-->
Bookmark

Gajendragad : ಜನತೆ ತೀರ್ಪು ಸ್ವೀಕರಿಸುತ್ತೇವೆ : ವೈಚಾರಿಕ ಸಮರ ಮುಂದುವರಿಯಲಿದೆ: ರಾಹುಲ್ ಗಾಂಧಿ

Gajendragad : ಜನತೆ ತೀರ್ಪು ಸ್ವೀಕರಿಸುತ್ತೇವೆ : ವೈಚಾರಿಕ ಸಮರ ಮುಂದುವರಿಯಲಿದೆ: ರಾಹುಲ್ ಗಾಂಧಿ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಚುನಾವಣಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ (x) ನಲ್ಲಿ 'ಜನತೆ ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ವೈಚಾರಿಕ ಸಮರ ಮುಂದುವರಿಯಲಿದೆ' ಎಂದು ಬರೆದಿದ್ದಾರೆ. 

"ಮಧ್ಯಪ್ರದೇಶ, ಛತ್ತೀಸ್‌ಘಡ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪಕ್ಷದ ವಿರುದ್ಧವಾಗಿ ಬಂದಿರುವ ಜನಾದೇಶವನ್ನು ನಾವು ಸ್ವೀಕರಿಸುತ್ತೇವೆ. ಆದರೆ, ವೈಚಾರಿಕ ಸಮರ ಮುಂದುವರಿಯಲಿದೆ" ಎಂದು ಕಾಂಗ್ರೆಸ್ ಸಂಸದರೂ ಆಗಿರುವ ರಾಹುಲ್ ಗಾಂಧಿ, ಟ್ವಿಟರ್ (X) ನಲ್ಲಿ ತೆಲಂಗಾಣ ಕಾಂಗ್ರೆಸ್‌ನ ಭರ್ಜರಿ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ರಾಹುಲ್ ಗಾಂಧಿ, ತೆಲಂಗಾಣದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.

'ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಲಿದ್ದೇವೆ. 'ಪ್ರಜಾಲು ತೆಲಂಗಾಣ' ನಿರ್ಮಿಸುವ ನಮ್ಮ ಭರವಸೆಯನ್ನು ಕೂಡ ಖಂಡಿತವಾಗಿ ಈಡೇರಿಸುತ್ತೇವೆ' ಎಂದು ರಾಹುಲ್ ಗಾಂಧಿ  ತಿಳಿಸಿದ್ದಾರೆ.

ಎಲ್ಲ ಕಾರ್ಯಕರ್ತರಿಗೆ, ಅವರ ಪರಿಶ್ರಮಕ್ಕೆ, ಸಮರ್ಥನೆಗೆ ಹೃದಯದಿಂದ ಧಧನ್ಯವಾದಗಳು ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
Post a Comment

Post a Comment