀಮಾ ಗಾಣಿಗೇರ್, ದೀಪಾ ಹಿರೇಸಕ್ಕರಗೌಡ್ರ, ಭೀಮಮ್ಮ ನಿಡಗುಂದಿ, ಭಾಗ್ಯಾ ಅಂಗಡಿ, ಕೀರ್ತಿ ಗಾಣಿಗೇರ್, ಶೋಭಾ ಚಲವಾದಿ, ಶಿವಲೀಲಾ ಹುಚ್ಚಣ್ಣವರ್, ದೀಪಾ ಬಸಿದೋಣಿಮಠ, ಸ್ನೇಹಾ ಮಲ್ಲೆನಿ, ಸಹನಾ ಜಂಬಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment

Post a Comment