Bagalakote : ಜಿಲ್ಲಾಸ್ಪತ್ರೆಲಿ ಭ್ರಷ್ಟಾಚಾರ ಆರೋಪ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ : ಕ್ರಾಂತಿಸೂರ್ಯ ಜೈ ಭೀಮ್ ಸೇನೆ ರಾಷ್ಟ್ರಾಧ್ಯಕ್ಷ ಮಂಜುನಾಥ್ ಒತ್ತಾಯ
ಬಾಗಲಕೋಟೆ : (May_15_2026)
ನವನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಆರೋಪಗಳು ಕೇಳಿ ಬಂದಿವೆ. ಹೀಗಾಗಿ, ಈ ಆರೋಪದ ಹಿನ್ನೆಲೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳನ್ನ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನ ಅಮಾನತು ಮಾಡಬೇಕೆಂದು ಕ್ರಾಂತಿಸೂರ್ಯ ಜೈ ಭೀಮ್ ಸೇನೆ ರಾಷ್ಟ್ರಾಧ್ಯಕ್ಷ ಮಂಜುನಾಥ್ ರಾಠೋಡ್ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳು ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಕೊನೆಯಾಗಬೇಕಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಆರೋಪಿತರನ್ನ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಇದು ಕೇವಲ ಒಂದು ಸೆಕ್ಷನ್ ಗೆ ಸಂಬಂಧ ಪಟ್ಟದ್ದಾಗಿದೆ. ಹೆರಿಗೆ ವಾರ್ಡ್ ನಲ್ಲೂ ಹಣ ಪೀಕುತ್ತಾರೆ. ಮೆಡಿಕಲ್ ಫಿಟ್ನೆಸ್ ಗೆ ಬಂದವರಿಂದಲೂ ಹಣ ಪಡೆಯುತ್ತಾರೆ.
ಜಿಲ್ಲಾಸ್ಪತ್ರೆಯಲ್ಲಿನ ಬಹುತೇಕ ಎಲ್ಲ ವೈದ್ಯರು ತಮ್ಮ ತಮ್ಮ ಖಾಸಗಿ ಆಸ್ಪತ್ರೆ ಮಾಡಿಕೊಂಡು ಕೆಲಸ ಮಾಡುತ್ತಾರೆ.
ಸರ್ಕಾರದ ಆದೇಶ ಇಲ್ಲದಿದ್ದರೂ, ಸಾರ್ವಜನಿಕರಿಂದಲೇ ಹಣ ಪಡೆದು ಸಣ್ಣ ಪುಟ್ಟ ಕೆಲಸಕ್ಕೆ ಈ ಹಣ ಉಪಯೋಗಿಸುತ್ತೇವೆ ಎಂದು ಸಬೂಬು ಹೇಳುತ್ತಾರೆ. ಆದ್ರೆ, ಟಿಬಿ ಸೆಕ್ಷನ್ ನಲ್ಲಿ ಲಕ್ಷಾಂತರ ಹಣ ಲೂಟಿಯಾಗುತ್ತಿದೆ ಇದೆಲ್ಲದಕ್ಕೂ ಕೊನೆಯಾಗಬೇಕಿದೆ ಎಂದು ಕ್ರಾಂತಿ ಸೂರ್ಯ ಜೈ ಭೀಮ್ ಸೇನೆ ರಾಷ್ಟ್ರಾಧ್ಯಕ್ಷ ಆಕ್ರೋಶ ಹೊರ ಹಾಕಿದ್ದಾರೆ.
ತಪ್ಪು ಮಾಡಿದ್ದಾರೆ ಎಂಬ ಆರೋಪ ಇರುವಾಗ ಅಂತವರನ್ನ ಅಮಾನತ್ತಿನಲ್ಲಿಡಿ ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.



Post a Comment