-->
Bookmark

Gajendragad : "ರಾಷ್ಟೀಯ ಏಕತಾ ದಿನ" ಹಾಗೂ ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳವರ 5ನೇ ಪುಣ್ಯಸ್ಮರಣೆ

Gajendragad : "ರಾಷ್ಟೀಯ ಏಕತಾ ದಿನ" ಹಾಗೂ ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳವರ 5ನೇ ಪುಣ್ಯಸ್ಮರಣೆ 
ಗಜೇಂದ್ರಗಡ : ( 01_11_2023)

 ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜು ಮತ್ತು ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯಲ್ಲಿ ಇಂದು ಸರದಾರ್‌ ವಲ್ಲಭಭಾಯಿ ಪಟೇಲರ ಜಯಂತಿ & ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳವರ 5ನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಇದಕ್ಕೂ ಮುನ್ನ ಪಟೇಲರ ಭಾವಚಿತ್ರಕ್ಕೆ ಮತ್ತು ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಗಳ ನಿಸ್ವಾರ್ಥ ಸೇವೆಯ ಪರಿಚಯ ನೀಡಿ ಗೌರವ ಸೂಚಿಸಲಾಯಿತು ಹಾಗೂ 2014 ರಿಂದ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರಗಳು ಉಕ್ಕಿನ ಮನುಷ್ಯ ಸರದಾರ ಪಟೇಲರ ಜಯಂತಿಯನ್ನು 'ರಾಷ್ಟ್ರೀಯ ಏಕತಾ ದಿವಸವನ್ನಾಗಿ' ಆಚರಿಸಲು ಘೋಷಿಸಿದ್ದರಿಂದ 'ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿ  ‘ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆ ಯನ್ನು ಕಾಪಾಡಲು ನನ್ನನ್ನು ಅರ್ಪಿಸಿ ಕೊಳ್ಳುತ್ತೇನೆ ಮತ್ತು ನನ್ನ ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ, ಸರ್ದಾರ್ ವಲ್ಲಬಾಯ್ ಪಟೇಲ್ ಅವರ ದೂರದೃಷಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ’ ಎಂದು ಉಪನ್ಯಾಸಕರು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಭೋದಕ ಮತ್ತು ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Post a Comment

Post a Comment