ಪರ್ಯಾಯ ಶಕ್ತಿ ಕೇಂದ್ರವಾಗತ್ತಾ ಭಿನ್ನಮತ...?
ರೋಣ ವಿಧಾನಸಭಾ ಮತ ಕ್ಷೇತ್ರದಲ್ಲಿ ಪರ್ಯಾಯ ಬಯಸುತ್ತಿದ್ದಾರೆ ಎಂದು ಕಾರ್ಯಕರ್ತರು ಅಲ್ಲಲ್ಲಿ ಹೇಳಿಕೊಂಡು ಓಡಾಡುವುದು ಕಂಡು ಬರುತ್ತಿದೆ. ಕಳೆದೊಂದು ದಶಕದಿಂದ ಈ ಪ್ರಕ್ರಿಯೆ ಹೆಚ್ಚಾಗಿದೆ. ಕಾಂಗ್ರೆಸ್ ನಲ್ಲಿ ಹಿರಿಯರಾದ ಜಿ.ಎಸ್ ಪಾಟೀಲ್ ಕ್ಷೇತ್ರದಲ್ಲಿ ಹೆಬ್ಬುಲಿ...!
ಕಾರ್ಯಕರ್ತರನ್ನ ಹುರಿದುಂಬಿಸುವುದು, ಬೆಳೆಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ನಲ್ಲಿ ಪರ್ಯಾಯ ಬಯಸುವವರು ಈಗ ಯಾರು ಇಲ್ಲದಂತಾಗಿದೆ. ಆದ್ರೆ, 2004 ರಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಮಾಜಿ ಸಚಿವ ಕಳಕಪ್ಪ ಬಂಡಿ ಅವರು, ಜೊತೆಗಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸುತ್ತಾ ಬಂದಿದ್ದಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಕ್ಷೇತ್ರದಲ್ಲಿ ಸಿದ್ದಪ್ಪ ಬಂಡಿ ಅವರು ಬಿಜೆಪಿಯಿಂದ ಬೇರ್ಪಟ್ಟು ಕಾಂಗ್ರೆಸ್ ಸೇರಿದರು. ತಮ್ಮದೇ ಸಮಾಜದ ಕೆಲ ಮುಖಂಡರನ್ನ ವಿರೋಧ ಬೆಳೆಸಿಕೊಂಡರು. ಅವರು 2023ರ ಚುನಾವಣೆಯಲ್ಲಿ ಕೈ ಪಾಳಯಕ್ಕೆ ಬಂದ್ರು. ಜೊತೆಗೆ ರೋಣ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಆಗಲಿದೆ ಎಂದು ಹಲವು ಮುಖಂಡರು ಜಗಜ್ಜಾಹಿರವಾಗಿ ಹೇಳತೊಡಗಿದರು. ಅಷ್ಟೆ ಅಲ್ಲದೆ, ಚುಮಾವಣೆಯಲ್ಲಿ ಟಿಕೆಟ್ ಕೂಡ ಸಿಗಲಿದೆ ಎಂದು ಓಡಾಡಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದಿದ್ದ ಮಾಜಿ ಸಿಎಂ ಮತ್ತು ಹಾಲಿ ಸಂಸದರಾದ ಜಗದೀಶ್ ಶೆಟ್ಟರ್ ಬಿಜೆಪಿಗೆ ತಲೋನೋವಾಯ್ತು. ಹೀಗಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರನ್ನ ಕಳೆದುಕೊಳ್ಳಲು ಬಿಜೆಪಿ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ತೆರೆಮತರೆಯಲ್ಲಿ ಚರ್ಚೆಯೂ ನಡೆಯಿತು.
