-->
Bookmark

Karwar : "ಓಂ"ಕಾರ & "ಝೇಂ"ಕಾರ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲಿದೆ : ಕಾರವಾರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಸ್.‌ಪಿ ಕಾಮತ್ ಅಭಿಮತ

Karwar : "ಓಂ"ಕಾರ & "ಝೇಂ"ಕಾರ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲಿದೆ : ಕಾರವಾರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಸ್.‌ಪಿ ಕಾಮತ್ ಅಭಿಮತ 
ಕಾರವಾರ : (Jun_13_2026)
ಮಕ್ಕಳಿಗೆ ಓಂಕಾರ ಹೇಳಿಕೊಡಬೇಕು. ಓಂ ಕಾರದಿಂದ ಮತ್ತು ಝೇಂಕಾರ ಮನಸ್ಸು ಶಾಂತವಾಗಿಸುತ್ತದೆ. ಏಕಾಗ್ರತೆಗೆ ಸಹಕಾರಿಯಾಗಲಿದೆ ಎಂದು ಕಾರವಾರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಸ್.‌ಪಿ ಕಾಮತ್ ಹೇಳಿದರು. ಕಾರವಾರ ನಗರದ ಬಾಲಮಂದಿರ ಶಾಲೆಯ ನರ್ಸರಿ ವಿಭಾಗದಲ್ಲಿ ನಡೆದ ವಿದ್ಯಾಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ‌ ಪಾಠಶಾಲೆಯಾಗಿದೆ. ಬಾಲ‌ಮಂದಿರ ಶಾಲೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.‌
ಇದೇ ವೇಳೆ, ಮಾತನಾಡಿದ ಕಾರವಾರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಅನಿರುದ್ಧ್ ಹಳದಿಪುರಕರ್, ಮಕ್ಕಳಲ್ಲಿ ದೇವರನ್ನ ಕಾಣ‌ಬೇಕು ಎನ್ನುವುದು ಯಾಕೆ‌ ಅಂದ್ರೆ, ಮಕ್ಕಳಿಗೆ ಒಳ್ಳೆಯದು ಕೆಟ್ಟದ್ದು ತಿಳಿಯುವುದಿಲ್ಲ. ಹೀಗಾಗಿ‌ ಮಕ್ಕಳಲ್ಲಿ ದೇವರನ್ನ ಕಾಣುತ್ತೇವೆ‌ ಎಂದರು. ಮನೆಯಲ್ಲಿ ವಾತಾವರಣ ಚೆನ್ನಾಗಿರಬೇಕು. ಶಾಲೆಗೆ ಮಕ್ಕಳನ್ನ ಕಳಿಸಿ, ನಿಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸಬಾರದು. 
ಶಾಲೆಯಲ್ಲಿ ಬಿಡುವಾಗ ಮಕ್ಕಳನ್ನ ಒಳ್ಳೆಯ ಮನಸ್ಸಿಂದ ಬಿಟ್ಟು ಹೋಗಬೇಕು. ಮನೆಯ ವಾತಾವರಣ ಸೃಷ್ಟಿಸಬೇಕು. ಇದು ಶಾಲೆಯಲ್ಲ ಎರಡನೇ ಮನೆ‌ ಎಂದು ಭಾವಿಸಬೇಕೆಂದು ತಮ್ಮ ಮನದಾಳ ಹಂಚಿಕೊಂಡರು. 
ಜೊತೆಗೆ, ವಿದ್ಯಾ ಪ್ರವೇಶದಿಂದ ಸರಸ್ವತಿ ಬಂದ‌ ನಂತರ ಲಕ್ಷ್ಮೀ ಬರುತ್ತದೆ. ಸರಸ್ವತಿಯನ್ನ ಒಲಿಸಿಕೊಳ್ಳಿ, ಲಕ್ಷ್ಮೀ ನಿಮ್ಮದಾಗಲಿದೆ ಎಂದು ಹೇಳಿದರು. ವಿದ್ಯಾ ಪ್ರವೇಶಕ್ಕೆ ಅತ್ತುತ್ತಮ ದಿನವನ್ನ ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ಮಕ್ಕಳ ಭವಿಷ್ಯ ಉತ್ತವಾಗಿರಲಿ ಎಂದು ಮಕ್ಕಳಿಗೆ‌ ಮತ್ತು ಪಾಲಕರು ಪೋಷಕರಿಗೆ ಅನಿರಿದ್ಧ ಹಳದಿಪುರಕರ್
ಕಿವಿಮಾತು ಹೇಳಿದರು.‌
ಕಾರವಾರ ಶಿಕ್ಷಣ ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿ ಜಿ.ಪಿ ಕಾಮತ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ಕಲಿಸುವುದು ಮುಖ್ಯ ಎಂದರು. ಪುಟಾಣಿ ಮಕ್ಕಳ ಮನಸ್ಸು ತುಂಬಾ ಮೃದುವಾದದ್ದು, ಅವರಿಗೆ ಏನು ಕಲಿಸಬೇಕು. ಕಲಿಸಬಾರದೆಂಬುದು ಸಹ ಬಹಳ ಮಹತ್ವದ್ದು ಎಂದರು. ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಾರ್ಥಿಸಿದರು. 
ಬಾಲಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಂಜಲಿ ಮಾನೆ ಎಲ್ಲರನ್ನು ಸ್ವಾಗತಿಸಿದರು. 
ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಧ್ಯಾನ, ಗಣೇಶ ಸ್ತುತಿ, ತಿಲಕಧಾರಣೆ, ಮಾಲಾರ್ಪಣೆ, ಪುಷ್ಪಾರ್ಚನೆ, ಸಿಹಿ ವಿತರಣೆ, ಸರಸ್ವತಿ ಸ್ತುತಿ, ಅಕ್ಕಿಯ ಮೇಲೆ ‘ಶ್ರೀ’ ಬರವಣಿಗೆ, ಆರತಿ ಹಾಗೂ ಪ್ರಸಾದ ವಿತರಣೆಯಂತಹ ವಿವಿಧ ಸಂಸ್ಕಾರಪೂರ್ಣ ವಿಧಿವಿಧಾನಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ನಜಿರುದ್ಧೀನ್ ಸೈಯದ್, ಗೀತಾ ಐಸಾಕ್, ಸಂತೋಷ ಶೇಟ್, ಮಾಧುರಿ ನಾಯ್ಕ ಸೇರಿದಂತೆ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ನೀಫಾ ಡಿ’ಕೊಸ್ಟಾ ಕಾರ್ಯಕ್ರಮ ನಿರೂಪಿಸಿದರು.
ವರದಿ : 
ಕೃಷ್ಣ ರಾಠೋಡ್ 
ಸಂಪಾದಕರು 
ಕಿರಾ ನ್ಯೂಸ್ ಕನ್ನಡ. 
ಸಂಪರ್ಕ : 8197474996
Post a Comment

Post a Comment