-->
Bookmark

Mapsa : ಗೋವಾದಲ್ಲೂ ಸೇವಾಲಾಲ್ ಜಯಂತಿ : ಧರ್ಮಗುರುವಿಗೆ ಸಾಂಸ್ಕೃತಿಕ ನಮನ

Mapsa : ಗೋವಾದಲ್ಲೂ ಸೇವಾಲಾಲ್ ಜಯಂತಿ : ಧರ್ಮಗುರುವಿಗೆ ಸಾಂಸ್ಕೃತಿಕ ನಮನ 
ಮಾಪ್ಸಾ :(Feb_15_2024)
ಗೋವಾ ಎಂದಾಕ್ಷಣ ನೆನಪಿಗೆ ಬರುವುದೇ ಉತ್ತರ ಕರ್ನಾಟಕದ ಗುಳೆ ಹೊರಡುವ ಜನ. ಈ ಮಧ್ಯೆ, ಉತ್ತರ ಕರ್ನಾಟಕದಿಂದ ಬಂಜಾರ ಸಮುದಾಯದ ಜನರು ಅಪಾರ ಸಂಖ್ಯೆಯಲ್ಲಿ ಗೋವಾದಲ್ಲೇ ನೆಲೆ ಕಂಡುಕೊಂಡಿದ್ದಾರೆ.‌
ಅವರೆಲ್ಲರೂ ಗೋವಾದಲ್ಲಿ ಬಂಜಾರ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುತ್ತಿದ್ದಾರೆ. ಅವರೆಲ್ಲರೂ ಫೆಬ್ರವರಿ 15 ರಂದು ಶ್ರೀ ಸಂತ ಸೇವಾಲಾಲಲ್ ಮಹಾರಾಜರ ಜಯಂತಿಯನ್ನ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಒಂದುವಾರದಿಂದಲೇ ಸಕಲ ಸಿದ್ಧತೆಯಲ್ಲಿ ತೊಡಗಿದ್ದರು. ಮಹಿಳೆಯರು, ಮಕ್ಕಳು ಗೋವಾದಲ್ಲಿ ನಮ್ಮ ಸಂಸ್ಕೃತಿ ಪ್ರದರ್ಶನ ಮಾಡಿದರು. 
ಗೋವಾದಲ್ಲೆ ನೆಲೆ ಕಂಡುಕೊಂಡು ತಮ್ಮಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಹ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಬಂಜಾರ ಸಮುದಾಯವನ್ನ ಉಳಿಸಿ, ಬೆಳೆಸುತ್ತಿರುವ ಶ್ರೇಯ ಈ ನಮ್ಮ ಕುಲ ಬಾಂಧವರಿಗೆ ಸಲ್ಲಬೇಕು.‌ 
ಉತ್ತರ ಗೋವಾ ಮಾಪ್ಸಾ ಜಿಲ್ಲೆಯ ಉಕ್ಕಸಾಯಿ ಎಂಬಲ್ಲಿ ಆಚರಿಸಲಾದ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಸ್ಥಳೀಯ ಎಂ.ಎಲ್.ಎ ಕಾರ್ಲೋಸ್ ಅವರು ಭಾಗವಹಸಿದ್ದರು. 
ಕಾರ್ಯಕ್ರಮದಲ್ಲಿ ಮಂಜುನಾಥ್ ನಾಯಕ್ ಮಾನಿಪೂರ್, ಹನುಮಂತ್ ಸೋಮಪ್ಪ ರಾಠೋಡ್, ಕಾಳು ನಾಗಾವಿ, ಹರಿಶ್ ಕಳಸಾಪೂರ್, ಬಂಜಾರ ಸಮುದಾಯದ ಅಧ್ಯಕ್ಷ ಸರೇಶ್ ಕಟ್ಟಿಮನಿ, ಶಂಕರ್ ಲಮಾಣಿ ನಾಗಾವಿ ತಾಂಡಾ, ರವಿ ಬಂಜಾರ್, ಸೋಮನಾಥ್ ಕಳಸಾಪೂರ್, ರವಿ ಕಳಸಾಪೂರ್, ಗೋಪಾಲ್ ಕಳಸಾಪೂಋ, ದೇವಾನಂದ್ ಹತ್ತಿಕಟ್ಟಿ, ಜಗಣು ರಾಠೋಡ್, ಕುಮಾರ್ ರಾಠೋಡ್, ಪರಶು ಕಟ್ಟಿಮನಿ ಕಳಸಾಪೂರ್ ತಾಂಡಾ, ಗುರು ಕಟ್ಟಿಮನಿ, ಕಿಶೋರ್ ರಾಠೋಡ್, ಚೇತನ್, ಪ್ರತಾಪ್, ತಾಂಡಾ ಹಿರಿಯರಾದ ಎಮು ನಾಗಾವಿ ಹಾಜರಿದ್ದರು.
ಇನ್ನೂ, ಮಹಿಳಾ ಮಣಿಗಳಾದ ಶ್ರೀಮತಿ ರೇಣುಕಾ ಮಂಜು ನಾಯಕ್, ಶ್ರೀಮತಿ ರುಕ್ಮಿಣಿ ಹನುಂತ್ ರಾಠೋಡ್, ಶ್ರೀಮತಿ ಕೌಶಲ್ಯ ರಾಠೋಡ್, ಶ್ರೀಮತಿ ನಾಯರಾ, ಶ್ರೀಮತಿ ಹೇಮವ್ವ, ಶ್ರೀಮತಿ ಯಲ್ಲವ್ವ ಹತ್ತಿಕಟ್ಟಿ, ಶ್ರೀಮತಿ ಮೇಣಿ ರಾಠೋಡ್, ಶ್ರೀಮತಿ ನೀಲಾ ಚವ್ಹಾಣ್, ಶ್ರೀಮತಿ ಶಾರವ್ವ, ಶ್ರೀಮತಿ ಶಾರವ್ವ ಸುರೇಶ್ ಕಟ್ಟಿಮನಿ, ಶ್ರೀಮತಿ ಲಕ್ಷ್ಮೀ ಕಟ್ಟಿಮನಿ, ಶ್ರೀಮತಿ ವಸಂತ್ ಕಟ್ಟಿಮನಿ, ಶ್ರೀಮತಿ ಗಂಗವ್ವ ಲಮಾಣಿ, ಶ್ರೀಮತಿ ಗೀತಾ ಚವ್ಹಾಣ್ ಸೇರಿದಂತೆ ಅಲ್ಲಿ ನೆಲೆಸಿರುವ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
Post a Comment

Post a Comment