-->
Bookmark

Bengaluru : ಡಬ್ಬಿಂಗ್ ಮುಗಿಸಿದ "ತುಷಾರ್"

Bengaluru : ಡಬ್ಬಿಂಗ್ ಮುಗಿಸಿದ "ತುಷಾರ್"
ಬೆಂಗಳೂರು : ( Dec_06_2023)
ಅಪರಾಧಕ್ಕೆ ಸವಾಲು ದಿನಪತ್ರಿಕೆ ಸಹಯೋಗದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಬ್ಯಾನರಡಿಯಲ್ಲಿ   ನಿರ್ಮಾಣವಾಗುತ್ತಿರುವ ‘ತುಷಾರ’ ಚಲನಚಿತ್ರದ  ಡಬ್ಬಿಂಗ್ ಕಾರ್ಯ ಮುಕ್ತಾಯವಾಯಿತು.
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಂಗೀತ ನಿರ್ದೇಶಕ ಮಂಜು ಕವಿ ಅವರ ಎಮ್ ಕೆ ಸ್ಟುಡಿಯೋದಲ್ಲಿ ಸತತವಾಗಿ ಒಂದು ವಾರಗಳ ಕಾಲ "ತುಷಾರ್" ಚಿತ್ರದ ಡಬ್ಬಿಂಗ್ ಕಾರ್ಯಗಳನ್ನು ನಡೆಸಲಾಗಿದೆ. ‘ತುಷಾರ್’ ಸಿನಿಮಾಕ್ಕೆ ವಿಶ್ವಪ್ರಕಾಶ ಮಲಗೊಂಡ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ  ಈ  ಚಿತ್ರದ ಮೂಲಕ ಯುವ ಪ್ರತಿಭಾನ್ವಿತ ಕಲಾವಿದೆ  ಶಿಲ್ಪಾ ಮೂರ್ತಿ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
    ರವಿ ಕುಂಟೋಜಿ ಛಾಯಾಗ್ರಹಣ,  ಮಂಜುಕವಿ   ಸಂಗೀತ , ಸಾಹಿತ್ಯ ಸಂಭಾಷಣೆ ಪವನ್ ಕುಮಾರ್ ಬೂದಿಹಾಳ, ಚಂದು  ಸಂಕಲನ,    ಉಮೇಶ್.ಕೆ.ಎನ್  ಪಬ್ಲಿಸಿಟಿ ಡಿಸೈನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಹರೀಶ್ ಅರಸು.  ಪೋಸ್ಟರ್ ಡಿಸೈನ್ ವಿಶ್ವ ಬಿರಾದಾರ, ಪ್ರಸಾದ್ ತೋಟದ, ಸಹ ನಿರ್ದೇಶಕರಾಗಿ ಸುಧಾ ಅಣ್ಣಾಶೇಠ,   ತಂಡದಲ್ಲಿ ಪೃಥ್ವಿರಾಜ್ ನಾಯಕ, ಸಿದ್ದು ತಳ್ಳೋಳ್ಳಿ, ಚಂದ್ರಕಾಂತ ಬೂದಿಹಾಳ, ಶ್ರೇಯಶ್ ದೇಶಪಾಂಡೆ ಇದ್ದಾರೆ.     ‘ಅಪರಾಧಕ್ಕೆ ಸವಾಲು’ ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದಾರೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬
Post a Comment

Post a Comment