-->
Bookmark

Bagalakote : ಛತ್ತೀಸ್ಗಢದ ವೈದ್ಯೆ "ವೈಶಾಲಿ" ಕನ್ನಡಾಭಿಮಾನ

ಛತ್ತೀಸ್ಗಢದ ವೈದ್ಯೆ "ವೈಶಾಲಿ" ಕನ್ನಡಾಭಿಮಾನ 
ಬಾಗಲಕೋಟೆ ‌: (May_01_2024)

ಭಾರತದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಛತ್ತೀಸ್ಗಢದಿಂದ ಬಂದು ಶಿಕ್ಷಣ ಮುಗಿಸಿ ಮರಳಿ ತಾಯ್ನಾಡಿಗೆ ತೆರಳುತ್ತಿದ್ದಾಗ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವವಮ್ನ ಕಿರಾ ನ್ಯೂಸ್ ಕನ್ನಡದೊಂದಿಗೆ ಹಂಚಿಕೊಂಡರು. 

ನನಗೆ ಮನೆಯಲ್ಲಿ ದೇಶಾದ್ಯಂತ ಓದಲು ಅವಕಾಶ ನೀಡಿದ್ದಾರೆ. ಅದರಂತೆ ಎಲ್ಲರ ಮನೆಯಲ್ಲೂ ಮಹಿಳೆಯರಿಗೆ ಕಲಿಯುವ ವಾತಾವರಣ ಸೃಷ್ಟಿಸಬೇಕು. ಇದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಡಾ. ವೈಶಾಲಿ ಹೇಳಿದರು. 


ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ "ಆರಾಮದಿರಿ" ಪದವನ್ನ ಮೊದಲ ಬಾರಿ ಕೇಳಿದ್ದು, ಎಂದು ಹೇಳಿದರು. ಬೇರೆ ರಾಜ್ಯದಿಂದ ಬಂದ ವೈಶಾಲಿ ಅವರು ನಿರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ಉನ್ನತ ಶಿಕ್ಷಣ ಕಲಿಯಲು ಬಂದ ಉತ್ತರದ ಚೆಲುವೆಯ ಕನ್ನಡ ಭಾಷೆ ಕೇಳಲು ಅಂದವಾಗಿದೆ. 

ಕನ್ನಡಕ ಧರಿಸುವ ಹಿಂದಿ ಚೆಲುವೆ ಸರಳತೆಗೆ ಯಾರಾದ್ರೂ ಮನ ಸೋಲುತ್ತಾರೆ. ತಮ್ಮ‌ವೃತ್ತಿ ಮಾಡುತ್ತಾ, ಸ್ಥಳೀಯರೊಂದಿಗೂ ಬೆರೆಯುತ್ತಾರೆ. ಇನ್ನೂ, ಉತ್ತರದ ತಂಪಾದ ವಾತಾವರಣದಿಂದ‌ ಬಂದು, ಬಿಸಿಲ ಧಗೆಯಲ್ಲಿ ಜೀವನ‌ ಸಾಗಿಸಿದ್ದು, ರಣ ರೋಚಕವಾಗಿತ್ತು. ದಕ್ಷಿಣ ಭಾತರದ ಊಟ ಮತ್ತು ಉತ್ತರ ಭಾರತದ ಊಟದ‌ ಬಗೆಯನ್ನೂ ಸಹ ಹೇಳಿದರು. 

ದಕ್ಷಿಣ ಭಾರತದ ಹಲವು ಪ್ರೇಕ್ಷಣೀಯ ಸ್ಥಳವನ್ನ ನೋಡಿರುವ ಇವರು, ದಕ್ಷಿಣ ಭಾರತದ ಅಭಿಮಾನವನ್ನ ಸಹ ಮೆರೆದ್ರು. 


ಈ ಮಧ್ಯೆ, ಛತ್ತೀಸ್ಗಢದ ಬಗ್ಗೆಯೂ ನಮಗೆ ತಿಳಿ ಹೇಳುವ ಪ್ರಯತ್ನ ಮಾಡಿದರು.
Post a Comment

Post a Comment