ಗಜೇಂದ್ರಗಡ : (25_03_2026)
ಜನಸಾಮಾನ್ಯರ ಅನುಕೂಲಕ್ಕಾಗಿ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಸರ್ಕಾರಕ್ಕೆ ಮತ್ತು ಜನರಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಅಧಿಕಾರಿಗಳನ್ನ ಆಯಾ ಪದವಿಗೆ ನೇಮಿಸಲಾಗುತ್ತದೆ. ಅವರಿಗೆ ಪ್ರತಿ ತಿಂಗಳೂ ಸಂಬಳ ಬರುತ್ತದೆ. ಅದು ಸಹ ಸಾರ್ವಜನಿಕರು ಕಟ್ಟಿದ ಟ್ಯಾಕ್ಸ ರೂಪದ ಹಣದಲ್ಲಿ. ಜನ ನಾಯಕರಿಗೂ ಅಷ್ಟೆ. ಆದ್ರೆ, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಐದಾರು ದಶಕಗಳಿಂದ ರೈತರು ಪ್ರತಿಭಟನೆ ಮಾಡುತ್ತಲೇ, ಎರಡು ಮೂರು ತಲೆಮಾರುಗಳು ಉರುಳಿ ಹೋದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಯಾವ ಸರ್ಕಾರ ಬಂದರೂ ಅಷ್ಟೆ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ನಡೆಯುತ್ತಲೇ ಇದೆ. ಪ್ರತಿ ಭಾರಿ ಪ್ರತಿಭಟನೆ ಮಾಡಿದಾಲೂ ರೈತರಿಗೆ ಹಾರೈಕೆ ಉತ್ತರ ನೀಡಲಾಗುತ್ತದೆ. ಇದೆಲ್ಲವನ್ನ ಗಮನಿಸುತ್ತಿರುವ ರೈತರು ಬಂಡಾಯ ಎದ್ದು, ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಎದುರು ಹೋರಾಟ ಮಾಡಿ ಕಚೇರಿಗಳಿಗೆ ಬೀಗ ಹಾಕುವ ಮುನ್ನ ಎಚ್ಚರಗೊಳ್ಳಬೇಕಿದೆ. ಶಾಸಕರು, ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವ ದಿನಗಳು ದೂರ ಇಲ್ಲ.
ಗಜೇಂದ್ರಗಡದ ಒಂದು ವಾರ್ಡ್ ಗೆ ಕರೆಂಟ್ ಇಲ್ಲ ಎಂದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಿ ರೈತರ ಪರ ಇದ್ದೇವೆ ಎಂದು ಹೇಳಿಕೊಂಡಿತ್ತು. ಆದ್ರೀಗ ತಾಲೂಕಿನಾದ್ಯಂತ ಇರುವ ಬಗರ ಹುಕುಂ ಸಾಗುವಳಿ ರೈತರ ಗೋಳು ಕೇಳುವವರೆ ಇಲ್ಲದಂತಾಗಿದೆ.
ಗಜೇಂದ್ರಗಡ ಗುಡ್ಡದ ಮೇಲೆ ಹೆಚ್ಚಾಗಿ ಹಿಂದುಳಿದ ಲಂಬಾಣಿ ಸಮುದಾಯದ ರೈತರೆ ಹೆಚ್ಚು ಇರುವುದರಿಂದ ರಾಜಕೀಯಕ್ಕೆ ಬಳಸಿಕೊಳ್ಳುವ ನಾಯಕರು, ಸಮಸ್ಯೆ ಎಂದು ಬಂದಾಗ ಅದು ಸರ್ಕಾರದ ಸುಪರ್ದಿಗೆ ಮತ್ತು ಜಿಲ್ಲಾಧಿಕಾರಿ ವ್ಯಾಪ್ತಿಗೆ ಎಂದು ಸಬುಬೂ ಹೇಳುವ ಬದಲು ರೈತರ ಸಮಸ್ಯೆ ಬಗೆಹರಿಸಬೇಕಿದೆ. ಈಗಲಾದರೂ ಕಾಲ ಮಿಂಚಿಲ್ಲ. ರೈತರ ಪರ ಧ್ವನಿ ಮೊಳಗಬೇಕಿದೆ. ಕೊನೆ ಚುನಾವಣೆ ಎಂದು ಕೈ ಕಟ್ಟಿಕುಳಿತರೇ, ಮುಂಬರುವ ದಿನಗಳಲ್ಲಿ ತಾಲೂಕಿನ ರೈತರು ತಮ್ಮ ತಮ್ಮ ಕುಟುಂಬ ಸಮೇತ, ಮಕ್ಕಳೊಂದಿಗೆ ಜಾನುವಾರುಗಳೊಂದಿಗೆ ಕಚೇರಿಗಳ ಮುಂದೆ ಕೂರುವ ದಿನಗಳು ದೂರ ವಿಲ್ಲ.
