ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜು ಮತ್ತು ಸಿಬಿಎಸ್‌ಇ ಶಾಲೆಯಲ್ಲಿ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಆರನೇ ಪುಣ್ಯಸ್ಮರಣೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದಕ್ಕೂ ಮುನ್ನ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರೀಗಳ ನಿಸ್ವಾರ್ಥ ಸೇವೆಯ ಬಗ್ಗೆ ಮಾಹಿತಿ ನೀಡಿ, ಗೌರವ ಸೂಚಿಸಲಾಯಿತು. ಸ್ವಾಮಿಜಿಗಳವರ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ( ಶ್ರೀಗುರು ಮುಕುಂದೂರು ವಿರಕ್ತಮಠ ಹಾಗೂ ಬಸವೇಶ್ವರ ಮಠ ಬೇಲೂರು) ಇವರು ಸ್ವಾಮಿಜಿಯವರ ಕೊಡುಗೆಗಳ ಬಗ್ಗೆ ಮಾತನಾಡಿ ಆಶೀರ್ವಚನ ನೀಡಿದರು.
ಜಗದ್ಗುರು ತೋಂಟದಾರ್ಯ ಪಿ.ಯು. ಕಾಲೇಜು ಪ್ರಾಚಾರ್ಯರಾದ ಸಂಗಮೇಶ ಬಾಗೂರ ಮಾತನಾಡಿ "ಶ್ರೀಗಳು ಸರ್ವ ಧರ್ಮದವರನ್ನು ಒಂದೇ ರೀತಿಯಲ್ಲಿ ಕಂಡು ಭಾವೈಕ್ಯತೆ ತೋರಿದವರು, ಅವರ ಪರಿಸರ ಪ್ರೇಮ ಹಾಗೂ ಕಪ್ಪತ್ತಗುಡ್ಡದ ಉಳಿವಿಗಾಗಿ ಮಾಡಿದ ಹೋರಾಟ ಮತ್ತು ನಿರಂತರ ಶಿವಾನುಭವ ಕಾರ್ಯಕ್ರಮಗಳ ಕುರಿತು ಸ್ಮರಿಸಿದರು"
ಸಿಬಿಎಸ್ಇ ಶಾಲೆಯ ಪ್ರಾಚಾರ್ಯೆ ಕವಿತಾ ಪಾಟೀಲಗ ಮಾತನಾಡಿ "ಸ್ವಾಮಿತ್ವಕ್ಕೆ ಹೆಸರಾಗಿ, ಕನ್ನಡದ ಉಳಿವಿಗಾಗಿ ಅವರ ಹೋರಾಟ ಅನನ್ಯ ಹಾಗೂ ಅಜರಾಮರ" ಎಂದರು
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಸಿದ್ದು ಹರನಟ್ಟಿ, ವೀರೇಶ್, ಶರಣು ಅಂಗಡಿ, ಮಲ್ಲನಗೌಡ ಗೌಡರ್, ಅಶೋಕ್ ಅಂಗಡಿ, ಅಭಿಲಾಷಾ ಗಂಜಿಹಾಳ್, ಶೃತಿ ನಡಕಟ್ಟಿನ್, ಆನಂದ್ ಜೂಚನಿ, ಶಿವಕುಮಾರ್ ಕೋಸಗಿ, ದೊಡ್ಡೇಶ ವಿವೇಕಿ, ಸಿದ್ದರಾಮೇಶ್ ಕರಬಾಶೆಟ್ಟರ್, ಶಾರದ ಅಂಬೊರೆ, ಫಾತಿಮಾ, ಪ್ರಶಾಂತ್ ಹಾರೋಗೇರಿ, ಶಿವಕುಮಾರ್ ಹಿರೇಮಠ, ಮಾಧುರಿ ನಾಡಿಗೇರ್, ರೇಣುಕಾ ಮಡಿವಾಳರ್, ಗುರುರಾಜ್, ಕರುಣಾ ಜಕ್ಕಲಿ, ಹನುಮಂತ್ ನಡಕಟ್ಟಿನ್, ಪ್ರವೀಣ ಹೊಸಮನಿ, ಸುನೀಲ್ ಯಾವಗಲ್, ನಾಗರತ್ನ ಕಡ್ಡಿ, ಲಕ್ಷ್ಮೀ, ಪ್ರವೀಣ ಚಿತ್ರಗಾರ್, ಭಾರತಿ ಹೂಗಾರ್, ಶೋಭಾ, ಸುಶೀಲಾ ಮುಂಡರಗಿ, ಈರಣ್ಣ ಮಲಕಣ್ಣವರ ಸೇರಿದಂತೆ ಮಹಾವಿದ್ಯಾಲಯದ ಎಲ್ಲಾ ಭೋದಕ ಹಾಗೂ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Post a Comment