-->
Bookmark

Gadag : ಡಾ.ಪ್ರಭು ಗಂಜಿಹಾಳ ಅಯೋಧ್ಯೆ ಕವಿ ಸಮ್ಮೇಳನಕ್ಕೆ ಆಯ್ಕೆ

Gadag : ಡಾ.ಪ್ರಭು ಗಂಜಿಹಾಳ  ಅಯೋಧ್ಯೆ ಕವಿ ಸಮ್ಮೇಳನಕ್ಕೆ ಆಯ್ಕೆ
 ಗದಗ  :  (Mar_08_2024)
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮಾ.೧೫ ರಂದು ನಡೆಯಲಿರುವ ರಾಮೋತ್ಸವ-೨೪ರ    ‘ಕವಿ ಸಮ್ಮೇಲನ’ ದಲ್ಲಿ  ಕಾವ್ಯ ವಾಚನಕ್ಕೆ   ಕವಿ, ಕನ್ನಡ ಸಹಪ್ರಾಧ್ಯಾಪಕ ಡಾ.ಪ್ರಭು ಗಂಜಿಹಾಳ ಆಯ್ಕೆ ಆಗಿದ್ದಾರೆ. 

ಅಯೋಧ್ಯೆಯಲ್ಲಿ ಜನೇವರಿ ೧೪ ರಿಂದ ಆರಂಭವಾಗಿರುವ  ರಾಮೋತ್ಸವ ಸಮಿತಿ -೨೦೨೪ ರ ಕಾರ್ಯಕ್ರಮಗಳು ಮಾ.೨೪ ರವರೆಗೂ ನಡೆಯಲಿದ್ದು, ಮಾ.೧೫ರಂದು  ಬಹುಭಾಷಾ ಕವಿ ಸಮ್ಮೇಲನ ಬಿಹಾರದ ಕವಿ,ಸಾಹಿತಿಗಳಾದ  ಈಶ್ವರ ಚಂದ್ರ ಝಾ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ರಾಮೋತ್ಸವ-೨೦೨೪ರ ಸಮಿತಿ-೫ರ ಸಂಯೋಜಕ ಅಶುತೋಶ ದ್ವಿವೇದಿ ತಿಳಿಸಿದ್ದಾರೆ.  ಕಾವ್ಯವಾಚನಕ್ಕೆ ಆಯ್ಕೆ ಆಗಿರುವ    ಡಾ.ಪ್ರಭು ಗಂಜಿಹಾಳ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಕಲಾ,ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. 
ಕವಿಸಮ್ಮೇಲನದಲ್ಲಿ ಪಾಲ್ಗೊಳ್ಳುತ್ತಿರುವ ಇವರಿಗೆ ನಿವೃತ್ತ ತೋಟಗಾರಿಕಾ ಅಧಿಕಾರಿ ಸಿ.ಆರ್.ಗೌಡರ, ಪ್ರಾಚಾರ್ಯ ಡಾ.ಪಿಎಸ್.ಕಣವಿ, ಡಾ.ಎಸ್.ಬಿ.ಸಜ್ಜನರ್ ಮತ್ತು ಮಹಾವಿದ್ಯಾಲಯದ ಸಿಬ್ಬಂದಿವರ್ಗ, ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಾ.ರಾಜಶೇಖರ ದಾನರಡ್ಡಿ, ಪ್ರೊ.ವಿ.ಎಂ.ಗುರುಮಠ, ಪತ್ರಕರ್ತರಾದ ಮೌನೇಶ ಬಡಿಗೇರ, ಡಾ.ವೀರೇಶ ಹಂಡಿಗಿ, ರಾಘವೇಂದ್ರ ಕುಲಕರ್ಣಿ, ಪ್ರಾ.ಬಸವರಾಜ ಗಂಜಿಹಾಳ, ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಸೇರಿದಂತೆ ಸಾಹಿತಿಗಳು, ಕಲಾವಿದರು ಮತ್ತು ಪತ್ರಕರ್ತ ಬಳಗದ ಸದಸ್ಯರು ಅಭಿನಂದಿಸಿದ್ದಾರೆ. 

Post a Comment

Post a Comment