-->
Bookmark

Gajendragad : 'ಯುಗದ ಕವಿ' ಪುಸ್ತಕ ಲೋಕಾರ್ಪಣೆ

Gajendragad : 'ಯುಗದ ಕವಿ' ಪುಸ್ತಕ ಲೋಕಾರ್ಪಣೆ
ಗಜೇಂದ್ರಗಡ : (Aprl_2024)

ಧಾರವಾಡದಲ್ಲಿ ರವಿವಾರ ಬೆಳಗ್ಗೆ 10ಕ್ಕೆ ಸಂಗಾತ ಪುಸ್ತಕ ಪ್ರಕಟಿಸಿರುವ ರಾಜೇಂದ್ರ ಬಡಿಗೇರ್ ಅವರ 'ಯುಗದ ಕವಿ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದೆ.

ಸಾಹಿತ್ಯಕ ವಾಗ್ವಾದಗಳೇ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ನಾಡಿನ ಇಬ್ಬರು ಮಹತ್ವದ ಸಾಹಿತಿಗಳಾದ ಕುವೆಂಪು ಮತ್ತು ಬೇಂದ್ರೆ ಜಗತ್ತಿನ ಶೀತಲ ಸಮರವನ್ನು ನಿಷ್ಠುರವಾಗಿ ಈ ಕೃತಿ ಕಟ್ಟಿಕೊಡುತ್ತದೆ.

ಈ ಕೃತಿ ಲೋಕಾರ್ಪಣೆಗೆ ವಿಮರ್ಶಕರಾದ ರಾಜೇಂದ್ರ ಚೆನ್ನಿ, ಸಂಸ್ಕೃತಿ ಚಿಂತಕರಾದ ಅರವಿಂದ ಮಾಲಗತ್ತಿ, ಹಿರಿಯ ಕಥೆಗಾರ ರಾಘವೇಂದ್ರ ಪಾಟೀಲ ಪಾಲ್ಗೊಳ್ಳುವರು.

ನಂತರದ ಸಂವಾದ ಗೋಷ್ಠಿಯಲ್ಲಿ ಲೇಖಕರಾದ ರಂಗನಾಥ ಕಂಟನಕುಂಟೆ, ಎಂ.ಡಿ.ಒಕ್ಕುಂದ, ಅನಸೂಯ ಕಾಂಬಳೆ, ಶಶಿಧರ ತೋಡ್ಕರ್, ಸಿ.ಬಿ.ಐನಳ್ಳಿ, ಶಿವಶಂಕರ ಹಿರೇಮಠ ಭಾಗವಹಿಸಲಿದ್ದಾರೆ ಎಂದು ಸಂಗಾತ ಪುಸ್ತಕ ಪ್ರಕಾಶಕ ಟಿ.ಎಸ್. ಗೊರವರ್ ತಿಳಿಸಿದ್ದಾರೆ. 
Post a Comment

Post a Comment