ಗಜೇಂದ್ರಗಡದ ರೈತರು ಬಗರ್ ಹುಕುಂ ಸಾಗುವಳಿಗೆ ಐದಾರು ದಶಕದಿಂದ ನಡೆಯುತ್ತಿರುವ ಪ್ರತಿಭಟನೆ 25 ಮಾರ್ಚ್ 2026 ರಿಂದ ಮತ್ತೆ ಪ್ರಾರಂಭವಾಗಿದೆ. ಕೆ.ಪಿ.ಆರ್.ಎಸ್ ನೇತೃತ್ವ ವಹಿಸಿದ್ದು, ರೈತ ಮುಖಂಡರಾದ ಪೀರು ರಾಠೋಡ್, ಗಣೇಶ್ ರಾಠೋಡ್ ಮಾತನಾಡಿದರು. ಸರ್ಕಾರಕ್ಕೆ ಎಷ್ಟೆ ಛೀಮಾರಿ ಹಾಕಿದರೂ, ಕಣ್ಣು, ಕಿವಿ, ಮೂಗು, ಬಾಗಿಮುಚ್ಚಿಕೊಂಡಿರುವ ಸರ್ಕಾರಕ್ಕೆ ರೈತರ ಕೂಗು ಕೇಳಿಸದಿದ್ದರೇ, ಸರ್ಕಾರ ನಡೆಸಲು ಯೋಗ್ಯತೆ ಇಲ್ಲ ಎಂದು ಸಾರ್ವಜಮಿಕರು ಚರ್ಚೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ರೂಪೇಶ್ ಮಾಳೋತ್ತರ್, ಪೀರು ರಾಠೋಡ್, ಚಂದ್ರು ರಾಠೋಡ್, ಚನ್ನಪ್ಪ ಗೂಗಲೋತ್ತರ್, ಗಣೇಶ್ ರಾಠೋಡ್, ಮೆಹಬೂಬ್ ಹವಾಲ್ದಾರ್, ಅನಿಲ್ ಆರ್, ಬಾಲು ರಾಠೋಡ್, ಶಿವಪ್ಪ ಮಾಳೋತ್ತರ್, ಲೋಕಪ್ಪ ಕಾಳಪ್ಪ ರಾಠೋಡ್, ಈರಪ್ಪ ಕಾಳಪ್ಪ ರಾಠೋಡ್,
ವೀರಭದ್ರಪ್ಪ ಮಾಳೋತ್ತರ್,
ರತ್ನಪ್ಪ ಮಾಳೋತ್ತರ್, ಲೋಕಪ್ಪ ರಾಠೋಡ್,
ಮಾರುತಿ ರಾಠೋಡ್, ಚಂದ್ರು ಅಜ್ಮೀರ್, ಶಿವವ್ವ, ದೇವಕ್ಕ, ಶಾವವ್ವ ಸೇರಿದಂತೆ ನೂರಾರು ರೈತರು ವಿದ್ಯಾರ್ಥಿಗಳು ಯುವಕರು ಭಾಗವಹಿಸಿದ್ದರು.



Post a Comment