-->
Bookmark

Bagalakote : ಸುಳೆಭಾವಿಯ ಕಿರಿಯ ವಯಸ್ಸಿನ ಹಿರಿಯ ಆರೋಗ್ಯ ಸಹಾಯಕಿ : ಜೇನ ಹನಿಯಂತೆ ಜನರ ಸೇವೆ

Bagalakote : ಸುಳೆಭಾವಿಯ ಕಿರಿಯ ವಯಸ್ಸಿನ ಹಿರಿಯ ಆರೋಗ್ಯ ಸಹಾಯಕಿ : ಜೇನ ಹನಿಯಂತೆ ಜನರ ಸೇವೆ

ಬಾಗಲಕೋಟೆ : (Oct_01_2026)
ಜಿಲ್ಲೆಯ ಹುನಗುಂದ ತಾಲೂಕಿನ ಸುಳೆಭಾವಿ ಗ್ರಾಮದವರಾದ ಮಧು ಅನ್ನಪೂರ್ಣ ಬಾಗಲಿ ಅಪ್ಪಟ ಗ್ರಾಮೀಣ ಪ್ರತಿಭೆ.‌ ನಗರದದ ಬಸ್ಟಾಂಡ್ ಹತ್ತಿರ  ಹೆರಂಜಲ್ ಆಸ್ಪತ್ರೆಯಲ್ಲಿ ಕಳೆದ 4 ವರ್ಷದಿಂದ ಹಿರಿಯ ಆರೋಗ್ಯ ಸಹಾಯಕಿಯಾಗಿ  ಕೆಲಸ ನಿರ್ವಹಿಸುತ್ತಿದ್ದಾರೆ. 

ಸ್ವ ಗ್ರಾಮ ಸುಳೆಭಾವಿಯಲ್ಲಿ ಮಹಿಳೆಯರು ನರ್ಸಿಂಗ್ ಕಲಿತು ಕೆಲಸ ಮಾಡುತ್ತಿರುವ ಬೆರಳೆಣಿಕೆಯಷ್ಡು ಸಿಸ್ಟರ್ಸ್ ಮಾತ್ರ. ಅವರಲ್ಲಿ ಮಧು ಬಾಗಲಿ‌ಕೂಡ ಒಬ್ಬರು.‌ ಬಡತನದಲ್ಲಿ ಹುಟ್ಟಿ ಬೆಳೆದ ಮಧು ನರ್ಸ್ ಆಗಿ ಕೆಲಸ ಮಾಡುವುದು ಒಂದು ಸೇವೆ ಎಂದೆ ಭಾವಿಸಿದ್ದಾರೆ. 

ಗ್ರಾಮೀಣ ಭಾಗದಲ್ಲಿ ಜನರಿಗೆ ಸೇವೆ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ತಂದೆ ಇಲ್ಲ ಎಂಬ ಕೊರಗು ಇಲ್ಲದೆ ತಾಯಿ ಅನ್ನಪೂರ್ಣ ಬೆಳೆಸಿದರು ಎಂದು ಮಧು ಸಿಸ್ಟರ್ ಭಾವುಕರಾದ್ರು. 

ಬಡತನದಲ್ಲಿ ಬೆಳೆದ ಗ್ರಾಮೀಣ ಪ್ರತಿಭೆ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದು, ಬಡ ಜನರಿಗೆ ಇನ್ನಷ್ಟು ಸೇವೆ ಮಾಡಲು ಅಣಿಯಾಗುತ್ತೇನೆ ಎನ್ನುತ್ತಾರೆ. 

ಇವರು ಸುಳೆಭಾವಿಯ ಕೀರ್ತಿ ಹೆಚ್ಚಿಸಿದ್ದು, ಗ್ರಾಮದಲ್ಲಿ ಎಲ್ಲರಿಗೂ ಚಿರಪರಿಚಿತರು.‌ ಈ ವೃತ್ತಿ ಕೇವಲ ಒಂದು ಕೆಲಸ ಅಲ್ಲ ಅದು ಸೇವೆ ಎಂದು ಭಾವಿಸಬೇಕೆಂದು ತಾಯಿ ಅನ್ನಪೂರ್ಣ ಹೆಳಿದ್ದನ್ನ ಮಧು ಸ್ಮರಿಸುವುದು ಸರ್ವೇ ಸಾಮಾನ್ಯ...!
Post a Comment

Post a Comment