-->
Bookmark

Gajendragad : ಯುವ ನಾಯಕನಾಗಿ ಬೆಳೆಯುತ್ತಿರುವ ದಾವಲ್ ತಾಳಿಕೋಟಿ

Gajendragad :*ಯುವ ನಾಯಕನಾಗಿ ಬೆಳೆಯುತ್ತಿರುವ ದಾವಲ್ ತಾಳಿಕೋಟಿ*

*ನೇರ ನಡೆ-ನುಡಿಗೆ ಮತ್ತೊಂದು ಹೆಸರೇ ತಾಳಿಕೋಟಿ*

*ರಾಜಕೀಯಕ್ಕೆ ಬರಲಿ ಎಂಬುದು ಸಮಾಜದ ಮುಖಂಡರ ಆಶಯ*

ಗಜೇಂದ್ರಗಡ :

ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ ದಾವಲಸಾಬ ತಾಳಿಕೋಟಿ ಎಂಬ ಹುಡುಗ ಮುಂಬರುವ ದಿನಗಳಲ್ಲಿ ಗಜೇಂದ್ರಗಡದಲ್ಲಿ ಒಂದಷ್ಟು ತನ್ನದೆಯಾದ ಛಾಪು ಮೂಡಿಸಿಲಿದ್ದಾನೆ  ಎಂದು ಯಾರು ಊಹಿಸಿರಲಿಲ್ಲ.

ಅಲ್ಪಸಂಖ್ಯಾತ ಸಮುದಾಯದಲ್ಲಿನ ಶೈಕ್ಷಣಿಕ, ರಾಜಕೀಯ, ಸಾಮಾಜೀಕ ಹಿಂದುಳಿಯುವಿಕೆಯನ್ನು ಬದಲಿಸಬೇಕೆಂದು ಪಣ ತೊಟ್ಟು, ಮೊದಲು ಶಿಕ್ಷಿತರಾಗಬೇಕು ಎಂಬುದನ್ನ ಸಂವಿಧಾನ ಶಿಲ್ಪಿ ಡಾ‌. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ, 12 ಶತಮಾನದ ಸಮಾಜ ಸುಧಾರಕ ಬಸವಣ್ಣನರಿಂದ, ಗೌತಮ ಬುದ್ಧ, ಭಗತ್ ಸಿಂಗ್, ನೇತಾಜಿ ಹೀಗೆ ಹತ್ತಾರು ಮಹಾನಾಯಕರ ಜೀವನದಿಂದ ಪ್ರಭಾವಿತರಾದ ಇವರು ಕಲಿಕೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡರು.

ಮೊದಲು ಪ್ರಾಥಮಿಕ ಶಿಕ್ಷಣವನ್ನ ಶಿವಾಜಿ ಪೇಟೆಯ HPS NO-5  ಶಾಲೆಯಲ್ಲಿ ಮುಗಿಸಿದರು.

ಬಳಿಕ ಹೈಸ್ಕೂಲ್ ನಿಂದ ಡಿಗ್ರಿ ವರೆಗೆ ಎಸ್.ಎಂ. ಭೂಮರಡ್ಡಿ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದರು.

ಶಾಲಾ‌, ಕಾಲೇಜು ದಿನಗಳಿಂದಲೇ  ಹೋರಾಟದ ಹಾದಿ ಹಿಡಿದ ಇವರು, SFI ಸಂಘಟನೆಯ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನ ತೀಕ್ಷ್ಣವಾಗಿ ಟೀಕಿಸಲು ಆರಂಭಿಸಿದರು.‌

ಕಲಿಕೆಗೆ ಎಂದು ಬಡತನ‌ ಅಡ್ಡಿಯಾಗದಂತೆ ನೋಡಿಕೊಂಡರು.

ಮೊದಲಿಂದಲು ಕ್ರಾಂತಿ, ಕಾರಿಯಾಗಿದ್ದ ದಾವಲ್ ಅವರು ಪ್ರಾಥಮಿಕ ಶಿಕ್ಷಣ ಮುಗಿಸುತ್ತಿದ್ದಂತೆ ಕಾರ್ಲ್ ಮಾರ್ಸ್ಕ್, ಛೆ ಗುವೆರಾ, ಭಗತಸಿಂಗ್ ಅವರ ಜೀವನಾಧಾರಿತ ಪುಸ್ತಕದೆಡೆಗೆ ಹೆಚ್ಚಿನ ಆಸಕ್ತಿ ತೋರಿದರು. ಇದರಿಂದ ಎಡಪಂಥೀಯ ವಿಚಾರಧಾರೆಗಳಿಂದ  ಪ್ರಭಾವಿತರಾದರು.

