-->
Bookmark

Gajendragad : ʼಕರ್ನಾಟಕʼ ನಾಮಕರಣಕ್ಕೆ ಗದಗ ಕೊಡುಗೆ ಅಪಾರ

Gajendragad : ʼಕರ್ನಾಟಕʼ ನಾಮಕರಣಕ್ಕೆ ಗದಗ ಕೊಡುಗೆ ಅಪಾರ

ಗಜೇಂದ್ರಗಡ: (01_11_2023)
ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ 

ಗಜೇಂದ್ರಗಡ: ಕನ್ನಡ ನಾಡು ಉಳಿವಿಗೆ ಹಾಗೂ ಭಾಷೆಯ ಬೆಳವಣಿಗೆಗೆ ಜೀವನವನ್ನು ಮುಡುಪಾಗಿಟ್ಟು ಹೋರಾಡಿದ ಮಹನೀಯರನ್ನು ನೆನೆದು ಗೌರವಿಸುವುದು ಹಾಗೂ ಈಗಿನ ಪೀಳಗೆಗೆ ಅವರ ಪರಿಚಯ ಮಾಡಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದು ಕರ್ನಾಟಕ ಅಭಿವೃದ್ದಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಮು. ಜರತಾರಿ ಹೇಳಿದರು.

ಕರ್ನಾಟಕ ಅಭಿವೃದ್ದಿ ವೇದಿಕೆಯಿಂದ ಗಜೇಂದ್ರಡ ಪಟ್ಟಣದ ಕುಷ್ಟಗಿ ರೋಡ್‌ ಜನತಾ ಪ್ಲಾಟ್‌ ನಲ್ಲಿರುವ ಚನ್ನಮ್ಮ ವೃತ್ತದಲ್ಲಿ ಬುಧವಾರ ಆಚರಣೆ ಮಾಡಲಾದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಲು ಗದಗ ಜಿಲ್ಲೆಯ ಅನೇಕ ಮಹನಿಯರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರೋಣ ತಾಲ್ಲೂಕು ಮುಂಚೂಣಿಯಲ್ಲಿದೆ. ಹುಯಿಲಗೋಳ ನಾರಾಯಣರಾವ್‌, ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿಯವರು, ಆಲೂರು ವೆಂಕಟರಾಯರು ಸೇರಿದಂತೆ ಅನೇಕರು ಇದ್ದಾರೆ ಎಂದರು. ಏಕೀಕರಣಕ್ಕಾಗಿ ಜೀವನವನ್ನೇ ಮೀಸಲಿಟ್ಟ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರು ನಮ್ಮವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಈಗಿನ ಪೀಳಿಗೆಗೆ ಇವರ ಸಾಧನೆ ತಿಳಿಸಲು ಸರ್ಕಾರ ದೊಡ್ಡಮೇಟಿಯವರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ನಾಡು ನುಡಿಗಾಗಿ ಸದಾ ಹೋರಾಡುವ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಪ್ರತಿಭಟಿಸುವುದು ಸಂಘಟಿಕರ ಕರ್ತವ್ಯವಾಗಿದೆ. ಅದರಂತೆ ನಮ್ಮ ಸಂಘಟನೆಯೂ ನಾಡು ನುಡಿಗಾಗಿ ಸದಾ ಹೋರಾಡುತ್ತದೆ ಎಂದರು. 

ಕಾರ್ಯಕ್ರಮ ಆರಂಭದಲ್ಲಿ ಗಜೇಂದ್ರಗಡ ಪುರಸಭೆಯ ಪೌರಕಾರ್ಮಿಕ ಮಹಿಳೆ ಅಂದಮ್ಮ ಚಂದ್ರಪ್ಪ ಅಬ್ಬಿಗೇರಿ ಅವರಿಂದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ವೇಳೆ ಸಂಘಟಿಕರಾದ ಹೂವಾಜಿ ಚಂದುಕರ, ಪ್ರಕಾಶ ರಾಠೋಡ, ಅಂದಪ್ಪ ರಾಠೋಡ, ಮಾರುತಿ ಹಾದಿಮನಿ, ಶಂಕರ ರಾಠೋಡ, ಕೃಷ್ಣ ಗುಗಲೋತ್ತರ, ಜೈಭೀಮಸೇನಾ ರಾಜ್ಯ ಸಂಘರ್ಷ ಸಮಿತಿಯ ಹನಮಂತ ಗೌಡ್ರ, ಮಂಜು ಅಬ್ಬಿಗೇರಿ, ಲಕ್ಷ್ಮಣ ಬಂಕದ, ಅಲ್ಲಾಬಕ್ಷಿ ಮುಚ್ಚಾಲಿ, ಚಂದ್ರು ಬಂಕದ, ನೀಲಪ್ಪ ಚಲವಾದಿ, ಬಸವರಾಜ ಅಣ್ಣಿಗೇರಿ, ಪ್ರಭು ನಿಡಗುಂದಿ ಇದ್ದರು. 
Post a Comment

Post a Comment