-->
Bookmark

Gajendragad : ಸಚಿವ ಸ್ಥಾನಕ್ಕಾಗಿ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದ ಶ್ರೀ ಮಾರುತೇಶ್ವರ ಹಮಾಲರ ಸಂಘ

Gajendragad : ಸಚಿವ ಸ್ಥಾನಕ್ಕಾಗಿ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದ ಶ್ರೀ ಮಾರುತೇಶ್ವರ ಹಮಾಲರ ಸಂಘ 
ಗಜೇಂದ್ರಗಡ : (Jun_13_2026)
ಗದಗ ಜಿಲ್ಲೆಯ ರೋಣ ವಿಧಾನಸಭಾ ಮತ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನಕ್ಕಾಗಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಈಗಾಗಲೇ ಆಗ್ರಹಿಸುತ್ತಿದ್ದಾರೆ. ಈಗ ಗಜೇಂದ್ರಗಡದ ಶ್ರೀ ಮಾರುತೇಶ್ವರ ಹಮಾಲರ ಸಂಘ ಕೂಡ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿದರು. ಇದೇ ವೇಳೆ ವಿಘ್ನೇಶ್ವರನಿಗೆ ಮತ್ತು ಮಾರುತೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಶ್ರೀ ಮಾರುತೇಶ್ವರ ಹಮಾಲರ ಸಂಘದ ಅಧ್ಯಕ್ಷ  ಪರಸಪ್ಪ ಕಲಾಲ್ ಮತ್ತು ಉಪಾಧ್ಯಕ್ಷ ಯಶವಂತ್ ಪವಾರ್ ಮಾತನಾಡಿ, ಶಾಸಕರಾದ ಜಿ.ಎಸ್ ಪಾಟೀಲ್ ಅವರು ಹಿರಿಯರು ಅವರಿಗೆ ಸಚಿವ ಸಂಚಿವ ಸಂಪುಟದಲ್ಲಿ ಸ್ಥಾನ ಕೊಡಬೇಕೆಂದು ಆಗ್ರಹಿಸಿದರು. ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು.
Post a Comment

Post a Comment