-->
Bookmark

Gajendragad : ದ್ವಿತೀಯ ಪಿಯು ಫಲಿತಾಂಶ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಮೇಲುಗೈ

Gajendragad : ದ್ವಿತೀಯ ಪಿಯು ಫಲಿತಾಂಶ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಮೇಲುಗೈ

ಗಜೇಂದ್ರಗಡ :  ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿನಿಯರಾದ ಅಂಕಿತಾ ಪಾಟೀಲ (94%) ಪ್ರಥಮ ಸ್ಥಾನ, ಕಲ್ಪನಾ ಕುರುಡಗಿ (88.33%) ದ್ವಿತೀಯ ಸ್ಥಾನ ಹಾಗೂ ಭಾರತಿ ಸಂಗಳದ (86.83%) ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ಶೇ.73.07% ಹಾಗೂ ವಾಣಿಜ್ಯ ವಿಭಾಗದ ಶೇ.72.50% ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 34 ವಿದ್ಯಾರ್ಥಿಗಳಲ್ಲಿ 03 ಅತ್ಯುನ್ನತ ಶ್ರೇಣಿ(Distinction), 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪ್ರಥಮ ಸ್ಥಾನ ಗಳಿಸಿದ ಗ್ರಾಮೀಣ ಪ್ರತಿಭೆ ಅಂಕಿತಾ ಪಾಟೀಲ ಮಾತನಾಡಿ "ಸತತ ಪರಿಶ್ರಮ, ಸಾಮಾಜಿಕ ಮಾಧ್ಯಮಗಳ ಮಿತವಾದ ಬಳಕೆ ಹಾಗೂ ಉಪನ್ಯಾಸಕರ ನಿರಂತರ ಮಾರ್ಗದರ್ಶನ ಈ ಸಾಧನೆಗೆ ಮುಖ್ಯ ಕಾರಣ" ಎಂದು ಸಂತಸ ವ್ಯಕ್ತಪಡಿಸಿದರು.

ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟರ, ಕಾಲೇಜು ಪ್ರಾಚಾರ್ಯ ಸಂಗಮೇಶ ಎಸ್. ಬಾಗೂರ, ಅಧ್ಯಾಪಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.
Post a Comment

Post a Comment