-->
Bookmark

Gajendragad : ದಮನಿತರ ಧ್ವನಿಯಾಗಿ ಬೆಳಗಿದ ಅಂಬೇಡ್ಕರ್, ಜನ ಸಮುದಾಯದಕ್ಕೆ ಆದರ್ಶ ಆಗಲಿ : ಮಾರುತಿ ಚಿಟಗಿ

Gajendragad : ದಮನಿತರ ಧ್ವನಿಯಾಗಿ ಬೆಳಗಿದ ಅಂಬೇಡ್ಕರ್, ಜನ ಸಮುದಾಯದಕ್ಕೆ ಆದರ್ಶ ಆಗಲಿ : ಮಾರುತಿ ಚಿಟಗಿ
ಗಜೇಂದ್ರಗಡ: (Dec_06_2023)
ನಗರದ ಎಸ್ ಎಫ್ ಐ ನ ಕಛೇರಿಯಲ್ಲಿ
ಭಾರತ ವಿದ್ಯಾರ್ಥಿ ಫೆಡರೇಶನ್  ಮತ್ತು ಕಟ್ಟಡ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಿದರು. 
ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪ ನಮನ ಮಾಡುವ ಮೂಲಕ ಮಹಾ ನಾಯಕನನ್ನ ನೆನೆದರು. 
ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಕಾರ್ಮಿಕ ಮುಖಂಡ ಮಾರುತಿ ಚಿಟಗಿ,  ಅಂಬೇಡ್ಕರ್ ಇಲ್ಲದೇ ಹೋಗಿದ್ದರೆ ಭಾರತಕ್ಕೆ ಉನ್ನತವಾತ ಸಂವಿಧಾನ ಸಿಗುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎಂದರೆ ಭಾರತದ ಸಂವಿಧಾನವನ್ನು ನಾವೆಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದರು. ಅಂಬೇಡ್ಕರ್ ಅವರು ಧಮನಿತರ ದ್ವನಿಯಾಗಿದ್ದರು. ಅವರು ಜನತೆ ಆದರ್ಶವಾಗಿ ಜಗವನ್ನು ಬೆಳಗಿದ್ದಾರೆ ಎಂದರು.

ಇದೇ ವೇಳೆ,  ಮುಖಂಡ ಗಣೇಶ್ ರಾಠೋಡ್ ಮಾತನಾಡಿ,ಅಂಬೇಡ್ಕರ್ ಎಲ್ಲಾ ಕಾಲಕ್ಕೂ ಪ್ರಸ್ತುತರಾಗಿರುತ್ತಾರೆ. ಅವರ ಆದರ್ಶಗಳನ್ನ ಜನತೆ ರೂಢಿಸಿಕೊಂಡು ಅವರ ಹಾದಿಯಲ್ಲಿ ನಡೆದರೆ ಅದೇ ಅಂಬೇಡ್ಕರ್ ಅವರಿಗೆ ನೀವು ನೀಡುವ ಗೌರವ ಸ್ಮರಣೆ ಆಗುತ್ತದೆ ಎಂದು ಹೇಳಿದರು.

ನಂತರ ಎಸ್ ಎಫ್ ಐ ನ ಜಿಲ್ಲಾ ಮುಖಂಡ ಚಂದ್ರು ರಾಠೋಡ್ ಮಾತನಾಡಿ, ಅಂಬೇಡ್ಕರ್ ಅವರ ಆಶಯ ಈಡೇರಿಸಲು ಪಣ ತೊಟ್ಟು, ಅದನ್ನು ಜಾರಿ ಮಾಡುವುದು ನಿಜವಾದ ಗೌರವ ಎಂದರು.

ಕಾರ್ಯಕ್ರಮವನ್ನು ತಾಲ್ಲೂಕು ಅದ್ಯಕ್ಷರಾದ ಪ್ರದೀಪ್ ಎಂ ನಿರ್ವಹಿಸಿದ್ರೆ, ಎಸ್ ಎಫ್ ಐ ತಾಲ್ಲೂಕು ಕಾರ್ಯದರ್ಶಿ ಶರಣು ಎಂ ಅವರು ಒಂದಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮೈಬು ಹವಾಲ್ದಾರ್, ಚನ್ನಪ್ಪ ಗುಗಲೋತ್ತರ್, ಕನಕಪ್ಪ ಹಾದಿಮನಿ, ಗಂಗಾ ಚಿಟಗಿ, ಮಾಧುರಾವ್ ಮೊಹಿತೆ, ಹಾಜರಿದ್ದರು.
Post a Comment

Post a Comment