ಇವರು ಎಡಪಂಥೀಯ ಚಳುವಳಿಗೆ ಧುಮುಕಿದಾಗ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಆಗ ಎಡಪಂಥೀಯ ವಿಚಾರ ಧಾರೆ ಅತ್ಯಂತ ಉತ್ತುಂಗದ ಶಿಖರದಲ್ಲಿದ್ದುದು ಸಹ ಇವರ ಮೇಲೆ ಪ್ರಭಾವ ಬೀರಿತು.

ಬಿ‌.ಎ, ಬಿಎಡ್, ಹಾಗೂ  ಪತ್ರಿಕೋದ್ಯಮವನ್ನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೂ PGDCA ಕೋರ್ಸ್, ಎಲ್.ಎಲ್‌.ಬಿ. ಹೀಗೆ ಉನ್ನತ ಶಿಕ್ಷಣ ಪಡೆಯಲು ಸಂಘಟನೆಯ ಹಿರಿಯ ಸಂಗಾತಿಗಳು ಸಹಾಯ ಮಾಡಿದ್ದಾರೆ ಎನ್ನುತ್ತಾರೆ ದಾವಲ್ .

2015-2016 ರ ಅವಧಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸಾಕಷ್ಟು ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡರು.

ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು,  ಅಂಜುಮನ್ ಇಸ್ಲಾಂ ಕಮಿಟಿ ನಿರ್ದೇಶಕರಾಗಿ,  ಸಮಾಜದ ಉನ್ನತ ಸ್ಥಾನಕ್ಕೇರಿದ ಅತಿ ಕಿರಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅತ್ಯಂತ ನಿಷ್ಟೂರ, ನೇರ ನಡೆ- ನುಡಿಯೊಂದಿಗೆ ಸಾಕಷ್ಟು ಹೆಸರು ಮಾಡಿದ್ದಾರೆ.

ಟಿಪ್ಪು ಸುಲ್ತಾನ್ ಕಮೀಟಿಯ ಅಧ್ಯಕ್ಷರಾದ ಬಳಿಕ ಅದ್ದೂರಿ ಕಾರ್ಯಕ್ರಮದೊಂದಿಗೆ  ಮಾಡಿದಾಗ ಇವರ ಜೊತೆ ಇನ್ನು ಕೆಲ ಪ್ರಮುಖರ ಮೇಲೆ  ಕೇಸ್ ದಾಖಲಾಯಿತು. ಇದನ್ನು ಲೆಕ್ಕೆಸಿದೆ   ತಾಳಿಕೋಟಿ ಅವರು ಮರು ವರ್ಷ ಮತ್ತೆ ಟಿಪ್ಪು ಸುಲ್ತಾನ ಅವರ ಜಯಂತಿ ಆಚರಣೆಯನ್ನು ಯಶ್ವಿಸಿಯಾಗಿ ಮಾಡಿದರು.ಇದಕ್ಕೆ ಸಮಾಜದ ಅನೇಕ ಗಣ್ಯರು ಸಹ ಸಾಥ್ ನೀಡಿದರು.

ರಾಜ್ಯ ಮಟ್ಟದ ಖಾಸಗಿ ದೃಶ್ಯ ಮಾಧ್ಯಮದಲ್ಲಿ ಗದಗ ಜಿಲ್ಲಾ ವರದಿಗಾರನಾಗಿ, ವಿವಿಧ ಪತ್ರಿಕೆಗಳಲ್ಲಿ ಹಿರಿಯ ವರದಿಗಾರನಾಗಿ, ಸಹ ಸಂಪಾದಕನಾಗಿ, ಕಂಟೆಂಟ್ ರೈಟರ್ ಆಗಿ  ವಸ್ತುನಿಷ್ಠ ವರದಿಯೊಂದಿಗೆ  ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿ, ಪತ್ರಕರ್ತರ ಸಂಘವನ್ನ ಹುಟ್ಟುಹಾಕಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿ, ಪಟ್ಟಣದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

