-->
Bookmark

Gajendragad : ಗಾಳಿ, ಮಳೆಗೆ ಬೆಟ್ಟದ ಮೇಲಿನ ಪವನ ವಿದ್ಯುತ್ ಫ್ಯಾನ್ ರೆಕ್ಕೆ ಕಟ್ :

Gajendragad : ಗಾಳಿ, ಮಳೆಗೆ ಬೆಟ್ಟದ ಮೇಲಿನ ಪವನ ವಿದ್ಯುತ್ ಫ್ಯಾನ್ ರೆಕ್ಕೆ ಕಟ್ : ಸ್ಥಳೀಯರ ಮೊಬೈಲ್ ನಲ್ಲಿ ದೃಶ್ಯ ಸೆರೆ 

ಗಜೇಂದ್ರಗಡ : (May_22_2025)
ಗದಗ ಜಿಲ್ಲೆಯ ಗಜೇಂದ್ರಗ ಪಟ್ಟಣದ ಗುಡ್ಡದ ಮೇಲೆ ಪವನ ವಿದ್ಯುತ್ ಖಂಬದ ಫ್ಯಾನ್ ನ ರೆಕ್ಕೆ ಮತ್ತು ಕಂಟ್ರೋಲ್ ಯಂತ್ರ ಹಾನಿ ಗೀಡಾಗಿದೆ. 

ಪಟ್ಟಣದಲ್ಲಿ ಜೋರಾಗಿ ಸುರಿದ ಮಳೆಗೆ ಫ್ಯಾನ್ ಗೆ ಹಾನಿಯಾಗಿದೆ. ಫ್ಯಾನ್ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

ದೃಶ್ಯದಲ್ಲಿ ಜೋರಾಗಿ ಬೀಸಿದ ಗಾಳಿಗೆ ಫ್ಯಾನ್ ನ ರೆಕ್ಕೆ ಕಟ್ಟಾಗಿದೆ. ಬಳಿಕ ಅದರ ಕಂಟ್ರೋಲ್ ಯಂತ್ರಕ್ಕೆ ಬಡಿದು, ತುಂಡಾಗಿ ಬಿದ್ದಿದೆ. ಇದುವರೆಗೂ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ.
Post a Comment

Post a Comment