-->
Bookmark

Belagavi : ದಕ್ಷಿಣ ಭಾರತದ ಮೊದಲ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಭಾಗವಾದ ಕಿರಾ ನ್ಯೂಸ್

Belagavi  : ದಕ್ಷಿಣ ಭಾರತದ ಮೊದಲ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಭಾಗವಾದ ಕಿರಾ ನ್ಯೂಸ್  
ಬೆಳಗಾವಿ : (Mar_08_2024)
ದಕ್ಷಿಣ ಭಾರತದಲ್ಲಿ ಮೊದಲ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಮತ್ತು ಭಾರತದ ಮೂರನೇ ಡಿಜಿಟಲ್ ಅಸೋಸಿಯೇಷನ್ ನ ಉದ್ಘಾಟನೆಗೆ ಸಾಕ್ಷಿಯಾಗಿದ್ದು ಸಂತಸ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಉದ್ಘಾಟಿಸಿ, ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಪ್ರಚಲಿತ ಘಟನೆಗಳು ಕ್ಷಣಾರ್ಧದಲ್ಲೆ ಸುದ್ದಿಗಳು ನಮ್ಮ ಕೈಸೇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 
ಡಿಜಿಟಲ್ ಮಿಡಿಯಾದಲ್ಲಿ ಸುದ್ದಿ ಬಂದಿದೆ ಎಂದರೆ ಅದು ಸತ್ತವೆಂದೆ ಭಾವಿಸುತ್ತೇವೆ. ಹೀಗಾಗಿ, ಎಲ್ಲರ ಮೇಲು ಜವಾಬ್ದಾರಿ ಇದೆ. ಅದನ್ನ ದಿಟ್ಟತನದಿಂದ ನಿಭಾಯಿಸಿ ಎಂದು ಕಿವಿ ಮಾತು ಹೇಳಿದರು.
ಭಾತರದಲ್ಲಿ ಡಿಜಿಟಲ್ ಮಾಧ್ಯಮ ಅಂಬೆಗಾಲಿಡುತ್ತಿದ್ದು, ಮುಂದೊಂದು ದಿನ ಭವ್ಯ ಭಾರತ ನಿರ್ಮಾಣದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲ ಡಿಜಿಟಲ್ ಮಾಧ್ಯಮ ಕ್ರಾಂತಿಯನ್ನ ಮಾಡಲಿದೆ. 
ಇನ್ನೂ, ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ನ‌ ಭಾಗವಾಗಲಿದೆ ಕಿರಾ ನ್ಯೂಸ್ ಕನ್ನಡ. ಕಿರಾ ನ್ಯೂಸ್ ಸಂಪಾದಕ ಕೃಷ್ಣ ರಾಠೋಡ್ ಮತ್ತು ಕಾನೂನು ಸಲಹೆಗಾರ ಶಂಕರ್ ರಾಠೋಡ್ ಮತ್ತು ತಂಡ ಭಾಗವಹಿಸಿತ್ತು. 
Post a Comment

Post a Comment