-->
Bookmark

Gajendragad : ಯುಗಾದಿಗೆ ಮಳೆ, ಬೆಳೆ ಮಾಹಿತಿ ನೀಡುವ ಕಾಲಕಾಲೇಶ್ವರ : ಯಶರಾಜ್ ಘೋರ್ಪಡೆ

Gajendragad : ಯುಗಾದಿಗೆ ಮಳೆ, ಬೆಳೆ ಮಾಹಿತಿ ನೀಡುವ  ಕಾಲಕಾಲೇಶ್ವರ : ಯಶರಾಜ್ ಘೋರ್ಪಡೆ 
ಗಜೇಂದ್ರಗಡ : (Dec_09_2023)
ದಕ್ಷಿಣ ಕಾಶಿ ಕಾಲಕಾಲೇಶ್ವರ ದೈವ ಭಕ್ತಿಗೆ ಮತ್ತೊಂದು ಹೆಸರು ಎಂದು ಯಶ್ ರಾಜ್ ಘೋರ್ಪಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಲಕಾಲೇಶ್ವರ ದೇವಸ್ಥಾನ ಆವರಣದಲ್ಲಿ ಕನಸು ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲಕಾಲೇಶ್ವರ ದೇವಸ್ಥಾನ ತನ್ನದೇ ಪಾರಂಪರಿಕ ಇತಿಹಾಸವನ್ನ ಹೊಂದಿದೆ. ಈ ಭಾಗದಲ್ಲಿ ದೈವ ಭಕ್ತಿಗೆ ಮತ್ತೊಂದು ಹೆಸರೇ ಕಾಲಕಾಲೇಶ್ವರ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಆಗಮುಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ ಏನೇ ಬೇಡಿಕೊಂಡರು ಅದು ಈಡೇರಲಿದೆ ಎಂದು ಹೇಳಿದರು.
ವಾರ್ಷಿಕ ಮಳೆಯಾಗುವ ವರದಿಯೂ ಈ ದೇವಸ್ಥಾನದಲ್ಲಿ ಸಿಗಲಿದೆ. ಯುಗಾದಿಗೆ ಯಾವ ಬೆಳೆ ಬೆಳೆದರೆ ಉತ್ತಮ, ಈ ವರ್ಷ ಅತಿ ಹೆಚ್ಚು ಬೆಳೆಯುವ ಬೆಳೆ ಯಾವುದು ಎಂಬುದನ್ನು ಸಹ ಇಲ್ಲಿ ಹೇಳಲಾಗತ್ತೆ. (ಪ್ರಕೃತಿ ಸಂಕೇತದ ಮೂಲಕ ) 
ಈ ಹಿಂದೆ ಭಕ್ತರು ಗಂಭೀರವಾದ ಖಾಯಿಲೆಗಳಿಗೆ ತುತ್ತಾದಾಗ, ಅಂತರ ಗಂಗೆಯ ನೀರನ್ನ ಕೊಟ್ಟು ಜೀವ ಉಳಿಸಿದ ಅದೆಷ್ಟೋ ಉದಾಹರಣೆಗಳು ಇವೆ ಎಂದು ಯಶರಾಜ್ ಘೋರ್ಪಡೆ ಕಾಲಕಾಲೇಶ್ವರ ಪವಾಡದ ಬಗ್ಗೆ ವಿವರಿಸಿದರು. 
ದೇವಸ್ಥಾನ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್ ಅವರು, ಕನಸು ಸೇವಾ ಫೌಂಡೇಶನ್ ಕೆಲಸ ಕಾರ್ಯ ಹೀಗೆ ನಡೆಯಲಿ ಎಂದು ಶುಭ ಹಾರೈಸಿದ್ದಾರೆ. 
ಕನಸು ಸೇವಾ ಫೌಂಡೇಶನ್ ಅಧ್ಯಕ್ಷರಾದ ರೇಣುಕಾ ಏವೂರ್ ಮಾತನಾಡಿ, ಕಾಲಕಾಲೇಶ್ವರ ದೇವಸ್ಥಾನದ ಪವಾಡಗಳನ್ನ ಕೇಳಿ ಇಷ್ಟೊಂದು ಮಾಹಿತಿ ಇರಲಿಲ್ಲ. ಇಂದಿನ ಪೀಳಿಗೆಗೆ ಇಂತಹ ವಿಷಯಗಳನ್ನ ತಿಳಿಸುವ ಅಗತ್ಯ ಇದೆ ಎಂದು ಕನಸು ಸೇವಾ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಏವೂರ್ ಹೇಳಿದರು. 
ಕನಸು ಸೇವಾ ಫೌಂಡೇಶನ್ ನಲ್ಲಿ ತರಬೇತಿ ಪಡೆಯುತ್ತಿರುವ ಮಹಿಳೆಯರು ಇದೆಲ್ಲ ಮಾಹಿತಿ ಹೇಳುತ್ತಿದ್ದಂತೆ ಆಶ್ಚರ್ಯ ಚಕಿತರಾದ್ರು.
Post a Comment

Post a Comment