-->
Bookmark

Gajendragad : ಕನ್ನಡ ನಾಡು, ನುಡಿ ರಕ್ಷಣೆಗೆ ಕನ್ನಡಿಗರು ಸದಾ ಬದ್ದ : ಭಾಷೆಸಾಬ್ ಕರ್ನಾಚಿ

Gajendragad : ಕನ್ನಡ ನಾಡು, ನುಡಿ ರಕ್ಷಣೆಗೆ ಕನ್ನಡಿಗರು ಸದಾ ಬದ್ದ : ಭಾಷೆಸಾಬ್ ಕರ್ನಾಚಿ 

ಗಜೇಂದ್ರಗಡ : (01_11_2023)
ಕನ್ನಡ ನಾಡು, ನುಡಿ ರಕ್ಷಣೆಗೆ ಕನ್ನಡಿಗರು ಸದಾ ಬದ್ದ ಎಂದು ಪುನೀತರಾಜಕುಮಾರ್ ಅಭಿಮಾನಿ ಸಂಘದ ತಾಲೂಕಾಧ್ಯಕ್ಷ ಭಾಷೆಸಾಬ್ ಕರ್ನಾಚಿ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಅಖಿಲ ಕರ್ನಾಟಕ ಡಾ.ರಾಜಕುಮಾರ್, ಡಾ. ಶಿವರಾಜಕುಮಾರ್, ರಾಜರತ್ನ ಡಾ. ಪುನೀತರಾಜಕುಮಾರ್, ಅಭಿಮಾನಿ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು,  ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು. ಕನ್ನಡ ನಮ್ಮ ಉಸಿರು ಎಂದು ಹೇಳುದರು. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ, ರಕ್ಷಣೆಗೆ ನಾವು ಸದಾ ಬದ್ದ ಎಂದು ಹೇಳಿದರು.‌ 
ನಮ್ಮ ಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ಭಾಷೆ ಸಾಬ್ ಕರ್ನಾಚಿ, ರವಿಶಾಸ್ತ್ರಿ ಗೊಂದಳೆ, ಶಂಕರ್ ರಾಥೋಡ್, ನೀಲಪ್ಪ ಚಲವಾದಿ, ದೊಡ್ಡ ಬಸವರಾಜ್ ವಾಲಿಕಾರ್ ಸಂಗಪ್ಪ ಯಲಗಬುಂಚಿ,  ಶಂಶುದ್ದೀನ್ ಕಟಬಲಿ, ಲಕ್ಷ್ಮಣ್ ಗೊಂದಳೆ, ಕಳಕಪ್ಪ ಜಾಡಬಂಡಿ, ನಾಗರಾಜ್ ಮುತಗಾರ್, ನಾಗರಾಜ್ ಮಡಿವಾಳರ್,  ರಮೇಶ್ ಯಾದವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 
Post a Comment

Post a Comment