ಗಜೇಂದ್ರಗಡ : (Nov_18_2024)
ನಿವೃತ್ತ ಶಿಕ್ಷಕ ದಿ. ಚಂದಪ್ಪ ರಾಠೋಡ್ ಇವರ ಧರ್ಮ ಪತ್ನಿ ಮತ್ತು ನಿವೃತ್ತ ಶಿಕ್ಷಕ ತಾರಾಸಿಂಗ್ ರಾಠೋಡ್ ಅವರ ತಾಯಿ ಶ್ರೀಮತಿ ಪ್ರೇಮಲಾಬಾಯಿ ಚಂದಪ್ಪ ರಾಠೋಡ್ ಇಹಲೋಕ ತ್ಯಜಿಸಿದ್ದಾರೆ. ಮಕ್ಕಳು, ಮೊಮ್ಮಕ್ಕಳು ಅಪಾರ ಬಂಧು ಬಾಂಧವರನ್ನ ಅಗಲಿದ್ದಾರೆ. 6ಜನ ಗಂಡು ಮಕ್ಕಳು, 6 ಜನ ಹೆಣ್ಣುಮಕ್ಕಳು ದುಃಖ ತಪ್ತರಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿದ್ದ ಚಂದಪ್ಪ ರಾಠೋಡ್ ಮತ್ತು ತಾರಾಸಿಂಗ್ ರಾಠೋಡ್ ಅವರಿಗೆ ಸಾತ್ ನೀಡಿದ್ದ ಮಹಾತಾಯಿ ಇಹಲೋಕ ತ್ಯಜಿಸಿದ್ದು, ಕುಟುಂಬದಲ್ಲಿ ನಿರವ ಮೌನ ಆವರಿಸಿದೆ. ನಾಳೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Post a Comment