ಪ್ರಕಾಶಕರಾದ ಪುಂಡಲೀಕ್ ಕಲ್ಲಿಗನೂರ್
ಗಜೇಂದ್ರಗಡ : (12_2024)
ಗದಗ ಜಿಲ್ಲೆಯಲ್ಲಿ ಕೆಲವು ಸಾಹಿತಿಗಳಿದ್ದಾರೆ. ಅವರ ಸಾಲಿನಲ್ಲಿ ಗುರುತಿಸಿಕೊಂಡವರು ಪುಂಡಲೀಕ್ ಕಲ್ಲಿಗನೂರ್ ಅವರು ಒಬ್ಬರು. ಕಳೆದ ೪೦ ವರ್ಷದಿಂದ ಸಾಹಿತ್ಯ, ಮತ್ತು ಪತ್ರಿಕೋದ್ಯಮದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಖ್ಯಾತ ಕಲಾ ವಿಮರ್ಕಕರಾದ ಕೆ ವಿ ಸುಬ್ರಹ್ಮಣ್ಯಂ ಅವರ ಚಿತ್ರ ಮತ್ತು ಸಾಹಿತ್ಯಗಳ ಪಕ್ಷಿ ನೋಟ ಪುಸ್ತಕ ಲೋಕಾರ್ಪಣೆಗೆ ಸಕಲ ಸಿದ್ಧತೆ ನಡೆದಿದೆ. ಎಪ್ರಿಲ್ 14 ರ ಭಾನುವಾರ ಸಂಜೆ 4 ಗಂಟೆಗೆ ರೇವಡಿ ಅವರ ಪ್ಲಾಟನ ಕಲಾನಿಕೇತನದಲ್ಲಿ ಪುಸ್ತಕ ಬಿಡುಗಡೆ ನಡೆಯಲಿದೆ.
ಚಿತ್ತಾಕ್ಷರದ ಕನ್ನಡ ಪ್ರಕಾಶನದ ಹಾಗೂ ಪುಸ್ತಕ ಮುನ್ನುಡಿ ಬರೆದಿರುವ ಪುಂಡಲೀಕ್ ಕಲ್ಲಿಗನೂರ್ ಸಾಹಿತಿ, ಕಲಾವಿದರಾದ ಕಲಾನಿಕೇತನದಲ್ಲಿ ಮಾಹಿತಿ ನೀಡಿದರು.
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೆ ಬುಕ್ ಬ್ರಹ್ಮ ಸಂಪಾದಕರು ಹಾಗೂ ಬೆಂಗಳೂರಿನ ಸಾಹಿತ್ಯ ಮತ್ತು ಲಲಿತಕಲಾ ಮೀಮಾಂಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುಸ್ತಕ ಬಿಡುಗಡೆಯನ್ನ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು ಡಾ. ಶಿವಾನಂದ್ ಬಂಟೂರ್ ನರವೇರಿಸಲಿದ್ದಾರೆ.
ಗಜೇಂದ್ರಗಡದ ಹಿರಿಯ ಸಾಹಿತಿ ಮತ್ತು ಸಾಂಸ್ಕೃತಿಕ ಚಿಂತಕರು ಪ್ರೊ. ಬಿ.ಕೆ ಕೆಂಚರಡ್ಡಿ ಅವರು ಪ್ರಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಗದಗದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕರು ಪುಸ್ತಕದ ಕುರಿತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ.
ಚಿತ್ತಾಕ್ಷರ ಪುಸ್ತಕದ ಲೇಖಕಿ ಹರಿಶ್ರೀ ವೈ. ಜೆ ಅವರು ಸಹ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀಮತಿ ಮಂಜುಳಾ ರೇವಡಿ ವಹಿಸಲಿದ್ದಾರೆ ಎಂದು ಕನ್ನಡ ಪ್ರಕಾಶಕರಾದ ಪುಂಡಲೀಕ್ ಕಲ್ಲಿಗನೂರ್ ಅವರು ಈ ಮಾಹಿತಿ ನೀಡಿದರು.
Post a Comment