-->
Bookmark

Gajendragad : ಸ್ಪರ್ಧಾತ್ಮಕ ಪರೀಕ್ಷೆಗೆ ಆತ್ಮಸ್ಥೈರ್ಯ ಅತ್ಯವಶ್ಯ; ಮಲ್ಲಯ್ಯಸ್ವಾಮಿ ಗುರುಸ್ಥಲಮಠ

Gajendragad : ಸ್ಪರ್ಧಾತ್ಮಕ ಪರೀಕ್ಷೆಗೆ ಆತ್ಮಸ್ಥೈರ್ಯ ಅತ್ಯವಶ್ಯ; ಮಲ್ಲಯ್ಯಸ್ವಾಮಿ ಗುರುಸ್ಥಲಮಠ 
ಗಜೇಂದ್ರಗಡ :  (Aprl_01_2014)

ವಿದ್ಯಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದರೆ ವಿಷಯ ಜ್ಞಾನದ ಜತೆಗೆ ಆತ್ಮವಿಶ್ವಾಸ ಅವಶ್ಯ. ಇಲ್ಲವಾದಲ್ಲಿ ವಿಷಯ ಜ್ಞಾನವಿದ್ದರೂ ವಂಚಿತಗೊಳ್ಳಬೇಕಾಗುತ್ತದೆ ಎಂದು ಕಾಲಕಾಲೇಶ್ವರ ದೇವಸ್ಥಾನದ ಅರ್ಚಕರಾದ ಮಲ್ಲಯ್ಯಸ್ವಾಮಿ ಗುರುಸ್ಥಲಮಠ ಹೇಳಿದರು.

ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಸ್ನೇಹ-ಸೇತು ಗ್ರಾಮೀಣಾಭಿವೃದ್ಧಿ ಯುವ ಮಂಡಳದ ವತಿಯಿಂದ ರವಿವಾರ "ಅಥರ್ವ ನವೋದಯ ಕೋಚಿಂಗ್ ಸೆಂಟರ್" ನೇತೃತ್ವದಲ್ಲಿ ನಡೆದ ಅಥರ್ವ ಜೀನಿಯಸ್ ಅವಾರ್ಡ್-2024" ಎಂಬ ಪ್ರತಿಭಾನ್ವಷಣೆಯ ರಚನಾತ್ಮಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಕಾಳಜಿಯ ಜೊತೆಗೆ ವಿದ್ಯಾರ್ಥಿಗಳ ಮತ್ತು ಉದ್ಯೋಗಾಕಾಂಕ್ಷಿಗಳಿಗಾಗಿ ಮಾರ್ಗದರ್ಶನ ನೀಡುವಲ್ಲಿ ಮಾಧ್ಯಮಗಳ ಪ್ರಯತ್ನ ತುಂಬಾ ಉಪಯುಕ್ತವಾಗಿದೆ. ಆ ನಿಟ್ಟಿನಲ್ಲಿ ಗದಗವಾಣಿ  ಮಾಧ್ಯಮ ಸಂಸ್ಥೆಯ ಪದಾಧಿಕಾರಿಗಳ ಕನಸಿನ ಕೂಸಾದ " ಅಥರ್ವ ನವೋದಯ ಕೋಚಿಂಗ್  ಸೆಂಟರ್ " ಕಾರ್ಯ ಶ್ಲಾಘನೀಯ. 

ಕಾರ್ಯಕ್ರಮ ಉದ್ಘಾಟಿಸಿದ ಶಶಿಧರ ಹೂಗಾರ ಮತ್ತು  ಸುರೇಶ ಬಸವರಡ್ಡೇರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ಪಡಬೇಕಿದೆ. ಇಂದಿನ ಪೀಳಿಗೆ ಜಗತ್ತಿನೊಂದಿಗೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಕಾಲಕ್ಕೆ ತಕ್ಕಂತೆ ಗ್ರಾಮೀಣ ಪ್ರದೇಶದ ಜನತೆಯೂ ಜಗತ್ತಿನೊಂದಿಗೆ ಹೊಂದಿಕೊಳ್ಳಲೇಬೇಕು ದೌಡಾಯಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಅಥರ್ವ ನವೋದಯ ಕೋಚಿಂಗ್ ಸೆಂಟರ್ ಸೇವೆ ಸಲ್ಲಿಸಲಿದೆ ಎಂದು ನುಡಿದರು.

ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕ ಡಿ.ಜಿ.ತಾಳಿಕೋಟಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಂಪತ ಆಕಳವಾಡಿ, ಹೆಸ್ಕಾಂ ಇಲಾಖೆಯ  ಶರಣಪ್ಪ ಮಹಾಮನಿ ಮಾತನಾಡಿದರು.

ಇದೇ ವೇಳೆ ಪತ್ರಕರ್ತ ಸೋಮು ಲದ್ದಿಮಠ, ಮಂಜುನಾಥ ಅಂಗಡಿ, ಸೋಮಪ್ಪ ರಾಮಚಂದ್ರಪ್ಪ ರಾಠೋಡ, ರಮೇಶಗೌಡ ರಾಮಶೆಟ್ಟಿ, ವಿನಾಯಕ ಅಬ್ಬಿಗೇರಿ, ಸಂತೋಷ ಬಡಿಗೇರ,  ದಾನು ರಾಠೋಡ,  ಅಲ್ಲಾಭಕ್ಷಿ ನಧಾಪ, ಸದ್ದಾಂಹುಸೇನ ಜಿಗಳೂರ, ಕೆ.ಎಂ.ಶರಣಯ್ಯಸ್ವಾಮಿ, ಉದಯಕುಮಾರ್ ವಡ್ಡಿ ,  ಮಂಜುನಾಥ ಕುದರಿಕೋಟಿ, ವೀರಣ್ಣ ಸಂಗಳದ, ಭಾರತಿ ಹಿರೇಮಠ, ರವಿ ಛಲವಾದಿ , ಮಂಜುನಾಥ ದೊಡ್ಡಮನಿ ಮುರ್ತುಜಾ ಬದಾಮಿ ಸೇರಿದಂತೆ ಇತರರು ಇದ್ದರು.
Post a Comment

Post a Comment