-->
Bookmark

Gajendragad : ಡಾ. ರಾಮಾಶಾಸ್ತ್ರೀಜಿ ಜೀರೆ ಹುಟ್ಟುಹಬ್ಬ : ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಬಡವರಿಗೆ ಅನ್ನ ಸಂತರ್ಪಣೆ

Gajendragad : ಡಾ. ರಾಮಾಶಾಸ್ತ್ರೀಜಿ ಜೀರೆ ಹುಟ್ಟುಹಬ್ಬ : ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಬಡವರಿಗೆ ಅನ್ನ ಸಂತರ್ಪಣೆ 
ಗಜೇಂದ್ರಗಡ : (Dec_17_2023)

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ರಾಮಾಶಾಸ್ತ್ರೀಜಿ ಜೀರೆ ಅವರ 56ನೇ ಹುಟ್ಟುಹಬ್ಬ ಆಚರಿಸಲಾಯಿತು. ಪಟ್ಟಣದ ಕೆಕೆ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಬಡವರು, ಕೂಲಿಕಾರ್ಮಿಕರು, ಊಟ ಸವಿದು ಆಯಸ್ಸು, ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಮತ್ತು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಫೀಕ್ ತೋರಗಲ್, ಗಜೇಂದ್ರಗಡ ಅಷ್ಟೇ ಅಲ್ಲದೇ, ರಾಜ್ಯಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ರಾಮಾಶಾಸ್ರ್ತೀಜಿ ಜೀರೆ ಅವರು, ಬಡವರ ಡಾಕ್ಟರ್ ಎಂದೆ ಪ್ರಸಿದ್ಧಿ ಪಡೆದಿದ್ದಾರೆ ಎಂದು ಸ್ಮರಿಸಿದರು. ಅಲ್ಲದೇ, ಬಡವರಿಗಾಗಿ ಅತಿ ಹೆಚ್ಚು ಶ್ರಮ ವಹಿಸುವ ಡಾ. ಜೀರೆ ಅವರು, ಹಲವು ದಶಕಗಳಿಂದ ಸಮಾಜ ಸೇವೆಯಲ್ಲಿ‌ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ದುಬಾರಿ ದುನಿಯಾದಲ್ಲಿ ಕೇವಲ ಐದು ರೂಪಾರಿಯಿಂದ ಬಡವರ ಪಾಲಿಗೆ ಆಶಾದಾಯಕವಾಗಿದ್ದಾರೆ. ಇವರ ಸಮಜ ಸೇವೆ ಗುರುತಿಸಿ, ಹಲವು ಪ್ರಶಸ್ತಿಗಳು ಬಂದಿವೆ. ಅವರು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲಿ ಎಂದು ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಮತ್ತು ಜಯ ಕರ್ಮಾಟಕ ಸಂಘಟನೆ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್ ಹೇಳಿದರು. 
ಎಡಗೈಲಿ ಮಾಡಿದ ಕೆಲಸ‌ ಬಲಗೈಗೆ ತಿಳಿಯದಹಾಗೆ ಸಮಾಜಸೇವೆ ಮಾಡುವ ಇವರು, ಸಮಾಜದ ಅಭಿವೃದ್ಧಿಗಾಗಿ ಸದಾ ತುಡಿಯುವ ಮನಸ್ಸನ್ನ ಹೊಂದಿದ್ದಾರೆ. 
ಎಂದಿಗೂ ತಮ್ಮ‌ ಮೊಗದಲ್ಲಿ ನಗುವನ್ನು ಚೆಲ್ಲಿ, ನಗುವಿನಿಂದಲೇ ನೋವನ್ನ ನಿವಾರಿಸುವ ಗುಣವನ್ನ ಹೊಂದಿದ್ದಾರೆ ಎಂದು ರಫೀಕ್ ತೋರಗಲ್ ಹೇಳಿದ್ದಾರೆ. 

Post a Comment

Post a Comment