ಪಶ್ಚಿಮ ಪದವಿಧರ ಚುನಾವಣೆಗೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರ ತಂತ್ರ
ಮೋಹನ್ ಲಿಂಬಿಕಾಯಿ ಸೋಲಿಸಲು ತೆರೆಮರೆಯಲ್ಲಿ ಕಸರತ್ತು...?
ಸ್ಥಳೀಯ ಸಂಸ್ಥೆ ಚುನಾವಣೆಗೂ ತಟ್ಟಲಿದೆಯಾ ಕಡೆಗಣನೆಯ ಬಿಸಿ...?
ಹಸ್ತಕ್ಕೆ ಮುಳುವಾಗಲಿದೆಯಾ Overconfidence...?
ಸರ್ಕಾರ ವಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲಲಾಗದು ಎನ್ನುತ್ತಿರುವ ಕಾರ್ಯಕರ್ತರು
ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ 'ಕೈ' ಪಾಳಯದಲ್ಲಿ ಬೆರಳೆಣಿಕೆ ಮತದಾರರು...?
ಗಜೇಂದ್ರಗಡ : (Oct_09_2026)
ಪಶ್ಚಿಮ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊಹನ್ ಲಿಂಬಿಕಾಯಿ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ, ಪಕ್ಷದ ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕೈ ಪಕ್ಷದಲ್ಲಿ ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ ಎಂದು ಚುನಾವಣೆ ನಂತರದಲ್ಲಿ ಬಹಳಷ್ಟು ಕಾರ್ಯಕರ್ತರು ಘಂಟಾಘೋಷವಾಗಿ ಹೇಳುತ್ತಿದ್ದರು. ಈಗ ಚುನಾವಣೆ ಬಳಿಕ ಮತ್ತೆ ಅದೇ, ಚಾಳಿ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.
ಈಗ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಇದ್ದು, ಎಲ್ಲೆಡೆ ಪ್ರಚಾರ ಜೋರಾಗಿದೆ. 'ಕೈ' ಪಾಳಯದಲ್ಲಿ ರೋಣ ಮತ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮತದಾರರು ಮಾತ್ರ ಹಾಜರಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ. ಬೇಕಾದಾಗ ಮಾತ್ರ ಬಳಸಿಕೊಂಡು ಬೀಸಾಡುವ ಚಾಳಿ ಇದೆ ಎಂದು ನಿಷ್ಟಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ. ಪಶ್ಚಿಮ ಪದವಿಧರ ಚುನಾವಣೆಯಲ್ಲೂ ನಾವು ಅಧಿಕಾರದಲ್ಲಿದ್ದೇವೆ ಗೆಲ್ಲುತ್ತೇವೆ ಎಂಬ Overconfidence ಇದೆ. ಇದು ಹಸ್ತಕ್ಕೆ ಮುಳುವಾಗಲಿದೆ ಎಂಬ ಮಾತಿದೆ.
ಇತ್ತ, ಕಾಂಗ್ರೆಸ್ ನ ಹಿರಿಯರಾದ ಹೆಚ್.ಕೆ ಪಾಟೀಲ್ ಅವರಿಗೂ ಅಸಮಾಧಾನ ಇದೆ. ಸಚಿವರಾಗಲಿಲ್ಲ ಎಂಬ ಅಸಮಾಧಾನವನ್ನ ಯಾವ ರೀತಿ ಹೊರ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಅಸಮಾಧಾನದಲ್ಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಯಾವ ರೀತಿ ಪಕ್ಷವನ್ನ ಕಟ್ಟಲಿದ್ದಾರೆ...? ಬೂತ್ ಮಟ್ಟದಲ್ಲಿ ಪಕ್ಷವನ್ನ ಬಲಪಡಿಸುವ ಕೆಲಸ ಯಾರು ಮಾಡಬೇಕು...? ಎಂಬ ಪ್ರಶ್ನೆಗೆ ಉತ್ತರ ವಿಲ್ಲದಂತಾಗಿದೆ.
ತಮ್ಮ ಕೆಲಸವಾದ ಬಳಿಕ ಕಾರ್ಯಕರ್ತರನ್ನ ಕಡೆಗಣಿಸುವುದು ಪಕ್ಷಕ್ಕೆ ನಷ್ಟವಾಗಲಿದೆ. ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತರ ಪಕ್ಷ. ನಿಷ್ಟಾವಂತರನ್ನೆ ಗಡೆಗಣಿಸಿ, ಅಧಿಕಾರದಲ್ಲಿದ್ದೇವೆ. ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮ ವಿಶ್ವಾಸ ಇವರನ್ನ ಚುನಾವಣೆಯಲ್ಲಿ ಸೋಲಾಗಲು ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಜನವರಿಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಹೀಗೆ ಸಾಲು ಸಾಲು ಚುನಾವಣೆ ಇರುವಾಗ ತಮ್ಮ ಕೆಲಸ ವಿದ್ದಾಗ ದುಡಿಸಿಕೊಳ್ಳುವ ಮನೋಭಾವ ಹೊಂದಿರುವ ಮುಖಂಡರಿಗೆ ತಕ್ಷ ಪಾಠ ಕಲಿಸಲು ಕಾರ್ಯಕರ್ತರು ಕಾದು ಕುಳಿತಿದ್ದಾರೆ. ವಿಧಾನಸಭಾ ಚುನಾವಣೆ ಗೆದ್ದ ಮಾತ್ರಕ್ಕೆ ಎಲ್ಲವನ್ನೂ ಗೆದ್ದೆ ಎಂಬ ಹುಮ್ಮಸ್ಸು ಹುಸಿಯಾಗಲಿದೆ ಎಂದು ಹೆಸರು ಹೇಳಲು ಇಚ್ಚಿಸದ ಕಾರ್ಯಕರ್ತರು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಪದವೀಧರ ಚುನಾವಣೆಯಲ್ಲಿ ರೋಣ ಮತ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮತದಾರರ ಗುಂಪು ಕಟ್ಟಿಕೊಂಡು ಓಡಾಡುವ ಮೋಹನ್ ಲಿಂಬಿಕಾಯಿ ಅವರಿಗೆ ಸೋಲಿಸಲು ತೆರೆಮರೆಯಲ್ಲಿ ಎಲ್ಲ ಕಸರತ್ತು ನಡೆದಿದೆ ಎನ್ನುತ್ತಾರೆ ಕಾರ್ಯಕರ್ತರು.
ಅದೇನೇ ಇರಲಿ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಮಾತ್ರವಿಲ್ಲ. ಬದಲಾಗಿ ಸ್ಥಳೀಯ ಸಂಸ್ಥೆ ಚುನಾವಣೆಯೂ ಇದೆ. ಕಾರ್ಯಕರ್ತರಿಲ್ಲದೇ, ಕಾಂಗ್ರೆಸ್ ಗೆಲುವು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಕಾಲವೆ ಉತ್ತರಿಸಲಿದೆ.
ಕೃಷ್ಣ ರಾಠೋಡ್
ಸಂಪಾದಕರು
ಕಿರಾ ನ್ಯೂಸ್ ಕನ್ನಡ
ಗಜೇಂದ್ರಗಡ.
ಮೊ : 8197474996



Post a Comment