-->
Bookmark

Gajendragad : ಒಗ್ಗಟ್ಟಿನಿಂದ ಸಮಸ್ಯೆ ಪರಿಹಾರ : ಕಳಕಪ್ಪ ಪೋತಾ

Gajendragad : ಒಗ್ಗಟ್ಟಿನಿಂದ ಸಮಸ್ಯೆ ಪರಿಹಾರ : ಕಳಕಪ್ಪ ಪೋತಾ 

ಗಜೇಂದ್ರಗಡ : (Jan_20_2023)
ಗದಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ವಿವಿದೊದ್ದೇಶಗಳ ಸಂಘದಿಂದ ಬೀದಿವದಿ ವ್ಯಾಪಾರಸ್ಥರ ದಿನವನ್ನ ಆಚರಿಸಲಾಯ್ತು. ಗಜೇಂದ್ರಗಡದಲ್ಲಿ ಬೀದಿ ವ್ಯಾಪಾರಿಗಳ ಎಲ್ಲ ಸಮಸ್ಯೆಗಳನ್ನ ಪರಿಹರಿಸುವ ಉದ್ದೇಶದಿಂದ ಆರಂಭವಾದ ವಿವಿದೊದ್ದೇಶ ಸಂಘ ಪಟ್ಟಣದಲ್ಲಿ ಕ್ರಾಂತಿಯನ್ನ ಮಾಡಲಿದೆ. ಬೀದಿಬದಿ ವ್ಯಾಪಾರಸ್ಥರ ವಿವಿದೊದ್ದೇಶ ಸಂಘದ ತಾಲೂಕಾಧ್ಯಕ್ಷ ಕಳಕಪ್ಪ ಪೋತಾ ಮಾತನಾಡಿ, ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಹೋರಾಡಬೇಕಿದೆ. ನಮ್ಮವರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ಜಿಲ್ಲಾಧ್ಯಕ್ಷರ ಅಣತಿಯಂತೆ, ಸಂಘದ ಕೆಲಸ ಕಾರ್ಯಗಳನ್ನ ಮಾಡಬೇಕಿದೆ ಎಂದು ಇದೇ ವೇಳೆ ಹೇಳಿದರು. 

ಕಾರ್ಯಕ್ರಮದಲ್ಲಿ ತಾಲೂಕಾಧ್ಯಕ್ಷ ಕಳಕಪ್ಪ ಪೋತಾ, ಪ್ರಧಾನ ಕಾರ್ಯದರ್ಶಿ ಮಹಮ್ಮದಗೌಸ್ ಅಕ್ಕಿ, ಸಂಘದ ಸದಸ್ಯರಾದ ಯಾಸಿನ್ ಮಾರನಬಸರಿ, ರಾಘು ಹೂಗಾರ್, ನಾಗಪ್ಪ ಗಾರ್ಗಿ, ಈರಣ್ಣ ಸೋಬರದ್, ಕುಮಾರ್ ರಾಠೋಡ್, ಅಲ್ಲಾಭಕ್ಷಿ ಮುಚ್ಚಾಲಿ, ಪಾರ್ವತಿ ರಾಠೋಡ್, ಚೌಡಮ್ಮ ಯಲಪು, ಕುಮಾರ್ ಝುಂಜಾ, ಮೆಹಬೂಬ್ ಡಾಲಾಯತ್, ಮುಸ್ತಾಕ್ ಅಕ್ಕಿ, ಮುತ್ತು ನಾಗರಾಳ್, ನಾಗಪ್ಪ ಅಜಮೀರ್, ಮಂಜುನಾಥ್ ಹೂಗಾರ್, ಅಲ್ತಾಫ್ ನಾಯಿಕೊಡಿ, ಉಮಲೆಪ್ಪ ರಾಠೋಡ್, ಅಂಬಾಸಾ ರಂಗ್ರೇಜ್, ಹನಮಂತಪ್ಪ ಹೂಗಾರ್, ರಾಘೂ ಮಾಳೊತ್ತರ್ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು, ಸ್ಥಳೀಯರು ಭಾಗವಹಿಸಿದ್ದರು.
Post a Comment

Post a Comment