-->
Bookmark

Gajendragad : ಕವಿ ಎಂ ಡಿ ಗೋಗೇರಿ ಅವರದು ಮುಸ್ಲಿಂ ದೇಹ-ಕನ್ನಡ ಮನಸ್ಸು - ಡಾ. ಮೈತ್ರೇಯಿಣಿ

Gajendragad : ಕವಿ ಎಂ ಡಿ ಗೋಗೇರಿ ಅವರದು ಮುಸ್ಲಿಂ ದೇಹ-ಕನ್ನಡ ಮನಸ್ಸು - ಡಾ. ಮೈತ್ರೇಯಿಣಿ 
ಗಜೇಂದ್ರಗಡ : (Dec_09_2023)

ಮಕ್ಕಳ ಸಾಹಿತ್ಯ, ಹಾಸ್ಯ, ವಿಡಂಬನೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕವಿ ಎಂ ಡಿ ಗೋಗೇರಿ ಅವರದು ಮುಸ್ಲಿಂ ದೇಹ-ಕನ್ನಡ ಮನಸ್ಸು ಹೊಂದಿದವರಾಗಿದ್ದರು ಎಂದು ಪ್ರಾಧ್ಯಾಪಕರಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು. ಗೋಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಜೇಂದ್ರಗಡ ತಾಲೂಕಾ ಕ.ಸಾ.ಪ ಆಯೋಜಿಸಿದ್ದ ಎಂ ಡಿ ಗೋಗೇರಿ ಅವರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಅವರು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡುತ್ತಾ, ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಗೋಗೇರಿ ಅವರು, ಇಂದಿನ ಪೀಳಿಗೆಯವರಿಗೆ ಮಾದರಿ ಎಂದರು. ಕವಿ ಗೋಗೇರಿ ಅವರು ಕನ್ನಡ ಭಾಷಾ ಸಂಸ್ಕೃತಿಯ ಜೊತೆಗೆ ಸೌಹಾರ್ದ ಸಂಸ್ಕೃತಿಗೂ ಆದ್ಯತೆ ನೀಡಿದ್ದರು. ಇಂದಿಗೂ ಮಕ್ಕಳ ಸಾಹಿತ್ಯದ ರತ್ನತ್ರಯರ ಸಾಲಿನಲ್ಲಿ ಇವರು ಇರುವುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಗರಿ ಎನ್ನಬಹುದು. ಗದಗ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ 
ಗದಗ ಜಿಲ್ಲಾ ಕ.ಸಾ.ಪ ಅವರಿಗೆ ಗೌರವ ನೀಡಿದ್ದು, ಹೆಮ್ಮೆ ಎಂದು ಹೇಳಿದರು. 
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗದಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಮಾತನಾಡಿ, ನಮ್ಮ ಜಿಲ್ಲೆಯ ಸಮನ್ವಯ ಕವಿ ಎಂಡಿ ಗೋಗೇರಿ ಅವರ ಎಲ್ಲ ಕೃತಿಗಳನ್ನು ಮರು ಮುದ್ರಣ ಮಾಡಿ ಮಕ್ಕಳಿಗೆ ಓದುವ ಸದಾವಕಾಶ ಅವರ ಕುಟುಂಬದವರು ಮಾಡಬೇಕು ಎಂದರು. ಅವರ ಕೃತಿಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರು ನಮ್ಮೊಂದಿಗೆ ಇಲ್ಲದಿರಬಹುದು. ಆದ್ರೆ, ಅವರ ಕೃತಿಗಳಲ್ಲಿ ನಾವು ಅವರನ್ನು ಕಾಣಬೇಕು. ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಸಾಹಿತಿಗಳನ್ನು ಗುರುತುಸಿ, ಪ್ರಶಸ್ತಿ ನೀಡಿದರೆ ಪ್ರೋತ್ಸಾಹ ಆಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕ.ಸಾ.ಪ ಅಧ್ಯಕ್ಷ ಅಮರೇಶ್ ಗಾಣಗೇರ್ ಮಾತನಾಡಿ, ಕವಿ ಎಂ ಡಿ ಗೋಗೇರಿ ಅವರ ಹುಟ್ಟೂರು ಗೋಗೇರಿ ಗ್ರಾಮವು ಸೌಹಾರ್ದ ಗ್ರಾಮವಾಗಿದ್ದು, ನಮ್ಮ ನಾಡಿಗೆ ಮಾದರಿಯಾಗಿದೆ‌. ಮುಂಬರುವ ದಿನಗಳಲ್ಲಿ ಗಜೇಂದ್ರಗಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ್ನುವನ್ನು ಗೋಗೇರಿಯಲ್ಲಿ ಏರ್ಪಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು. 
ಇನ್ನೂ ಎಂ.ಡಿ ಗೋಗೇರಿ ಅವರ ಸುಪುತ್ರ ಆರ್ ಎಂ ಗೋಗೇರಿ ಅವರು ಮಾತನಾಡಿ, ನಮ್ಮ ತಂದೆಯವರ ಹೆಸರಿನಲ್ಲಿ ಗೋಗೇರಿ ಗ್ರಾಮದಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಒಂದು ಮಾದರಿ ಗ್ರಂಥಾಲಯ ಮಾಡುವ ಆಯೋಜನೆ ಮಾಡಲಾಗುವುದು ಎಂದು ಹೇಳಿದರು. 
ಕವಿ ರಂಜಾನ್ ಹೆಬಸೂರ್ ಅವರು ಎಂ ಡಿ ಗೋಗೇರಿ ಅವರ ಕವಿತೆಗಳನ್ನು ವಾಚಿಸಿದರು. ಗ್ರಾಮದ ಹಿರಿಯರಾದ ಬಸವರಾಜ್ ಮೂಲಿಮನಿ, ಹೇಮಾಪತಿ ಭೋಸಲೆ, ಕೆ ಎಂ ಅಡವಿ, ಕೆ ಎಸ್ ಕೋಡತಗೇರಿ,
ಮಲ್ಲಿಕಾರ್ಜುನ್ ಗಾರ್ಗಿ, ಮಾತನಾಡಿದರು. ಶಿಕ್ಷಕ ಆರ್ ಕೆ ಬಾಗವಾನ ಅವರು ಸ್ವಾಗತಿಸಿ, ಪರಿಚಯಿಸಿದರು. ಸಮಾರರಂಭದಲ್ಲಿ ಮುಖ್ಯೋಪಾಧ್ಯರಾದ ಕೆ ಎಸ್ ರಾಜೂರ್, ಆರ್ ಆಯ್ ಬಾಗವಾನ್, ಕ.ಸಾ.ಪ ಸದಸ್ಯರಾದ ಗಂಗಪ್ಪ ಗುಂಡೆ, ಎಂ ಡಿ ಬಾಗವಾನ್, ಕೆ ಕೆ ಬಾಗವಾನ್ ಬಸವರಾಜ್ ಮಾದರ್ ವಜೀರ್ ನಧಾಪ್ ಇದ್ದರು. ಶಿಕ್ಷಕರಾದ ಪರಶು ಹೋರಪೇಟಿ ನಿರೂಪಿಸಿದ್ರೆ, ಬಿ ಎಸ್ ಬಳಿಗೇರ ವಂದಿಸಿದರು
Post a Comment

Post a Comment