ರೋಣ ಕ್ಷೇತ್ರದಲ್ಲಿ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಸಮಾಜದ ಮುಖಂಡರಿಗೆ ನಿಗಮ ಮಂಡಳಿ ಸೇರಿದಂತೆ ಸಮುದಾಯದ ನಾಯಕರಿಗೆ ರಾಜಕೀಯ  ಸ್ಥಾನ‌ಮಾನಗಳನ್ನು ಕೊಡಿ ಎಂದು ಭವ್ಯ ವೇದಿಕೆಯಲ್ಲೇ ಹೇಳಿದ್ದು, ಇದರ ಪ್ರತಿಫಲವಾಗಿ ಸಮಾಜದ ಪ್ರಮುಖ ಗಣ್ಯರಿಗೆ ಪ್ರಮುಖ ಸ್ಥಾನಮಾನ ನೀಡಿದ್ದು  ಈಗ ಇತಿಹಾಸ.

ಹೀಗೆ ತಮ್ಮನ್ನ ತಾವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ  ದಾವಲಸಾಬ ತಾಳಿಕೋಟಿ ಅವರಿಗೆ ಕನ್ನಡದ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ.

2016-2018 ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು ದಿವಂಗತ ಐ ಎ ರೇವಡಿಯವರೊಂದಿಗೆ ನಗರದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವಲ್ಲಿ ಬಲಗೈ ಬಂಟನಂತೆ ಅವರ ಜೊತೆಗೆ ನಿಂತವರು. ಎಲ್ಲ ಸಮುದಾಯದದೊಂದಿಗೂ ಅತ್ಯಂತ ಸೌಹಾರ್ದತೆಯಿಂದ ಬೆರೆಯುತ್ತಾರೆ.

ಬರವಣಿಗೆಯನ್ನೂ ಪ್ರೀತಿಸುವ ಇವರು, ಅದ್ಬುತ ಬರಹಗಾರರು ಕೂಡಾ.

ಹೀಗೆ ಹತ್ತಾರು ಮಜಲುಗಳನ್ನ ಕಂಡಿರುವ ದಾವಲಸಾಬ ತಾಳಿಕೋಟಿ ಅವರು 2007 ರಿಂದಲೂ ಎಡಪಂಥೀಯ ಚಳುವಳಿಯಲ್ಲಿ   ಗುರುತಿಸಿಕೊಂಡಿದ್ದು

ಕಮ್ಯುನಿಸ್ಟ್ ಪಕ್ಷದ ಬಗ್ಗೆ ಸಾಕಷ್ಟು ಅಭಿಮಾನ, ಗೌರವ ಹಾಗೂ ಅಷ್ಟೇ ನಿಷ್ಟೆಯನ್ನು ಹೊಂದಿರುವ ದಾವಲ್ ಅವರು ಕಳೆದ 17 ವರ್ಷಗಳಲ್ಲಿ ಯಾವುದೇ ರೀತಿಯ ಆಸೆ ಆಮಿಷಕ್ಕೆ ಬಲಿಯಾಗಿ ಪಕ್ಷ ಬದಲಾಯಿಸಿದವರಲ್ಲ. ಇದೆಲ್ಲವೂ ಗಮನಿಸಿಯೇ ಇದೀಗ ಭಾರತ ಕಮ್ಯುನಿಸ್ಟ್ ಪಕ್ಷ CPIM ಉನ್ನತ ಸ್ಥಾನಮಾನ ನೀಡಿದ್ದು ಕಾರ್ಯದರ್ಶಿಯಾಗಿ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಸಮಾಜದಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ದಾವಲ್ ಅವರು ಯುವ ಪಡೆಯನ್ನು ಹೊಂದಿದ್ದು
ಮುಂದಿನ‌ ದಿನಗಳಲ್ಲಿ ಇವರಿಗೆ ರಾಜಕೀಯ ಸ್ಥಾನಮಾನ ಸಿಕ್ಕರೆ ಖಂಡಿತವಾಗಿ ಇನ್ನಷ್ಟು ಸಮಾಜಮುಖಿ ಕಾರ್ಯ  ಮಾಡಬಲ್ಲರು ಎನ್ನವುದು ಜನರ ಆಶಯ...

Post a Comment

Post a Comment