-->
Bookmark

Gajendragad : ನರೇಗಲ್ ಸಮಾಜಿಕ ಜಾಲತಾಣ ಕಮಿಟಿ ರಚನೆ‌ : ಯುವಕರಿಗೆ ಆದ್ಯತೆ

Gajendragad : ನರೇಗಲ್ ಸಮಾಜಿಕ ಜಾಲತಾಣ ಕಮಿಟಿ ರಚನೆ‌ : ಯುವಕರಿಗೆ ಆದ್ಯತೆ 

ಗಜೇಂದ್ರಗಡ : (Mar_20_2024)

ನರೇಗಲ್ ಬ್ಲಾಕ್ ಸಾಮಾಜಿಕ ಜಾಲತಾಣದ ಸಮಿತಿ ರಚನೆಯಾಗಿದ್ದು, ಯುವಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಲೋಕ ಸಮರಕ್ಕೆ ದಿನಗಣನೆ ಶುರುವಾಗಿದ್ದು, ನೂತನ‌ ಕಮಿಟಿಗೆ ಆನೆ ಬಲ ಬಂದಂತಾಗಿದೆ. ನರೇಗಲ್ ಬ್ಲಾಕ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದ್ದಾರೆ. ಸಿದ್ದು ಗೊಂಗಡಶೆಟ್ಟಿಮಠ ಅಧ್ಯಕ್ಷರಾದ್ರೆ, ಹರೀಶ್ ಪಮ್ಮಾರ್ ಮತ್ತು ಅಂದಪ್ಪ ರಾಠೋಡ್ ಉಪಾಧ್ಯಕ್ಷರಾಗಿದ್ದಾರೆ. ಇನ್ನೂ, ಅಶೋಕ್ ಕೊಪ್ಪಳ, ಬಸವರಾಜ್ ಚನ್ನಿ, ಸಂಗಯ್ಯ ಭೂಸನೂರಮಠ, ಸಕ್ಕರಗೌಡ ಪಾಟೀಲ್, ಪ್ರಕಾಶ್ ರಾಠೋಡ್ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಗೆ ಶಾಸಕರಾದ ಜಿ.ಎಸ್. ಪಾಟೀಲ್ ಆಯ್ಕೆ ಮಾಡಲು ಸೂಚಿಸಿದ್ದರು. ಇವರ ಸೂಚನೆ ಮೇರೆಗೆ ಕೆಪಿಸಿಸಿಯ ಕಮ್ಯುನಿಕೇಷನ್ ಸೋಶಿಯಲ್ ಮಿಡಿಯಾದ ಚೇರ್ಮನ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಆದೇಶ ಹೊರಡಿಸಿದ್ದಾರೆ.
Post a Comment

Post a Comment