-->
Bookmark

Gajendragad : ಒಂದನೇ ತರಗತಿಯ ಮಕ್ಕಳ ಹೆಸರಲ್ಲಿ 1000ರೂ ಠೇವಣಿ

Gajendragad : ಒಂದನೇ ತರಗತಿಯ ಮಕ್ಕಳ ಹೆಸರಲ್ಲಿ 1000ರೂ ಠೇವಣಿ

ಗಜೇಂದ್ರಗಡ : (Jun_15_2026)

 ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಗಜೇಂದ್ರಗಡ ತಾಲ್ಲೂಕಿನ ಗೋಗೇರಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಂದ್ರಶೇಖರ ಕೆ ಕೇಸರಿ ಅವರು ಒಂದನೇ ತರಗತಿಗೆ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿ ಹೆಸರಿನಲ್ಲೂ ₹1,000 ಠೇವಣಿ ಇಡಲು ಮುಂದಾಗಿದ್ದಾರೆ.


ಗ್ರಾಮದ ಮಕ್ಕಳು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿಯೇ ಕಲಿತು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳಲಿ ಎಂಬ ಉದ್ದೇಶದಿಂದ ಸಿ ಕೆ ಕೇಸರಿ ಅವರು ಈ ಉಪಕ್ರಮ ಕೈಗೊಂಡಿದ್ದಾರೆ.

‘ಕಳೆದ ವರ್ಷ ನಮ್ಮ ಶಾಲೆಯಲ್ಲಿ 9 ವಿದ್ಯಾರ್ಥಿಗಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಮಕ್ಕಳು ನಮ್ಮ ಶಾಲೆಯಲ್ಲಿ ಪ್ರವೇಶ ಪಡೆದು ನಿತ್ಯ ಶಾಲೆಗೆ ಬರುವಂತಾಗಲಿ ಎಂಬ ಸದುದ್ದೇಶದಿಂದ ನಮ್ಮ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲು ನಿರ್ಧರಿಸಿದ್ದೇನೆ’ ಎಂದು ಶಿಕ್ಷಕ ಕೇಸರಿ ಅವರು ಮಾಹಿತಿ ನೀಡಿದರು.
 ನಿತ್ಯ ವಿದ್ಯಾರ್ಥಿಗಳಿಗೆ ಬಿಸಿಯೂಟ, ಹಾಲು, ಮೊಟ್ಟೆ ನೀಡಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಯೋಜನೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಶಾಲೆ ಮುಖ್ಯಶಿಕ್ಷಕ ಎಲ್ ಡಿ ಅವಟೆ ಅಭಿಪ್ರಾಯಪಟ್ಟರು.

‘ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಕಾಳಜಿ ವಹಿಸುತ್ತಿದ್ದಾರೆ. 

‘ ಗೋಗೇರಿ ಗ್ರಾಮದ ಉರ್ದು ಶಾಲೆಯ ಶಿಕ್ಷಕರ ಈ ಕಾರ್ಯ ತಾಲ್ಲೂಕಿನ ಇತರ ಶಿಕ್ಷಕರಿಗೂ ಮಾದರಿಯಾಗಿದೆ’ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್ ಆಯ್ ಬಾಗವಾನ ಅಭಿಪ್ರಾಯಪಟ್ಟಿದ್ದಾರೆ.
Post a Comment

Post a Comment