ನ.27 ಕ್ಕೆ "ಬೆಲ್ ಬಟನ್" ರಾಜ್ಯಾದ್ಯಂತ ತೆರೆಗೆ
ಬೆಂಗಳೂರು:"ಬೆಲ್ ಬಟನ್"- for heart notification ಎಂಬ ಅಡಿಬರಹದೊಂದಿಗೆ ಹೃದಯ ಸ್ಪರ್ಶಿಸುವ ಹೊಸ ಅನುಭೂತಿಯನ್ನು ಹೊತ್ತು ತರುತ್ತಿರುವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಚಿತ್ರವು ಇದೇ ನವೆಂಬರ್ 27 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ.
ತಂದೆ ಮಗನ ಬಾಂಧವ್ಯ ಹಾಗೂ ತಂದೆ- ತಾಯಿಯ ಕನಸುಗಳಿಗೆ ಮಕ್ಕಳು ಏಕೆ ಮಹತ್ವ ಕೊಡಬೇಕು ಎಂಬುದನ್ನು ತಿಳಿಸುವ ಕಥೆ.
ಪ್ರತಿ ತಂದೆ ತಾಯಿ ಕೂಡ ತಾವು ಮಾಡೋಕೆ ಆಗದ ಕೆಲಸವನ್ನು ತಮ್ಮ ಮಕ್ಕಳಾದರೂ ಮಾಡಲಿ ಅಂತ ಆಸೆ ಪಡ್ತಾರೆ. ಹಾಗೆ ಒಬ್ಬ ಮಧ್ಯಮ ವರ್ಗದ ವ್ಯಕ್ತಿಗೆ ತನ್ನ ಮಗನಿಗೆ ಪ್ರೇಮ ವಿವಾಹವಾಗಬೇಕು ಎಂಬುದು ದೊಡ್ಡ ಕನಸು. ಆತನ ಮಗ ಚಿರು ಪ್ರೀತಿಯಲ್ಲಿ ಬಿದ್ದು, ಆ ವಿಷಯವನ್ನು ತನ್ನ ತಂದೆಗೆ ತಿಳಿಸುತ್ತಾನೆ. ಇದರಿಂದ ತಂದೆಗೆ ಅತೀವ ಖುಷಿಯಾಗಿ, ಆ ಹುಡುಗಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳುತ್ತಾನೆ. ಆದರೆ ದುರದೃಷ್ಟವಶಾತ್ ಆ ಹುಡುಗಿ ಚಿರುನ ಪ್ರೀತಿಯ ಪ್ರಸ್ತಾಪ ತಿರಸ್ಕರಿಸುತ್ತಾಳೆ. ಇದರಿಂದ ನಿರಾಶೆಗೊಳ್ಳುವ ಚಿರು, ಮುರಿದುಹೋದ ತನ್ನ ಪ್ರೀತಿಯ ವಿಷಯವನ್ನು ತನ್ನ ತಂದೆಗೆ ಹೇಳುವುದಿಲ್ಲ. ಹೇಗೋ ಮಾಡಿ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ. ಮುಂದೆ ಏನಾಗುತ್ತದೆ ಮತ್ತು ಚಿರು ತನ್ನ ತಂದೆಯ ಕನಸನ್ನು ಹೇಗೆ ಈಡೇರಿಸುತ್ತಾನೆ ಎಂಬುದೇ ಈ ಸಿನಿಮಾದ ಕುತೂಹಲ.
ರಿಶಿವ್ ವೆಂಚರ್ಸ್ ನಿರ್ಮಾಣ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲಕ್ಷ್ಮಿ ನರಸಿಂಹ ಎಂ. ನಿರ್ದೇಶನ ಮಾಡಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಹಲವಾರು ಸಿನಿಮಾ ಗಳಿಗೆ ಕೆಲಸ ಮಾಡಿದ್ದು, ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ರಂಗಭೂಮಿ ನಟನೆಯಲ್ಲೂ ಸಕ್ರಿಯವಾಗಿರುವ
ಲಕ್ಷ್ಮಿ ನರಸಿಂಹ ಎಂ.
"ಬೆಲ್ ಬಟನ್" ಚಿತ್ರದ ನಿರ್ದೇಶನದ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಇಡೀ ಕುಟುಂಬದವರೊಡನೆ ಕುಳಿತು ನೋಡಬಹುದಾದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.
ಚಿತ್ರದ ತಾರಾಗಣದಲ್ಲಿ ಸಚಿನ್ ಜೈ, ಲಕ್ಷ್ಮಿ ನರಸಿಂಹ, ನಿಸರ್ಗ ಅಪ್ಪಣ್ಣ, ಚೈತ್ರ ಗೌಡ, ಪ್ರಮೀಳಾ ಸುಬ್ರಹ್ಮಣ್ಯ, ನೊಣವಿನಕೆರೆ ರಾಮಕೃಷ್ಣಯ್ಯ,
ಭಾನು ಪ್ರಕಾಶ್, ನಿಖಿತಾ ಶೆಟ್ಟಿ, ಅಭಿಗುರು, ವೇಣು, ಪವನ್ ರಿಚ್ಚಿ, ತರುಣ್, ಇತರರು ನಟಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಲಕ್ಕಿ ಛಾಯಾಗ್ರಹಣ, ಆಕಾಶ್ ಮಹೇಂದ್ರಕರ್ ಸಂಕಲನ, ವಿಶಾಲ್ ಆಲಾಪ್ ಸಂಗೀತ, ಮದನ್ ಮ್ಯಾಡಿ ಹಿನ್ನೆಲೆ ಸಂಗೀತ, ದೇವು ಪ್ರೊಡಕ್ಷನ್ ಡಿಸೈನರ್ , ಸುಪ್ರೀಮ್ ಸುಬ್ಬು ಸಾಹಸ ನಿರ್ದೇಶಕರಾಗಿ, ವೀರೇಶ್ ಮೇಕಪ್ ಹಾಗೂ ಜೇಕಬ್ ಮ್ಯಾಥ್ಯೂ ಬಣ್ಣದ ಸಂಯೋಜನೆ ಮಾಡಿದ್ದಾರೆ. ನಿರ್ದೇಶನ ತಂಡದಲ್ಲಿ ಧುಷ್ಯಂತ್, ಲಕ್ಷ್ಮೀಶ್, ದೀಪಕ್, ತರುಣ್, ಪ್ರದೀಪ್, ಪವನ್, ಸಿದ್ಧಾರ್ಥ್, ಅಣ್ಣೇಗೌಡ ಕಾರ್ಯ ನಿರ್ವಹಿಸಿದ್ದು, ಸುಧೀಂದ್ರ ವೆಂಕಟೇಶ್, ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಿಗಿ ಪಿ.ಆರ್.ಒ ಆಗಿದ್ದಾರೆ. ಕನ್ನಡ ಚಿತ್ರರಂಗದ ಈ ಹೊಸ ಪ್ರಯತ್ನಕ್ಕೆ ಮಾಧ್ಯಮ ಮಿತ್ರರು ಹಾಗೂ ಸಮಸ್ತ ಕನ್ನಡಿಗರ ಪ್ರೀತಿ, ಪ್ರೋತ್ಸಾಹ ಸದಾ ಇರಲಿ ಎಂದು ಚಿತ್ರತಂಡ ಕೋರಿದೆ.
**
ಡಾ.ಪ್ರಭು ಗಂಜಿಹಾಳ
ಮೊ-9448775346



Post a Comment