-->
Bookmark

Jakkali : ಲೋಕಸಭೆಯಲ್ಲೂ ಬಿಜೆಪಿಗೆ ಮತ : ಮುತ್ತಣ್ಣ ಕಡಗದ್ ಅಭಿಮತ

Jakkali : ಲೋಕಸಭೆಯಲ್ಲೂ ಬಿಜೆಪಿಗೆ ಮತ : ಮುತ್ತಣ್ಣ ಕಡಗದ್ ಅಭಿಮತ 

Jakkali : (Dec_03_2023)
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಜಕ್ಕಲಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜಕ್ಕಲಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ, ಮಾತನಾಡಿದ ಮುತ್ತಣ್ಣ ಕಡಗದ್, ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಮುಂಬರುವ ಲೋಕಸಭೆಯಲ್ಲಿ ಹಾವೇರಿ_ ಗದಗ ಲೋಕಸಭೆ ಚುಮಾವಣೆಯಲ್ಲೂ ಮತದಾರ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಮುತ್ತಣ್ಣ ಕಡಗದ್ ವಿಶ್ವಾಸ ವ್ಯಕ್ತಪಡಿಸಿದರು. 

ಸಂಭ್ರಮಾಚರಣೆ ವೇಳೆ, ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ್, ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ಶಿವನಾಗಪ್ಪ ದೊಡ್ಡಮೇಟಿ, ಸದಸ್ಯರಾದ  ಪಾಂಡಪ್ಪ ಮಡಿವಾಳರ್, ಚನ್ನಬಸವರಾಜ್ ಕೊಪ್ಪದ್, ಜಗದೀಶ್ ಪಲ್ಲೇದ್, ಪ್ರಕಾಶ್ ಕೋರಿ, ಚನ್ನಬಸಪ್ಪ ಸೂಡಿ, ಉಮೇಶ್ ನರೇಗಲ್, ಶರಣಪ್ಪ ಕೋರಿ, ಮುತ್ತು ವಾಲಿ, ಮಲ್ಲಪ್ಪ ಪಲ್ಲೇದ್, ಸೇರಿದಂತೆ ಇನ್ನು ಅನೇಕ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಒಂದೆಡೆ ಪಟಾಕಿ ಸದ್ದು, ಮತ್ತೊಂದೆಡೆ ಸಿಹಿ ಹಂಚಿದ್ದು, ಕಾರ್ಯಕರ್ತರ ಹುಮ್ಮಸ್ಸು ದ್ವಿಗುಣಗೊಂಡಿದ್ದು, ಕಂಡು ಬಂತು.
Post a Comment

Post a Comment