-->
Bookmark

Gajendragad : ರಾಮಜಪ್ಪ ಗುಗಲೋತ್ತರ್ 21ನೇ ಪುಣ್ಯಸ್ಮರಣಾರ್ಥ : ಉಚಿತ ಆರೋಗ್ಯ ತಪಾಸಣಾ ಶಿಬಿರ

Gajendragad : ರಾಮಜಪ್ಪ ಗುಗಲೋತ್ತರ್ 21ನೇ ಪುಣ್ಯಸ್ಮರಣಾರ್ಥ : ಉಚಿತ ಆರೋಗ್ಯ ತಪಾಸಣಾ ಶಿಬಿರ 
ವೆಂಕಟೇಶ್ವರ ಹಾಸ್ಪಿಟಲ್ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಮೂಲಕ ಸಮಾಜ ಸೇವೆ 

ಗಜೇಂದ್ರಗಡ : (Jan_13_2026)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನ ದಿ. ಶ್ರೀ ರಾಮಜಪ್ಪ ಚಂದಪ್ಪ ಗುಗಲೋತ್ತರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಇದೇ 16 ರಂದು ದಿ. ರಾಮಜಪ್ಪ ಗುಗಲೋತ್ತರ್ ಅವರ 21ನೇ ಪುಣ್ಯ ಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಗಣೇಶ್ ಗುಗಲೋತ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ವೆಂಕಟೇಶ್ವರ ಹಾಸ್ಪಿಟಲ್ ಗಜೇಂದ್ರಗಡ ಇವರ ಸಹಯೋಗದಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ. ಡಾ. ಕಿರಣ್ ಹೆಚ್ ರಾಠೋಡ್ ಅವರ ನೇತೃತ್ವದಲ್ಲಿ ಮಧುಮೇಹ, ಥೈರಾಯ್ಡ್ ತಪಾಸಣೆ, ರಕ್ತ ಹೀನತೆ, ರಕ್ತದೊತ್ತಡ ತಪಾಸಣೆ,  ಬೊಜ್ಜಿನ ಸಮಸ್ಯೆ, ಜಾಂಡೀಸ್ ( ಕಾಮಲೆ ) ಸಮಸ್ಯೆ, ಹೃದಯರೋಗ ತಪಾಸಣೆ, ನರರೋಗ ತಪಾಸಣೆ, ಮೂರ್ಛೆರೋಗ (ಪಿಡ್ಸ್ ) ತಪಾಸಣೆ ನಡೆಯಲಿದೆ. ಡಾ. ಐಶ್ವರ್ಯ ಪಿ ಥಾವಂತಿ ಅವರ ನೇತೃತ್ವದಲ್ಲಿ ಬಂಜೆತನ‌ ನಿವಾರಣೆ, ಗರ್ಭಕೋಶ ಮತ್ತು ಅಂಡಾಶಯಗಳ ಶಸ್ತ್ರ ಚಿಕಿತ್ಸೆ, ಗರ್ಭಕೋಶದ ಕ್ಯಾನ್ಸರ್ ಪತ್ತೆ ಮತ್ತು Operation, ಪರೀಕ್ಷಾರ್ಥ ಉದರದರ್ಶನ, ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ, ತಪಾಸಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವಿರೇಶ್ ಸವಣೂರ್ (9743063360) ಮತ್ತು ಗಣೇಶ್ ಗುಗಲೋತ್ತರ್ (9964068794)
 ಅವರಿಗೆ ಸಂಪರ್ಕಿಸಲು ತಿಳಿಸಲಾಗಿದೆ. 

ಹಿರಿಯರಾದ ರಾಮಜಪ್ಪ ಗುಗಲೋತ್ತರ್ ಅವರ ಸ್ಮರಣಾರ್ಥ ಒಂದೆಡೆಯಾದ್ರೆ, ಪಟ್ಟಣದಲ್ಲಿ‌ ಗೋವಾ ಮಂಗಳೂರು ಸೇರಿದಂತೆ ಬೇರೆಡೆ ಗೂಳೆ ಹೋದ ಕುಟುಂಬದ ಕೆಲವು ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರಲ್ಲಿ ಕೆಲ ಹಿರಿಯರು ಮತ್ತು ಮಕ್ಕಳಿಗೆ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಅನುಕೂಲವಾಗಲಿದೆ. ಜನವರಿ 16 ರಂದು ಬೆಳಗ್ಗೆ 10 ಗಂಟೆಯಿಂದ 2 ಗಂಟೆ ವರೆಗೆ ನಡೆಯಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 6 ಸೇವಾಲಾಲ್ ನಗರ ಗಜೇಂದ್ರಗಡ. ಶ್ರೀ ರಾಮಜಪ್ಪ ಅವರ 21ನೇ ಸ್ಮರಣಾರ್ಥ ನಡೆಯಲಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಲ್ಲರೂ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿಸಲು ಮನವಿ ಮಾಡಿದ್ದಾರೆ.
Post a Comment

Post a Comment