-->
Bookmark

Bilagi : ಉತ್ತರ ಕರ್ನಾಟಕದ ದಸರಾ ನಡೆಯುವ ಸ್ಥಳ : ಭುವನೇಶ್ವರಿ ತಾಯಿಯ ಗುಣಗಾನ

Bilagi : ಉತ್ತರ ಕರ್ನಾಟಕದ ದಸರಾ ನಡೆಯುವ ಸ್ಥಳ : ಭುವನೇಶ್ವರಿ ತಾಯಿಯ ಗುಣಗಾನ 
ಬಾಗಲಕೋಟೆ : ( ಬೀಳಗಿ ) (May_05_2024)
ಉತ್ತರ ಕರ್ನಾಟಕ ದೈವ ಭಕ್ತಿ ಪರಂಪರೆ ಇನ್ನೂ ಜೀವಂತವಾಗಿದೆ. ಯುವಕರು ದೈವತ್ವದಿಂದ ದೂರವಾಗುತ್ತಿರುವ ಇಂದಿನ ಯುಗದಲ್ಲೂ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿ ಶುಕ್ರವಾರ ಇಲ್ಲಿ ಭಕ್ತಸಾಗರವೇ ಹರಿದು ಬರುತ್ತದೆ. 
ಅಚಾನಕ್ಕಾಗಿ ಬಾಗಲಕೋಟೆಗೆ ತೆರಳುವ ಸಮಯ ಬಂತು. ಗಜೇಂದ್ರಗಡದ ಸ್ನೇಹಿತರೊಬ್ಬರು ಅಲ್ಲಿ ನೆಲೆಸಿದ್ದರು. ಅವರ ಸಹಾಯದಿಂದ ಬಾಗಲಕೋಟೆ ನಗರದಿಂದ ಕೂಗಳತೆ ದೂರದಲ್ಲಿ ಭುವನೇಶ್ವರಿ ದೇವಸ್ಥಾನ ಇದೆ. ಭುವನೇಶ್ವರಿ ಎಂದಾಕ್ಷಣ ಕನ್ನಡಾಂಬೆ‌ ಕಣ್ಮುಂದೆ ಬಂದ ಹಾಗೆ ಆಯ್ತು. ಅದಕ್ಕಾಗಿ ಬಾಗಲಕೋಟೆಯ ನವನಗರದಿಂದ ಬೈಕ್ ಸವಾರಿ ಆರಂಭಿಸಿದೆವು. ನನ್ನ ಸ್ನೇಹಿತ ಲಕ್ಷ್ಮಣ ಮತ್ತು ಆತನ ಸ್ನೇಹಿತರ ಬಳಗದೊಂದಿಗೆ ಅಲ್ಲಿಗೆ ತೆರಳಿದೆವು.‌ ಬೆಟ್ಟದಲ್ಲಿ ನೆಲೆಸಿರುವ ತಾಯಿ ಭುವನೇಶ್ವರಿ ದೇವಿಯ ದರ್ಶನಕ್ಕೆ ಬೇರೆ, ಬೇರೆ ಜಿಲ್ಲೆ ಅಷ್ಟೇ ಅಲ್ಲ. ಬೇರೆ ಬೇರೆ ರಾಜ್ಯ ಸೇರಿದಂತೆ ವಿದೇಶದಲ್ಲಿ ನೆಲೆಸಿರುವ ಕನ್ನಡಾಂಬೆಯ ಮಕ್ಕಳು ಇಲ್ಲಿ ದರ್ಶನಕ್ಕೆ ಬರುತ್ತಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಅಳಗುಂಡೆಪ್ಪ ಚಿಗರಿ ಕಿರಾ ನ್ಯೂಸ್ ನೊಂದಿಗೆ ಮಾತಿಗಿಳಿದರು.‌

ಅಂಬಲಿ ಕುಡಿದರೇ ಸಾಕು, ಸಕಲ ರೋಗವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ‌ ಭಕ್ತರದ್ದು, ಹೆಚ್ಚಾಗಿ ಮಹಿಳೆಯರು ಇಲ್ಲಿ ಆಗಮಿಸುತ್ತಾರೆ. ಬಿರು ಬೇಸಿಗೆಯಲ್ಲೂ ಭಕ್ತರು ಆಗಮಿಸಿ, ತಮ್ಮ ಬೇಡಿಕೆ ಸಲ್ಲಿಸುತ್ತಾರೆ. 

ಇಲ್ಲಿ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಹೀಗಾಗಿ ಭಕ್ತರು ಆಗಮಿಸುತ್ತಾರೆ. ಪ್ರತಿ ಶುಕ್ರವಾರ ಮಾತ್ರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಹೇಳಿದರು.‌


ಉತ್ತರ ಕರ್ನಾಟಕದ ದಸರಾ ಇಲ್ಲಿ ನಡೆಯುತ್ತದೆ. ಅದು ದೀಪಾವಳಿಯಂದು ಎಂದು ದೇವಿಯ ಮಹಾತ್ಮೆಯನ್ನ ಹೇಳುತ್ತಾ ಸಾಗಿದರು. ಮಕ್ಕಳಾಗದವರಿಗೂ ಉಡಿ ತುಂಬುವ ಕಾರ್ಯ ನಡೆಯುತ್ತದೆ. 

ಇನ್ನೂ, ಭುವನೇಶ್ವರಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಲು ಬಂದ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ನಿವಾಸಿ ಗುರುನಾಥ್ ಪಾಟೀಲ್ ಮಾತನಾಡಿ, ಇಲ್ಲಿ ಮಾಯಾ ಮಂತ್ರಗಳು ನಡೆಯೊಲ್ಲ. ಇಲ್ಲಿ ದೈವ ಭಕ್ತಿ ಮಾತ್ರ. ಇಷ್ಟಾರ್ಥ ಸಿದ್ಧಿಯಾಗುತ್ತದೆ. ಹೀಗಾಗಿ ಬರುತ್ತೇವೆ ಎಂದು ಹೇಳಿದರು. 


ಅದೇನೇ ಇರಲಿ, ಭುವನೇಶ್ವರಿ ದೇವಸ್ಥಾನದ ಸುತ್ತಮುತ್ತ ನೂರಾರು ಅಂಗಡಿ-ಮುಂಗಟ್ಟು ಗಳಿದ್ದು, ಜೀವನ‌ ಕಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೆ ಇದೆ.
Post a Comment

Post a Comment