ಕನ್ನಡ ಹಬ್ಬದಂತೆ ಉಚಿತ ಆರಿ ವರ್ಕ್ ಸ್ಟಾರ್ಟ್ - ಕನ್ನಡಾಭಿಮಾನ ಮೆರೆದ ಕನಸು ಸೇವಾ ಫೌಂಡೇಷನ್
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಕನಸು ಸೇವಾ ಫೌಂಡೇಶನ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನವಾಗಿ ಆಚರಿಸಲಾಯ್ತು. ಕನ್ನಡಾಂಬೆಯ ಹುಟ್ಟುಹಬ್ಬದಂದೆ 10ನೇ ಬ್ಯಾಚ್ ಆರಂಭಿಸಿದ್ದಾರೆ. ಅಲ್ಲದೇ, ಇದೆಲ್ಲ ತರಬೇತಿ ಉಚಿತವಾಗಿ ನೀಡಿರುವುದು ಮತ್ತೊಂದು ವಿಶೇಷ. ಜೊತೆಗೆ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ, ಪೂಜಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮವನ್ನ ಕನಸು ಸೇವಾ ಫೌಂಡೇಷನ್ ಕಾರ್ಯದರ್ಶಿ ಶಂಕರ್ ಏವೂರ್ ಮತ್ತು ಅಧ್ಯಕ್ಷೆ ರೇಣುಕಾ ಏವೂರ್ ಕನ್ನಡಾಂಬೆಯ ಗುಣಗಾನ ಮಾಡಿದ್ದಾರೆ. ಜೊತೆಗೆ ಕನ್ನಡ ನಾಡು ನುಡಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಆರಿ ವರ್ಕ್ ಸ್ಟೂಡೆಂಟ್ಸ್ ಸಹ ಕನ್ನಡ ಹಬ್ಬದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಮನುಶ್ರೀ ಏವೂರ್ ಭಾವಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದ್ರು.
Post a Comment