ಬಿಜೆಪಿ ಶಿಸ್ತಿನ ಪಕ್ಷ. ಅಲ್ಲಿ ನಾಯಕರನ್ನ ಹುಟ್ಟುಹಾಕುತ್ತೇವೆ. ಪ್ರತಿ ಕಾರ್ಯಕರ್ತ ಕೂಡ ತನ್ನದೇ ಆದ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರೂ, ಕೆಲವು ಸಂಧರ್ಭದಲ್ಲಿ ಬಿಜಪಿಗೆ ತಲೆನೋವಾಗಿರುವುದು ಆಂತರಿಕವಾಗಿ ಎಂಬುದು ಎದ್ದು ಕಾಣುತ್ತಿದೆ. 2028ರ ಚುನಾವಣೆ ಇನ್ನೂ ದೂರ ಇದೆ. ದೂರ ಇದ್ದಾಗಲೂ ಬಿಜೆಪಿಯಲ್ಲಿ ಹಲವು ಮುಖಂಡರು ತಾವು ಎಂ.ಎಲ್.ಎ ಟಿಕೇಟ್ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಚುನಾವಣೆಗೆ ಹಲವು ಮುಖಂಡರು ಬಹಿರಂಗವಾಗಿ ಟಿಕೇಟ್ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ ಎಂದರೆ, ಬಿಜೆಪಿಯಲ್ಲಿ ಮೊದಲು ಇದ್ದವರಿಗೆ ಬೆಲೆ ಇಲ್ಲ. ಕಟ್ಟಾ ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ ಎಂದು ಸಂಕಲ್ಪಯಾತ್ರೆ ಹಿನ್ನೆಲೆ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿದ್ದ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರ ಗಮನಕ್ಕೆ ತರಲಾಗಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.
ಚಾಣಾಕ್ಷರಾಗಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರು, ಪ್ರತಿ ಬಾರಿಯೂ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಪ್ರತಿ ಬಾರಿಯಂತೆ ಈ ಬಾರಿಯೂ ಕಳಕಪ್ಪ ಬಂಡಿ ಅವರಿಗೆ ಟಿಕೇಟ್ ಸಿಗುವುದಿಲ್ಲ. ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಯನ್ನ ರಾಜ್ಯಧ್ಯಕ್ಷರು ಗಮನಿಸುತ್ತಿದ್ದಾರೆ ಎಂದು ಕಾರ್ಯಕರ್ತು ಹೇಳುತ್ತಿದ್ದಾರೆ. ಈ ಮಧ್ಯೆ, ಬಿಜೆಪಿ ಭಿನ್ನಮತಿಯರ ಗುಂಪು ಗಪ್ ಚುಪ್ ಸಭೆ ನಡೆಸಿದ್ದಾರೆ ಎಂದು ಕಾರ್ಯಕರ್ತರು ಅಲ್ಲಲ್ಲಿ ಚರ್ಚಿಸುತ್ತಿದ್ದಾರೆ. ಗುಪ್ತಗೂ ಸಭೆ ನಡೆಸಿ, 2028ರ ಚುನಾವಣೆಯಲ್ಲಿ ಕಳಕಪ್ಪ ಬಂಡಿ ಅವರಿಗೆ ಬಿಟ್ಟು ಬೇರೆಯಾಗಿಗಾದರೂ ಟಿಕೇಟ್ ಕೊಡಿ ಇಲ್ಲದಿದ್ದರೇ, ಸಾಮೂಹಿಕವಾಗಿ ಬಿಜೆಪಿಗೆ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಕ್ಷೇತ್ರದಲ್ಲಿ ಸೋತು ಸಣ್ಣವಾಗಿರುವ ಬಿಜೆಪಿ ಮನೆಯೊಂದು ಮೂರು ಬಾಗಿಲುಗಳಾಗುವುದನ್ನ ಬಿಜೆಪಿ ಹಿರಿಯ ನಾಯಕರು ತಡೆಯುತ್ತಾರಾ ಅಥವಾ ಬಿಜೆಪಿ ಆಂತರಿಕ ಜಗಳ ಪರ್ಯಾಯ ಶಕ್ತಿ ಹುಟ್ಟು ಹಾಕಲು ಯಶಸ್ವಿಯಾಗುತ್ತಾ ಕಾದುನೋಡಬೇಕಿದೆ.
ಕೃಷ್ಣ ರಾಠೋಡ್
ಸಂಪಾದಕರು
ಕಿರಾ ನ್ಯೂಸ್ ಕನ್ನಡ
ಗಜೇಂದ್ರಗಡ
ಮೊ : 8197474996



Post a Comment