ಗಜೇಂದ್ರಗಡ : (Mar_22_2025)
ಗುಡ್ಡದಲ್ಲಿ ಕ್ರೀಡಾಂಗಣಕ್ಕೆ ಮಣ್ಣು ಅಗೆಯುತ್ತಿರುವ ಪ್ರಕರಣ ಬಿಜೆಪಿ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸಿದೆ ಕಾಂಗ್ರೆಸ್. ಈ ಬಗ್ಗೆ ಕಿರಾ ನ್ಯೂಸ್ ನೊಂದಿಗೆ ಮಾತನಾಡಿದ ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಣ್ಣ ಶೆಟ್ಟರ್, ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದಿದ್ದಾರೆ. ಈ ಮೂಲಕ ಬಿಜೆಪಿ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅವ್ರ ಬಹಿರಂಗ ಚರ್ಚೆಗೆ ನಮ್ಮ ಸಹಮತವಿದೆ. ಸಿದ್ಧರಿದ್ದೇವೆ, ಮಾಹಿತಿ ಕೊಡ್ತೆವೆ, ಅವರಿಗೆ ಉತ್ತರಿಸುತ್ತೇವೆ. ಅವ್ರು ಏನಾದ್ರು ಪ್ರಶ್ನೆ ಕೇಳಲಿ, ಅದ್ರಾಗ ಏನೈತಿ. ಅವ್ರ ಮಾಹಿತಿ ಅವರು ಹೇಳಲಿ. ನಮ್ಮ ಮಾಹಿತಿ ನಾವು ಕೊಡುತ್ತೇವೆ. ಕಾನೂನು ಪ್ರಕಾರ ಕಾಮಗಾರಿ ನಡೆದಿದೆ. ಕ್ರೀಡಾಂಗಣ, ಕೋರ್ಟ್ ಯಾವುದರಲ್ಲಿಯೂ ಅವ್ಯವಹಾರ ಇಲ್ಲ. ಅವ್ಯವಹಾರ ಮಾಡಿದ್ದೇ ಆದಲ್ಲಿ ದಾಖಲೆಗಳನ್ನ ಬಹಿರಂಗ ಪಡಿಸಲಿ ಬಳಿಕ ಚೆಕ್ ಮಾಡುತ್ತೇವೆ ಎಂದು ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಣ್ಣ ಶೆಟ್ಟರ್ ಹೇಳಿದ್ದಾರೆ.
ಇನ್ನೂ, ಪುರಸಭೆ ಅಧ್ಯಕ್ಷರಾದ ಸುಭಾಷ್ ಮ್ಯಾಗೇರಿ ಮಾತನಾಡಿ, ನಮ್ಮಹತ್ರ ಪರ್ಮಿಷನ್ ಐತಿ. ಬಹಿರಂಗ ಚರ್ಚೆಯನ್ನ ಕೆಕೆ ಸರ್ಕಲ್ ನಲ್ಲೆ ಮಾಡೋಣ ಎಂದು ಬಿಜೆಪಿ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದರು.
ಪರ್ಮಿಷನ್ ಇಲ್ದೆ ಗುಡ್ಡ ಅಗೆಯೋಗೆ ಬರುತ್ತಾ ಎಂದು ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರ್ಮಿಷನ್ ಪಡೆದು, ಕ್ರೀಡಾಂಗಣದ ಕೆಲಸ ಆರಂಭಿಸಿದ್ದೇವೆ. ಈ ಬಗ್ಗೆ ತಹಶೀಲ್ದಾರ್ ಅವರು ಪೇಪರ್ ಸ್ಟೇಟಮೆಂಟ್ ಕೊಟ್ಟಿದ್ದಾರೆ ಎನ್ನುತ್ತಲೆ, ದಾಖಲೆಗಳಿಲ್ಲ ಎಂಬ ಆರೋಪ ಬಿಜೆಪಿಯದ್ದು ಎಂದಾಗ, ಅದರದ್ದು ಯಾವಾಗಲೂ ಹಾರಿಕೆ ಉತ್ತರವೇ, ನಮಗೂ ನೆನ್ನೆ ಬಂದು ಹಾರಿಕೆ ಉತ್ತರ ಕೊಟ್ಟು ಹೋಗಿದ್ದಾರೆ ಎಂದು ಕಿಚಾಯಿಸಿದರು.
ಮಾನವೀಯ ದೃಷ್ಟಿಯಿಂದ ಮಾಡಬೇಕು. ಹಾಗೆ ಸುಖಾ ಸುಮ್ಮನೆ ಮಾಡುವುದು ಸರಿಯಲ್ಲ. ತಮ್ಮ ಅಧಿಕಾರಾವಧಿಯಲ್ಲೂ ಬಿಜೆಪಿ ಹೀಗೆ ಮಾಡಿದೆಯಾ ಎಂದು ಮರು ಸವಾಲು ಹಾಕಿದರು. ಅಭಿವೃದ್ಧಿ ಮಾತು ಬಂದಾಗ ಈ ರೀತಿಯ ಆರೋಪಗಳು ಸರ್ವೇ ಸಾಮಾನ್ಯ. ಬಿಜೆಪಿ ಅಭಿವೃದ್ಧಿ ವಿರೋಧಿ ಎಂದು ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು.
ಜೊತೆಗೆ PWD ಅಧಿಕಾರಿ ಮಹೇಶ್ ರಾಠೋಡ್ ಅವರು ಸ್ಥಳದಲ್ಲಿದ್ದು, ಕೆಲಸ ಮಾಡುತ್ತಿದ್ದಾರೆ ಎಂದು ಸುಭಾಷ್ ಮ್ಯಾಗೇರಿ ಹೇಳಿದಾಗ, ಮಹೇಶ್ ರಾಠೋಡ್ ಅವರು ಕ್ರೀಡಾಂಗಣ ವರ್ಕ್ ಆರ್ಡರ್ ನನಗೆ ಬಂದಿಲ್ಲ. ನನಗೆ ಕೋರ್ಟ್ ಕಾಮಗಾರಿಗೆ ಸಂಬಂಧಿಸಿದ್ದು ಎಂದು PWD ಅಧಿಕಾರಿ ಮಹೇಶ್ ರಾಠೋಡ್ ಸಮಜಾಯಿಷಿ ನೀಡಿದ್ದಾರೆ.
ಇದೆಲ್ಲದರ ನಡುವೆ ಪುರಸಭೆ ಚುನಾವಣೆ ಇನ್ನೂ ಕೆಲವೆ ತಿಂಗಳಲ್ಲಿ ನಡೆಯಲಿದ್ದು, ಕ್ರೀಡಾಂಗಣದ ವಿಷಯವನ್ನ ಬಿಜೆಪಿ ಯಾವ ರೀತಿ ಬಳಸಿಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಕೃಷ್ಣ ರಾಠೋಡ್
ಸಂಪಾದಕರು,
ಕಿರಾ ನ್ಯೂಸ್ ಕನ್ನಡ ಗಜೇಂದ್ರಗಡ
ಮೊ : 8197474996
Post a Comment