ಗಜೇಂದ್ರಗಡ: (01_11_2023)
ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಕನ್ನಡ ಭಾಷೆ ಅನ್ನದ ಭಾಷೆಯಾಗಲಿ ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ ಹೇಳಿದರು.
ಪಟ್ಟಣದ ಅಂಜುಮಾನ್ ಇಸ್ಲಾಂ ಕಮೀಟಿಗೆ ಒಳಪಟ್ಟಿರುವ ಅಂಜುಮಾನ್ ಕಾನ್ವೆಂಟ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆಗೆ ನಮನ ಸಲ್ಲಿಸಿ, ಅವರು ಮಾತನಾಡಿದರು.
ಕನ್ನಡ ಭಾಷೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಅನ್ನದ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು.ಕನ್ನಡ ಭಾಷಾ ಸಂರಕ್ಷಣೆಯಲ್ಲಿ ಜಿಲ್ಲೆಯ ಕೊಡುಗೆ ಅನುಪಮ ಎಂದರು.
ಅಂಜುಮಾನ್ ಇಸ್ಲಾಂ ಕಮೀಟಿ ನಿರ್ದೇಶಕ ದಾವಲಸಾಬ್ ತಾಳಿಕೋಟಿ ಮಾತನಾಡಿ, ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದ್ದು, ಬಹುಭಾಷೆ, ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನೆಲೆಬೀಡು ಇದಾಗಿದೆ. ಕರ್ನಾಟಕವೇ ಕರ್ಮಭೂಮಿ, ನಾಡು, ನುಡಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಫಯಾಜ್ ತೋಟದ, ಶಿಕ್ಷಕರಾದ ಮಾಜನಬಿ ಹಣಗಿ, ಫಾತೀಮಾ ಕಡ್ಲಿಮಟ್ಟಿ ಇದ್ದರು.
Post a Comment