ಮುಶಿಗೇರಿ : (14_01_2025)
ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಮುಶಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅವರ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಚನ್ನು ಪಾಟೀಲ್ ಫೌಂಡೇಶನ್ ಸಂಸ್ಥಾಪಕರಾದ ಉಮೇಶ್ ಚನ್ನು ಪಾಟೀಲ್
ಉದ್ಘಾಟಿಸಿ, ಮಾತನಾಡಿದರು.
ಈ ಸ್ಪರ್ಧಯಲ್ಲಿ 25 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಜ್ಯೋತಿ ಪೂಜಾರಿ, ದ್ವಿತೀಯ ಸ್ಥಾನ ಕವಿತಾ ಕಿರೆಸೂರು, ತೃತಿಯ ಸ್ಥಾನ ವಿದ್ಯಾಶ್ರೀ ಪೂಜಾರ್ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಫೌಂಡೇಶನ್ ವತಿಯಿಂದ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ವೈ ಜೆ ಶಂಕ್ರಯ್ಯ, ವಹಿಸಿದ್ದರು. ಫೌಂಡೇಶನ್ ಸದ್ಯಸರಾದ ಶಿವಕುಮಾರ್ ದದ್ದುರು, ಅರುಣ್ ಮಠದ್, ಸಂಗಮೇಶ್ ಬೊಮ್ಮಸಾಗರ್, ರವಿ ಕೋನನ್ನವರ್, ರಾಘು ಕಾರಡಗಿಮಠ ಉಪನ್ಯಾಸಕರಾದ ಹೆಚ್ ಮರಿಯಪ್ಪ, ಆರ್ ಹೆಚ್ ಗೌಡರ, ಕಿರಣ ಉಪ್ಪಾರ, ಯಶೋಧ ಮುಧೋಳ, ವಿದ್ಯಾರ್ಥಿಗಳು ಉಪಸ್ಥಿರಿದ್ದರು
ಯುವಶಕ್ತಿಗೆ ದಿಕ್ಕು ತೋರಿದ ಮಹಾನ್ ಚಿಂತಕ ಸ್ವಾಮಿ ವಿವೇಕಾನಂದರ ವಿಚಾರಗಳು, ಜೀವನ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಭಾಷಣಲ್ಲಿ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ರಾಷ್ಟ್ರಪ್ರೇಮ ಮತ್ತು ನೈತಿಕ ಮೌಲ್ಯಗಳ ಜಾಗೃತಿಗೆ ಪ್ರೇರಣೆಯಾಯಿತು ಎಂದರೆ ತಪ್ಪಾಗಲ್ಲ.



Post a Comment