ಗಜೇಂದ್ರಗಡ : (May_15_2025)
ಶಾಸಕ ಮತ್ತು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್ ಪಾಟೀಲ್ ಬೀದಿ ನಾಯಿ ದಾಳಿಯಿಂದ ಹತ್ಯೆಯಾದ ಶ್ರೀಮತಿ ಪ್ರೇಮಾ ಚೋಳಿನ್ ಅವರ ಮನೆಗೆ ಬೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದೇ ವೇಳೆ, ವೈಯಕ್ತಿಕವಾಗಿ 50 ಸಾವಿರ ಪರಿಹಾರ ನೀಡಿದರು. ಜೊತೆಗೆ ಪುರಸಭೆಯಿಂದ ಮೂರು ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2ಲಕ್ಷ ಪರಿಹಾರವನ್ನ ಶೀಘ್ರದಲ್ಲೆ ತಲುಪುವಂತೆ ಮಾಡುವುದಾಗಿ ಮತ್ತು ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವಿದ್ಯಾಭ್ಯಾಸ ಮಾಡಲು ಪ್ರೇಮಾ ಚೋಳಿನ್ ಅವರ ಪುತ್ರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಬಂಡಿ, ಪುರಸಭೆ ಆಶ್ರಯ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಬಿ ಎಸ್ ಶೀಲವಂತರ್, ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿ,
ಸ್ಥಾಯಿ ಕಮಿಟಿ ಚೇರ್ಮನ್ ಮುದಿಯಪ್ಪ ಮುಧೋಳ್, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ರೋಣ ಬ್ಲಾಕ್ ಅಧ್ಯಕ್ಷರಾದ ವೀರಣ್ಣ ಶೆಟ್ಟರ್, ಮುಖಂಡರಾದ ಸಿದ್ದಪ್ಪ ಚೋಳಿನ, ಸುರೇಶ್ ಚವಡಿ,
ಸೇರಿದಂತೆ ಅನೇಕರು ಉಪಸ್ತಿರಿದ್ದರು.
Post a Comment